ಬಾಲಿವುಡ್​ಗೆ ಕಾಡಿದ ಕೊವಿಡ್​ ಭಯ; ಖ್ಯಾತ ನಟನ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ

ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಇನ್ನೂ ಕೆಲವು ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ.

ಬಾಲಿವುಡ್​ಗೆ ಕಾಡಿದ ಕೊವಿಡ್​ ಭಯ; ಖ್ಯಾತ ನಟನ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ
ಶಾಹಿದ್​ ಕಪೂರ್
Edited By:

Updated on: Dec 28, 2021 | 8:51 PM

ಕೊರೊನಾ ಭಯ ಮತ್ತೆ ಹೆಚ್ಚಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊವಿಡ್​ ರೂಪಾಂತರಿ ಒಮಿಕ್ರಾನ್​ ಪ್ರಭಾವ ಕೂಡ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದ ಚಿತ್ರರಂಗದಲ್ಲಿ ಮತ್ತೆ ಅನಿಶ್ಚಿತತೆ ಕಾಡುವ ಭಯ ಎದುರಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ರಿಲೀಸ್​ ಆಗಬೇಕಿದ್ದ ಚಿತ್ರಗಳು ಈಗ ಮುಂದೂಡಲ್ಪಡುತ್ತಿವೆ. ಬಾಲಿವುಡ್​ನ ಖ್ಯಾತ ಹೀರೋ ಶಾಹಿದ್​ ಕಪೂರ್​ ಸಿನಿಮಾ ಕೂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಸಿನಿಮಾ ರಿಲೀಸ್​ಗೆ ಎರಡು ದಿನ ಬಾಕಿ ಇರುವಾಗ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಅಲ್ಲು ಅರವಿಂದ್ ಘೋಷಣೆ ಮಾಡಿದ್ದಾರೆ. 

ತೆಲುಗಿನ ‘ಅರ್ಜುನ್​ ರೆಡ್ಡಿ’ ಚಿತ್ರವನ್ನು​ ‘ಕಬೀರ್​ ಸಿಂಗ್’ ಆಗಿ ಹಿಂದಿಗೆ ರಿಮೇಕ್​ ಮಾಡಲಾಗಿತ್ತು. ಇದು ಶಾಹಿದ್​ ಕಪೂರ್​ಗೆ ದೊಡ್ಡ ಮಟ್ಟದಲ್ಲಿ ಹಿಟ್​ ನೀಡಿತ್ತು. ಆ ಬಳಿಕ ನಾನಿ ನಟನೆಯ​ ‘ಜೆರ್ಸಿ’ ಚಿತ್ರದ ರಿಮೇಕ್​ನಲ್ಲಿ ಶಾಹಿದ್​ ಕಪೂರ್ ನಟಿಸಿದ್ದಾರೆ. ಇದಕ್ಕೆ ಹಿಂದಿಯಲ್ಲೂ ‘ಜೆರ್ಸಿ’ ಎಂದು ಇಡಲಾಗಿದೆ. ಈ ಸಿನಿಮಾ ಕ್ರಿಕೆಟರ್​ ಓರ್ವನ ಕಥೆಯನ್ನು ಹೇಳುತ್ತಿದೆ. ತೆಲುಗಿನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಾನಿ ಹಾಗೂ ಶ್ರದ್ಧಾ ಶ್ರೀನಾಥ್​ ತೆಲುಗಿನಲ್ಲಿ ಬಣ್ಣ ಹಚ್ಚಿದ್ದರು. ಹಿಂದಿ ರಿಮೇಕ್​ನಲ್ಲಿ  ಶಾಹಿದ್​ ಕ್ರಿಕೆಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಇನ್ನೂ ಕೆಲವು ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಇದೇ ನಿಯಮ ಜಾರಿಗೆ ಬಂದರೂ ಅಚ್ಚರಿ ಏನಿಲ್ಲ. ಹೀಗಾಗಿ, ‘ಜೆರ್ಸಿ’ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ದಿಲ್​ ರಾಜು ಪ್ರೊಡಕ್ಷನ್​ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಲ್ಲು ಅರವಿಂದ್​ ಇದಕ್ಕೆ ಕೊಲಾಬರೇಷನ್​ ಮಾಡಿಕೊಂಡಿದ್ದಾರೆ. ಸಿನಿಮಾ ರಿಲೀಸ್​ ಮುಂದೂಡಲ್ಪಟ್ಟ ಬಗ್ಗೆ ಅವರೇ ಘೋಷಣೆ ಮಾಡಿದ್ದಾರೆ.

‘ಜೆರ್ಸಿ’ ಸಿನಿಮಾವನ್ನು ಗೌತಮ್​ ಹಿಂದಿಗೆ ರಿಮೇಕ್​ ಮಾಡಿದ್ದಾರೆ. ಪಂಕಜ್​ ಕಪೂರ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೃನಾಲ್​ ಠಾಕೂರ್​ ಸಿನಿಮಾಗೆ ನಾಯಕಿ. ಟಾಲಿವುಡ್​ನಲ್ಲಿ ತೆರೆಕಂಡ ‘ಅರ್ಜುನ್​ ರೆಡ್ಡಿ’ ಸಿನಿಮಾ ಬಾಲಿವುಡ್​ನಲ್ಲಿ ‘ಕಬೀರ್​ ಸಿಂಗ್’​ ಆಗಿ ತೆರೆಗೆ ಬಂದಿತ್ತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಹೀಗಾಗಿ ತೆಲುಗಿನ ‘ಜೆರ್ಸಿ’ ಸಿನಿಮಾವನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಗಿದೆ.

ಇದನ್ನೂ ಓದಿ: ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ಕಡೆ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ; ಹೇಗಿತ್ತು ರಿಯಾಕ್ಷನ್​?

ಮತ್ತೆ ಮುಂದೂಡಲ್ಪಡುತ್ತೆ ‘ಆರ್​ಆರ್​ಆರ್​’ ರಿಲೀಸ್ ದಿನಾಂಕ? ರಾಜಮೌಳಿ ತಂಡಕ್ಕೆ ಮೊದಲ ಹಿನ್ನಡೆ

Published On - 6:39 pm, Tue, 28 December 21