‘ಕಂಗ್ರಾಜುಲೇಷನ್’ ಹೇಳಿದ ‘3 ಈಡಿಯಟ್ಸ್​’; ಎಡವಟ್ಟು ಮಾಡಿಕೊಂಡ ರಾಜು ರಸ್ತೋಗಿ

ಶರ್ಮನ್ ಜೋಶಿ ಅವರ ನಟನೆಯ ‘ಕಂಗ್ರ್ಯಾಜ್ಯುಲೇಷನ್​’ ಸಿನಿಮಾ ಶುಕ್ರವಾರ (ಫೆಬ್ರವರಿ 3) ರಿಲೀಸ್ ಆಗಿದೆ. ಈ ಚಿತ್ರದ ಪ್ರಮೋಷನ್​ಗಾಗಿ ಈ ಮೂವರು ಒಂದಾಗಿದ್ದಾರೆ.

‘ಕಂಗ್ರಾಜುಲೇಷನ್’ ಹೇಳಿದ ‘3 ಈಡಿಯಟ್ಸ್​’; ಎಡವಟ್ಟು ಮಾಡಿಕೊಂಡ ರಾಜು ರಸ್ತೋಗಿ
ಮತ್ತೆ ಒಂದಾದ 3 ಈಡಿಯಟ್ಸ್​
Follow us
ರಾಜೇಶ್ ದುಗ್ಗುಮನೆ
|

Updated on: Feb 04, 2023 | 2:07 PM

ರಾಜ್​ಕುಮಾರ್ ಹಿರಾನಿ (Rajkumar Hirani) ನಿರ್ದೇಶನದ ‘3 ಈಡಿಯಟ್ಸ್​’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಆಮಿರ್ ಖಾನ್, ಆರ್​. ಮಾಧವನ್ ಹಾಗೂ ಶರ್ಮನ್ ಜೋಶಿ ನಟಿಸಿದ್ದರು. ಇವರ ಕೆಮಿಸ್ಟ್ರಿ ಸಿನಿಮಾದಲ್ಲಿ ಕೆಲಸ ಮಾಡಿತ್ತು. ಮೂವರು ಒಂದೆಡೆ ಸೇರಿದರೆ ಎಲ್ಲರೂ ಪ್ರೀತಿಯಿಂದ ‘3 ಈಡಿಯಟ್ಸ್​’ (3 Idiots Movie) ಎಂದೇ ಕರೆಯುತ್ತಾರೆ. ಈ ಮೂವರು ಈಗ ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್​ಗಳು ಬರುತ್ತಿವೆ.

ಶರ್ಮನ್ ಜೋಶಿ ಅವರ ನಟನೆಯ ‘ಕಂಗ್ರಾಜುಲೇಷನ್​’ ಸಿನಿಮಾ ಶುಕ್ರವಾರ (ಫೆಬ್ರವರಿ 3) ರಿಲೀಸ್ ಆಗಿದೆ. ಈ ಚಿತ್ರದ ಪ್ರಮೋಷನ್​ಗಾಗಿ ಈ ಮೂವರು ಒಂದಾಗಿದ್ದಾರೆ. ಶರ್ಮನ್ ಅವರು ಒಂದು ಕಡೆ ನಿಂತು ತಮ್ಮ ಸಿನಿಮಾ ಬಗ್ಗೆ ಹೇಳುತ್ತಿರುತ್ತಾರೆ. ಆಗ ಅಲ್ಲಿಗೆ ಮಾಧವನ್ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಶರ್ಮನ್ ಅವರು ಕಂಗ್ರ್ಯಾಜ್ಯುಲೇಷನ್ ಎನ್ನುತ್ತಾರೆ. ಯಾವುದಕ್ಕೆ ಕಂಗ್ರ್ಯಾಜ್ಯುಲೇಷನ್ ಎಂದು ಮಾಧವನ್ ಪ್ರಶ್ನೆ ಮಾಡುತ್ತಾರೆ. ತಾವು ನಟಿಸಿದ ಸಿನಿಮಾ ಹೆಸರು ಎಂದು ವಿವರಿಸುತ್ತಾರೆ ಶರ್ಮನ್. ನಂತರ ಆಮಿರ್ ಖಾನ್ ಕೂಡ ಇವರ ಜತೆ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ
Image
ಐದು ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; ಭಾರತದಲ್ಲಿ ಎಷ್ಟು ಕಲೆಕ್ಷನ್​?
Image
ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

ಈ ವಿಡಿಯೋನ ಶರ್ಮನ್ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ನಟ ಆಮಿರ್​ ಖಾನ್​ಗೆ ಟ್ಯಾಗ್ ಮಾಡುವ ಬದಲು ಬೇರೆ ಆಮಿರ್ ಖಾನ್​ಗೆ ಶರ್ಮನ್​ ಟ್ಯಾಗ್ ಮಾಡಿದ್ದಾರೆ. ಇದನ್ನು ಗಮನಿಸಿದ ಅನೇಕರು ಶರ್ಮನ್ ಅವರನ್ನು ಟೀಕೆ ಮಾಡಿದ್ದಾರೆ. ‘ನೀವು ತಪ್ಪಾದ ಆಮಿರ್​ಗೆ ಟ್ಯಾಗ್ ಮಾಡಿದ್ದೀರಿ ರಾಜು ರಸ್ತೋಗಿ’ ಎಂದು ಅನೇಕರು ಬರೆದುಕೊಂಡಿದ್ದಾರೆ. ‘3 ಈಡಿಯಟ್ಸ್​’ ಚಿತ್ರದಲ್ಲಿ ಶರ್ಮನ್ ಅವರು ರಾಜು ಹೆಸರಿನ ಪಾತ್ರ ಮಾಡಿದ್ದರು.

ಇದನ್ನೂ ಓದಿ: ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್​ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ?

ಆಮಿರ್ ಖಾನ್​ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದಗ್ಯೂ ಅವರು ಬಣ್ಣದ ಲೋಕದ ನಂಟು ಕಳೆದುಕೊಂಡಿಲ್ಲ. ಸಿನಿಮಾ ರಂಗದವರ ಜತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಇತ್ತೀಚೆಗೆ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದರು. ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ಆಮಿರ್ ಬಂಡವಾಳ ಹೂಡುತ್ತಾರೆ ಎನ್ನುವ ಸುದ್ದಿ ಹರಡಿದೆ. ಆದರೆ, ಆಮಿರ್ ಕಡೆಯಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ