ನಟ ಶಾಹಿದ್ ಕಪೂರ್ (Shahid Kapoor) ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಪತ್ನಿ ಮತ್ತು ಮಕ್ಕಳ ಜೊತೆ ಅವರು ಹೆಚ್ಚು ಕಾಲ ಕಳೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಮುಂಬೈನ ರೆಸ್ಟೋರೆಂಟ್ಗೆ ಭೇಟಿ ನೀಡುತ್ತಾರೆ. ಆಗೆಲ್ಲ ಅವರ ಫೋಟೋ ತೆಗೆಯಲು ಪಾಪರಾಜಿಗಳು (Paparazzi) ಮುಗಿ ಬೀಳುತ್ತಾರೆ. ಇದರಿಂದ ಕೆಲವೊಮ್ಮೆ ಶಾಹಿದ್ ಕಪೂರ್ ಅವರಿಗೆ ಕಿರಿಕಿರಿ ಆಗುತ್ತದೆ. ಈಗ ಅದೇ ರೀತಿ ಆಗಿದೆ. ಪತ್ನಿ ಮೀರಾ ರಜಪೂತ್ (Mira Rajput) ಜೊತೆ ಬಂದ ಶಾಹಿದ್ ಕಪೂರ್ ಅವರು ಪಾಪರಾಜಿಗಳ ಮೇಲೆ ಗರಂ ಆಗಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ರೆಸ್ಟೋರೆಂಟ್ವೊಂದರಿಂದ ಹೊರಗೆ ಬರುವಾಗ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಆಗ ಶಾಹಿದ್ ಕಪೂರ್ ಅವರಿಗೆ ಸಖತ್ ಕೋಪ ಬಂದಿದೆ. ಪಾಪರಾಜಿಗಳ ಮೇಲೆ ಅವರು ಕಿಡಿಕಾರಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಶಾಹಿದ್ ಕಪೂರ್ ಪರ ಕಮೆಂಟ್ ಮಾಡಿದ್ದು, ಇನ್ನೂ ಕೆಲವರು ಪಾಪರಾಜಿಗಳಿಗೆ ಸಪೋರ್ಟ್ ಮಾಡಿದ್ದಾರೆ.
ಪತ್ನಿಯ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಶಾಹಿದ್ ಕಪೂರ್ ಕೂಗಾಡಿದ್ದಾರೆ. ‘ನೀವು ಇದನ್ನು ನಿಲ್ಲಿಸುತ್ತೀರಾ? ದಯವಿಟ್ಟು ಸರಿಯಾಗಿ ನಡೆದುಕೊಳ್ಳಿ’ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ. ‘ಯಶಸ್ಸು ಸಿಕ್ಕ ಬಳಿಕ ಶಾಹಿದ್ ಕಪೂರ್ಗೆ ಆ್ಯಟಿಟ್ಯೂಡ್ ಬಂದಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ನಿಜ ಜೀವನದಲ್ಲೂ ಕಬೀರ್ ಸಿಂಗ್ ಪಾತ್ರದ ರೀತಿ ಮಾಡುತ್ತಿದ್ದಾರೆ’ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್ ಪ್ರತಿಕ್ರಿಯೆ
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು 2015ರ ಜುಲೈನಲ್ಲಿ ಮದುವೆ ಆದರು. ಅದಕ್ಕೂ ಮುನ್ನ ಕರೀನಾ ಕಪೂರ್ ಜೊತೆ ಶಾಹಿದ್ ಕಪೂರ್ ಬ್ರೇಕಪ್ ಮಾಡಿಕೊಂಡಿದ್ದರು. ಈಗ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿಗೆ ಏಳು ವರ್ಷದ ಮಿಶಾ ಎಂಬ ಪುತ್ರಿ ಹಾಗೂ ನಾಲ್ಕು ವರ್ಷದ ಝೈನ್ ಎಂಬ ಪುತ್ರ ಇದ್ದಾನೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗ ಶಾಹಿದ್ ಕಪೂರ್ ಅವರು ‘ದೇವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.