ಮೊದಲ ದಿನ ಅಬ್ಬರದ ಗಳಿಕೆ ಮಾಡಿದ ‘ಶೈತಾನ್’; ಹಾರರ್ ಚಿತ್ರಕ್ಕೆ ಪ್ರೇಕ್ಷನ ಮೆಚ್ಚುಗೆ

ಕಳೆದ ವರ್ಷ ಬಾಲಿವುಡ್​ನಲ್ಲಿ ಹಲವು ಸಿನಿಮಾಗಳು ಗೆದ್ದವು. ಈಗ ಹೊಸ ವರ್ಷದಲ್ಲಿ ಎರಡು ತಿಂಗಳು ಕಳೆದಿದೆ. ಆದರೆ, ಬಾಲಿವುಡ್​ಗೆ ಗೆಲುವು ಸಿಕ್ಕಿಲ್ಲ. ‘ಶೈತಾನ್’ ಚಿತ್ರದಿಂದ ಈ ಗೆಲುವು ಸಿಗುವ ಸಾಧ್ಯತೆ ಇದೆ. ಈ ಸಿನಿಮಾ ಮೊದಲ ದಿನ 14 ಕೋಟಿ ರೂಪಾಯಿ ಗಳಿಸಿದೆ.

ಮೊದಲ ದಿನ ಅಬ್ಬರದ ಗಳಿಕೆ ಮಾಡಿದ ‘ಶೈತಾನ್’; ಹಾರರ್ ಚಿತ್ರಕ್ಕೆ ಪ್ರೇಕ್ಷನ ಮೆಚ್ಚುಗೆ
ಶೈತಾನ್ ಸಿನಿಮಾ
Edited By:

Updated on: Mar 09, 2024 | 12:44 PM

‘ಶೈತಾನ್​’ ಸಿನಿಮಾ (Shaitaan Movie) ಟ್ರೇಲರ್​ ಮೂಲಕ ಭಾರಿ ಕ್ರೇಜ್​ ಸೃಷ್ಟಿ ಮಾಡಿತ್ತು. ಮಾರ್ಚ್ 18ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಬಾಲಿವುಡ್ ನಟ ಅಜಯ್​ ದೇವಗನ್​, ತಮಿಳು ನಟಿ ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್​. ಮಾಧವನ್​ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಮೊದಲ ದಿನ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಹಾರರ್​ ಕಥಾಹಂದರ ಹೊಂದಿರೋ ಈ ಚಿತ್ರ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ. ಇದರಿಂದ ಸಿನಿಮಾಗೆ ಗೆಲ್ಲುವ ಭರವಸೆ ಸಿಕ್ಕಿದೆ.

ಕಳೆದ ವರ್ಷ ಬಾಲಿವುಡ್​ನಲ್ಲಿ ಹಲವು ಸಿನಿಮಾಗಳು ಗೆದ್ದವು. ಈಗ ಹೊಸ ವರ್ಷದಲ್ಲಿ ಎರಡು ತಿಂಗಳು ಕಳೆದಿದೆ. ಆದರೆ, ಬಾಲಿವುಡ್​ಗೆ ಗೆಲುವು ಸಿಕ್ಕಿಲ್ಲ. ‘ಶೈತಾನ್’ ಚಿತ್ರದಿಂದ ಈ ಗೆಲುವು ಸಿಗುವ ಸಾಧ್ಯತೆ ಇದೆ. ಈ ಸಿನಿಮಾ ಮೊದಲ ದಿನ 14 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದಲ್ಲಿ ವಶೀಕರಣದ ಬಗ್ಗೆ ತೋರಿಸಲಾಗಿದ್ದು, ಹಾರರ್ ಪ್ರಿಯರು ಸಿನಿಮಾ ಇಷ್ಟಪಟ್ಟಿದ್ದಾರೆ. ಒಂದು ಭಿನ್ನ​ ಪಾತ್ರದಲ್ಲಿ ಆರ್​. ಮಾಧವನ್​ ಕಾಣಿಸಿಕೊಂಡಿದ್ದಾರೆ.

ವಿಕಾಸ್​ ಬಹ್ಲ್ ‘ಶೈತಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ‘ಕ್ವೀನ್’, ‘ಸೂಪರ್ 30’ ಅಂಥ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ಶೈತಾನ್’ ಗುಜರಾತಿ ಭಾಷೆಯ ‘ವಶ್​’ ಚಿತ್ರದ ಹಿಂದಿ ರಿಮೇಕ್ ಆಗಿದೆ​. ಆ ಚಿತ್ರವನ್ನು ಹೆಚ್ಚು ಜನರಿಗೆ ರೀಚ್ ಮಾಡಿಸೋ ಆಲೋಚನೆಯಲ್ಲಿ ವಿಕಾಸ್ ಅವರು ರಿಮೇಕ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ವಿಮರ್ಶೆ ಹಂಚಿಕೊಂಡವರು ಪಾಸಿಟಿವ್​ ಮಾತುಗಳನ್ನು ಆಡಿದ್ದಾರೆ. ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ.

‘ಶೈತಾನ್’ ಸಿನಿಮಾಗೆ ಇಂದು (ಮಾರ್ಚ್ 9) ಹಾಗೂ ನಾಳೆ (ಮಾರ್ಚ್ 10) ತುಂಬಾನೇ ಕ್ರೂಶಿಯಲ್ ಆಗಿದೆ. ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸಿದರೆ ಹೆಚ್ಚಿನ ಕಲೆಕ್ಷನ್ ಆಗಲಿದೆ. ಮೂರು ದಿನದಲ್ಲಿ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಈಗಲೇ ಸಿಕ್ಕಿದೆ ‘ಶೈತಾನ್​’ ಅಬ್ಬರಿಸುವ ಸೂಚನೆ; ಜೋರಾಗಿದೆ ಅಡ್ವಾನ್ಸ್​ ಬುಕಿಂಗ್​

‘ಶೈತಾನ್’ ಸಿನಿಮಾದಲ್ಲಿ ವಶೀಕರಣ ಹೆಚ್ಚು ಹೈಲೈಟ ಆಗಿದೆ. ಜಾನಕಿ ಬೋಡಿವಾಲಾ ವಶೀಕರಣಕ್ಕೆ ಒಳಗಾದ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ಕಥೆಯಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ಸಿನಿಮಾ ನೋಡಿದ ಎಲ್ಲರೂ ಜಾನಕಿ ಅವರ ಅಭಿನಯವನ್ನು ಮೆಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ