ಬಾಲಿವುಡ್ ಹೀರೋ ಜೊತೆ ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಲೀಕ್

ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್, ಕೃತಿ ಸನನ್ ಅವರು ಇಟಲಿಯಲ್ಲಿ ಇದ್ದಾರೆ. ಅವರ ಜೊತೆ ನಿರ್ದೇಶಕ ಹೋಮಿ ಅದಜಾನಿಯಾ ಕೂಡ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ಕಾಕ್​ಟೇಲ್ 2’ ಸಿನಿಮಾಗೆ ಇಟಲಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣದ ವಿಡಿಯೋ ಲೀಕ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ಬಾಲಿವುಡ್ ಹೀರೋ ಜೊತೆ ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಲೀಕ್
Shahid Kapoor, Rashmika Mandanna, Kriti Sanon

Updated on: Sep 26, 2025 | 6:39 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಅನಿಮಲ್’, ‘ಛಾವ’ ಸಿನಿಮಾಗಳ ಯಶಸ್ಸಿನ ಬಳಿಕ ಅವರಿಗೆ ಇದ್ದ ಬೇಡಿಕೆ ಡಬಲ್ ಆಯಿತು. ಹಾಗಾಗಿ ಬಾಲಿವುಡ್​ ಮಂದಿಗೆ ರಶ್ಮಿಕಾ ಮಂದಣ್ಣ ಫೇವರಿಟ್ ಆಗಿದ್ದಾರೆ. ಈಗ ಅವರು ಶಾಹಿದ್ ಕಪೂರ್ (Shahid Kapoor) ಜೊತೆ ಇರುವ ವಿಡಿಯೋ ಲೀಕ್ ಆಗಿದೆ. ಹಾಗಂತ ಇದು ಖಾಸಗಿ ಬದುಕಿನ ವಿಡಿಯೋ ಆಗಲ್ಲ. ಸಿನಿಮಾ ಶೂಟಿಂಗ್ ಸಂದರ್ಭದ ವಿಡಿಯೋ. ಹೌದು, ‘ಕಾಕ್​ಟೇಲ್​ 2’ (Cocktail 2) ಸಿನಿಮಾದಲ್ಲಿ ನಟಿಸುತ್ತಿರುವ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನನ್ ಅವರ ಚಿತ್ರೀಕರಣದ ವಿಡಿಯೋ ಲೀಕ್ ಆಗಿದೆ.

ಹೋಮಿ ಅದಜಾನಿಯಾ ಅವರು ‘ಕಾಕ್​ಟೇಲ್ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇಟಲಿಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ, ಕೃತಿ ಸನನ್ ಮತ್ತು ಶಾಹಿದ್ ಕಪೂರ್ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಸಾಧ್ಯವಾದಷ್ಟು ಗೌಪ್ಯವಾಗಿ ಶೂಟಿಂಗ್ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಹಾಗಿದ್ದರೂ ಕೂಡ ಒಂದು ವಿಡಿಯೋ ಲೀಕ್ ಆಗಿದೆ.

ಇಟಲಿಯ ಸಿಸಿಲಿಯಲ್ಲಿ ‘ಕಾಕ್​ಟೇಲ್ 2’ ಸಿನಿಮಾದ ಸಾಂಗ್ ಶೂಟಿಂಗ್ ಮಾಡಲಾಗುತ್ತಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಕೈ-ಕೈ ಹಿಡಿದು ಬರುತ್ತಿರುವ ದೃಶ್ಯ ಲೀಕ್ ಆಗಿದೆ. ಇನ್ಮುಂದೆ ಚಿತ್ರತಂಡದವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಾಂಗ್ ಮಾತ್ರವಲ್ಲದೇ ಸಿನಿಮಾದ ಅನೇಕ ದೃಶ್ಯಗಳನ್ನು ಸಿಸಿಲಿಯಲ್ಲೇ ಶೂಟ್ ಮಾಡಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ:

‘ಕಾಕ್​ಟೇಲ್’ ಸಿನಿಮಾ 2012ರಲ್ಲಿ ಬಿಡುಗಡೆ ಆಗಿತ್ತು. ಅದಕ್ಕೂ ಹೋಮಿ ಅದಜಾನಿಯಾ ಅವರೇ ನಿರ್ದೇಶನ ಮಾಡಿದ್ದರು. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ಡಯಾನಾ ಪೆಂಟಿ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈಗ ಶಾಹಿದ್ ಕಪೂರ್, ಕೃತಿ ಸನನ್ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ಸೀಕ್ವೆಲ್​​ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ಭಾವಿ ಅತ್ತೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ರಶ್ಮಿಕಾ ಮಂದಣ್ಣ

ಇಟಲಿಯಲ್ಲಿ ಶೂಟಿಂಗ್ ಮುಗಿಸಿದ ಬಳಿಕ ಅಕ್ಟೋಬರ್​​ನಲ್ಲಿ ‘ಕಾಕ್​ಟೇಲ್​ 2’ ತಂಡ ಮುಂಬೈಗೆ ಮರಳಲಿದೆ. ದೀಪಾವಳಿ ಹಬ್ಬ ಮುಗಿದ ಬಳಿಕ 2ನೇ ಹಂತದ ಶೂಟಿಂಗ್ ಶುರು ಆಗಲಿದೆ. 2026ರಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದಲ್ಲದೇ ಇನ್ನೂ ಹಲವು ಸಿನಿಮಾದ ಅವಕಾಶಗಳು ರಶ್ಮಿಕಾ ಮಂದಣ್ಣ ಅವರಿಗೆ ಸಿಗುತ್ತಿವೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​​ಗಳಿಗೆ ಅವರು ಪ್ರಚಾರ ರಾಯಭಾರಿ ಕೂಡ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:56 pm, Fri, 26 September 25