ಬಿಡುಗಡೆಯಾಗಿ 10 ದಿನ ಕಳೆದಿದ್ದರೂ ‘ಪಠಾಣ್’ (Pathan Movie) ಸಿನಿಮಾದ ಅಬ್ಬರ ಕಡಿಮೆ ಆಗಿಲ್ಲ. ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಎರಡನೇ ವೀಕೆಂಡ್ನಲ್ಲೂ ಜನರು ಮುಗಿಬಿದ್ದು ‘ಪಠಾಣ್’ ನೋಡುತ್ತಿದ್ದಾರೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಶೀಘ್ರದಲ್ಲೇ 400 ಕೋಟಿ ರೂಪಾಯಿ ಕಲೆಕ್ಷನ್ (Pathan Movie Box Office Collection) ಮಾಡಲಿದೆ. ವಿಶ್ವಾದ್ಯಂತ 700 ಕೋಟಿ ರೂಪಾಯಿ ಹರಿದುಬಂದಿದೆ. ಇದರಿಂದಾಗಿ ನಟ ಶಾರುಖ್ ಖಾನ್ ಅವರ ವೃತ್ತಿಜೀವನಕ್ಕೆ ದೊಡ್ಡ ಬೂಸ್ಟ್ ಸಿಕ್ಕಂತೆ ಆಗಿದೆ. ಈ ಚಿತ್ರದ ಗೆಲುವಿನ ಖುಷಿಯಲ್ಲಿರುವ ಶಾರುಖ್ ಖಾನ್ (Shah Rukh Khan) ಅವರು ಅಭಿಮಾನಿಗಳ ಜೊತೆ ಟ್ವಿಟರ್ನಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಪಠಾಣ್ ಸಿನಿಮಾದ ನಿಜವಾದ ಕಲೆಕ್ಷನ್ ಬಗ್ಗೆ ವ್ಯಕ್ತಿಯೊಬ್ಬರು ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಶಾರುಖ್ ಖಾನ್ ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ.
‘ಪಠಾಣ್ ಸಿನಿಮಾದ ಕಲೆಕ್ಷನ್ ಇಷ್ಟೇನಾ’ ಎಂದು ರಾಜ್ ಶ್ರೀವಾಸ್ತವ ಎಂಬ ವ್ಯಕ್ತಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್ ಖಾನ್ ಅವರು ಊಹಿಸಲಾಗದಂತಹ ಉತ್ತರ ನೀಡಿದ್ದಾರೆ. ‘5 ಸಾವಿರ ಕೋಟಿ ಪ್ರೀತಿ. 3 ಸಾವಿರ ಕೋಟಿ ಮೆಚ್ಚುಗೆ. 3250 ಕೋಟಿ ಅಪ್ಪುಗೆ. 2 ಬಿಲಿಯನ್ ನಗು.. ಇನ್ನೂ ಎಣಿಸಲಾಗುತ್ತಿದೆ. ನಿನ್ನ ಅಕೌಂಟೆಂಟ್ ಏನು ಹೇಳುತ್ತಿದ್ದಾರೆ?’ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Shah Rukh Khan: ‘ಪಠಾಣ್’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್ ಖಾನ್ ಅಭಿಮಾನಿಗಳು
‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅವರಿಬ್ಬರು ಒಟ್ಟಾಗಿ ನಟಿಸಿದ 4ನೇ ಸಿನಿಮಾ ಇದು. ಈ ಹಿಂದೆ ‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್’, ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾಗಳು ಹಿಟ್ ಆಗಿದ್ದವು. ಈಗ ಈ ಜೋಡಿಯ ‘ಪಠಾಣ್’ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಅವರ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.
5000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH
— Shah Rukh Khan (@iamsrk) February 4, 2023
ಶಾರುಖ್ ಖಾನ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಜೋರಾಗಿದೆ. ಕಾಲಿವುಡ್ನ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಶಾರುಖ್ ಕೈ ಜೋಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ನಲ್ಲಿ ‘ಜವಾನ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರ ಜೂನ್ 2ರಂದು ಬಿಡುಗಡೆ ಆಗಲಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಸಿನಿಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.