‘ಡಾನ್ 3’ ಕಥೆ ಕೇಳಲಿದ್ದಾರೆ ಶಾರುಖ್ ಖಾನ್​; ಯಶಸ್ವಿ ಫ್ರಾಂಚೈಸಿಯಲ್ಲಿ ಮೂಡಿ ಬರಲಿದೆ ಹೊಸ ಸಿನಿಮಾ?

ನಿರ್ದೇಶನದಲ್ಲಿ ಫರ್ಹಾನ್ ಅಖ್ತರ್ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಅಲ್ಲೊಂದು ಇಲ್ಲೊಂದು ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಾರೆ. ‘ಡಾನ್ 2’ ಬಳಿಕ ಅವರು ಯಾವುದೇ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಿಲ್ಲ.

‘ಡಾನ್ 3’ ಕಥೆ ಕೇಳಲಿದ್ದಾರೆ ಶಾರುಖ್ ಖಾನ್​; ಯಶಸ್ವಿ ಫ್ರಾಂಚೈಸಿಯಲ್ಲಿ ಮೂಡಿ ಬರಲಿದೆ ಹೊಸ ಸಿನಿಮಾ?
ಫರ್ಹಾನ್​​-ಶಾರುಖ್
Edited By:

Updated on: Jun 20, 2022 | 6:28 PM

ಶಾರುಖ್ ಖಾನ್ (Shah Rukh Khan) ಅವರ ನಟನೆಯ ‘ಡಾನ್’ ಹಾಗೂ ‘ಡಾನ್​ 2’  (Don 2) ಸಖತ್ ಹಿಟ್ ಆದ ಚಿತ್ರಗಳು. ಈ ಚಿತ್ರ ಶಾರುಖ್ ಕರಿಯರ್​ನಲ್ಲಿ ಮಹತ್ವದ ಪಾತ್ರ ವಹಿಸಿದೆ. ‘ಡಾನ್ 2’ ತೆರೆಕಂಡು 11 ವರ್ಷಗಳೇ ಕಳೆದಿವೆ. ಇತ್ತೀಚೆಗೆ ಶಾರುಖ್ ಖಾನ್ ಸತತ ಸೋಲು ಕಾಣುತ್ತಿರುವುದರಿಂದ ಈ ಯಶಸ್ವಿ ಫ್ರಾಂಚೈಸಿಯ ಮೂರನೇ ಸಿನಿಮಾದಲ್ಲಿ ನಟಿಸಿ ಗೆಲುವು ಕಾಣುವ ತವಕದಲ್ಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಈಗ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿದೆ. ಶೀಘ್ರದಲ್ಲೇ ಈ ಸಿನಿಮಾದ ಕಥೆಯನ್ನು ಶಾರುಖ್ ಕೇಳಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್ ಖಾನ್ ಇಂಟರ್​ನ್ಯಾಷನಲ್​ ಡಾನ್ ಆಗಿ ‘ಡಾನ್​’ ಸರಣಿಯಲ್ಲಿ ಮಿಂಚಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ನಟ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಫರ್ಹಾನ್ ಅಖ್ತರ್ ಅವರು ‘ಡಾನ್​’ ಹಾಗೂ ‘ಡಾನ್ 2’ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಿದ್ದರು. ಈಗ 11 ವರ್ಷಗಳ ಗ್ಯಾಪ್​ ತೆಗೆದುಕೊಂಡು ಅವರು ‘ಡಾನ್​ 3’ಗೆ ಕಥೆ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ, ಕಥೆ ಹೇಳಲಿದ್ದಾರೆ ಎಂದು ವರದಿ ಆಗಿದೆ.

ನಿರ್ದೇಶನದಲ್ಲಿ ಫರ್ಹಾನ್ ಅಖ್ತರ್ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಅಲ್ಲೊಂದು ಇಲ್ಲೊಂದು ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಾರೆ. ‘ಡಾನ್ 2’ ಬಳಿಕ ಅವರು ಯಾವುದೇ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಿಲ್ಲ. ಹೀಗಾಗಿ, ಒಂದೊಳ್ಳೆಯ ಕಥೆ ಮೂಲಕ ಅವರು ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ
ಶಾರುಖ್ ಖಾನ್​ಗೆ ಇದೆ ವಿಚಿತ್ರ ಹವ್ಯಾಸ; ಇದಕ್ಕಾಗಿ ಅವರು ಖರ್ಚು ಮಾಡಿದ್ದು 40 ಲಕ್ಷ ರೂಪಾಯಿ
ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಆಲಿಯಾ ಭಟ್; ಇಲ್ಲಿದೆ ಫೋಟೋ
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ಬಹಳ ಸಮಯದಿಂದ ಫರ್ಹಾನ್ ಅಖ್ತರ್ ತಂಡ ‘ಡಾನ್ 3’ ಕಥೆಯನ್ನು ಸಿದ್ಧಪಡಿಸುತ್ತಿತ್ತು. ಈಗ ಈ ಚಿತ್ರದ ಕಥೆಗೆ ಒಂದು ರೂಪ ಸಿಕ್ಕಿದೆ. ಶಾರುಖ್ ಕಥೆ ಒಪ್ಪಿದ ನಂತರ ಸ್ಕ್ರಿಪ್ಟ್ ಬರೆದು ಶೂಟಿಂಗ್ ಆರಂಭಿಸಲು ಪ್ಲ್ಯಾನ್ ರೂಪಿಸಲಾಗಿದೆ. ಇದಕ್ಕೆ ಇನ್ನೂ ಒಂದು ವರ್ಷ ಬೇಕಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ಶಾರುಖ್ ಸದ್ಯ ಸಖತ್ ಬ್ಯುಸಿ ಇದ್ದಾರೆ. ಅವರ ನಟನೆಯ ‘ಡಂಕಿ’, ‘ಜವಾನ್​’ ಹಾಗೂ ‘ಪಠಾಣ್​’ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಈ ಮೂರು ಚಿತ್ರಗಳ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ‘ಡಾನ್ 3’ ಸೆಟ್ಟೇರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.