ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಶಾರುಖ್​ ಖಾನ್​

ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿಗಳು ದೇವರ ಮೊರೆ ಹೋಗುವುದು ಕಾಮನ್​. ಶಾರುಖ್ ಖಾನ್​ ಕೂಡ ಇದಕ್ಕೆ ಹೊರತಲ್ಲ. ‘ಡಂಕಿ’ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇದ್ದು, ಅನೇಕ ದೇವಸ್ಥಾನಗಳಿಗೆ ಶಾರುಖ್​ ಖಾನ್​ ತೆರಳುತ್ತಿದ್ದಾರೆ.

ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಶಾರುಖ್​ ಖಾನ್​
ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಶಾರುಖ್​ ಖಾನ್​

Updated on: Dec 15, 2023 | 6:35 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಎಲ್ಲ ಧರ್ಮದ ಮೇಲೆ ನಂಬಿಕೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ವೈಷ್ಣೋ ದೇವಿ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದಿದ್ದರು. ಈಗ ಶಿರಡಿ ಸಾಯಿ ಬಾಬಾ (Shirdi Sai Baba) ಮಂದಿರಕ್ಕೆ ಭೇಟಿ ನೀಡಿದ್ದಾರೆ. ಅವರ ಜೊತೆ ಪುತ್ರಿ ಸುಹಾನಾ ಖಾನ್​ ಕೂಡ ಬಂದಿದ್ದಾರೆ. ‘ಡಂಕಿ’ ಸಿನಿಮಾ (Dunki Movie) ಬಿಡುಗಡೆಗೂ ಮುನ್ನ ಶಾರುಖ್​ ಖಾನ್​ ಅವರು ಶಿರಡಿ ಸಾಯಿ ಬಾಬಾನ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗಿವೆ. ‘ಡಂಕಿ’ ಸಿನಿಮಾ ಡಿಸೆಂಬರ್​ 21ರಂದು ಬಿಡುಗಡೆ ಆಗಲಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿಗಳು ದೇವರ ಮೊರೆ ಹೋಗುವುದು ಕಾಮನ್​. ಶಾರುಖ್ ಖಾನ್​ ಕೂಡ ಇದಕ್ಕೆ ಹೊರತಲ್ಲ. ‘ಡಂಕಿ’ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೂಪರ್​ ಹಿಟ್​ ಆದರೆ ಶಾರುಖ್​ ಖಾನ್​ ಅವರಿಗೆ 2023ರಲ್ಲಿ ಹ್ಯಾಟ್ರಿಕ್​ ಗೆಲುವು ಸಿಕ್ಕಂತೆ ಆಗಲಿದೆ. ಈ ವರ್ಷ ತೆರೆಕಂಡ ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳು ಬ್ಲಾಕ್​ ಬಸ್ಟರ್​ ಹಿಟ್​ ಆಗಿವೆ.

SRK visits Shirdi Sai Baba temple with Suhana
byu/Legitimate-Display27 inBollyBlindsNGossip

ಶಾರುಖ್​ ಖಾನ್​ ರೀತಿಯೇ ಅವರ ಮಗಳು ಸುಹಾನಾ ಖಾನ್​ ಕೂಡ ಹಿಂದೂ ಮತ್ತು ಮುಸ್ಲಿಂ ಧರ್ಮವನ್ನು ಪಾಲಿಸುತ್ತಾರೆ. ಇತ್ತೀಚೆಗೆ ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆ ಆಯಿತು. ಆ ಸಿನಿಮಾ ನೇರವಾಗಿ ‘ನೆಟ್​ಫ್ಲಿಕ್ಸ್​’ ಒಟಿಟಿ ಮೂಲಕ ರಿಲೀಸ್​ ಆಯಿತು. ಸುಹಾನಾ ಖಾನ್​ ಅವರು ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಅವರಿಗೆ ಈಗಾಗಲೇ ಅನೇಕ ಅವಕಾಶಗಳು ಬರುತ್ತಿವೆ.

ಇದನ್ನೂ ಓದಿ: ‘ಡಂಕಿ’ ಚಿತ್ರದ ರಿಲೀಸ್​ ಟೆನ್ಷನ್​ ಮರೆತು ಮಾಲ್ಡೀವ್ಸ್​ಗೆ ತೆರಳಿದ ತಾಪ್ಸಿ ಪನ್ನು

ಹಲವು ಕಾರಣಗಳಿಂದ ‘ಡಂಕಿ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ತಾಪ್ಸಿ ಪನ್ನು ಅವರು ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ್ದಾರೆ. ವಿಕ್ಕಿ ಕೌಶಲ್​, ಬೋಮನ್​ ಇರಾನಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ‘ಡಂಕಿ’ ತೆರೆಕಂಡ ಮರುದಿನ, ಅಂದರೆ ಡಿಸೆಂಬರ್​ 22ರಂದು ‘ಸಲಾರ್​’ ರಿಲೀಸ್​ ಆಗಲಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ಸ್ಪರ್ಧೆ ಏರ್ಪಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us