Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ನಟಿಯನ್ನು ಮದುವೆ ಆಗಬೇಕೆಂದುಕೊಂಡಿದ್ದರು ಮಾಧವನ್

R Madhavan: ನಟ ಮಾಧವನ್ ಚಿತ್ರರಂಗಕ್ಕೆ ಕಾಲಿಟ್ಟಾಗ ಯುವತಿಯರ ನೆಚ್ಚಿನ ನಟನಾಗಿದ್ದು, ಮಾಧವನ್ ಅನ್ನು ಮದುವೆಯಾಗುವ ಕನಸು ಕಂಡಿದ್ದ ಲಕ್ಷಾಂತರ ಯುವತಿಯರಿದ್ದರು, ಆದರೆ ಮಾಧವನ್​ಗೆ ಮಾತ್ರ ಸ್ಟಾರ್ ನಟಿಯನ್ನು ಮದುವೆಯಾಗುವ ಆಸೆಯಿತ್ತಂತೆ. ಯಾರದು?

ಆ ನಟಿಯನ್ನು ಮದುವೆ ಆಗಬೇಕೆಂದುಕೊಂಡಿದ್ದರು ಮಾಧವನ್
Follow us
ಮಂಜುನಾಥ ಸಿ.
|

Updated on: Mar 02, 2024 | 3:03 PM

ಮಾಧವನ್​ಗೆ (Madhavan) ಈಗ 53 ವರ್ಷ ವಯಸ್ಸು. ಮಾಧವನ್ ಚಿತ್ರರಂಗಕ್ಕೆ ಕಾಲಿಟ್ಟಾಗ ತಮಿಳು ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದರು. ಅಂದ, ನಟನೆ ಎರಡೂ ಬೆರೆತ ಅದ್ಭುತ ಪ್ರತಿಭೆಯಾಗಿ ಆರಂಭದಲ್ಲಿಯೇ ಹೆಸರು ಪಡೆದುಕೊಂಡವರು ಮಾಧವನ್. ಆರಂಭದಲ್ಲಿ ಒಂದರ ಹಿಂದೊಂದರಂತೆ ಸುಂದರ ಪ್ರೇಮಕಥಾ ಸಿನಿಮಾಗಳಲ್ಲಿ ನಟಿಸಿದ ಮಾಧವನ್​ ದೊಡ್ಡ ಸಂಖ್ಯೆಯ ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕಾಲೇಜು ಯುವತಿಯರಂತೂ ಮಾಧವನ್​ರ ಹುಚ್ಚು ಹತ್ತಿಸಿಕೊಂಡಿದ್ದರು. ಆದರೆ ಮಾಧವನ್​ ಅನ್ನು ಮದುವೆಯಾಗಬೇಕು ಎಂದುಕೊಂಡಿದ್ದ ಲಕ್ಷಾಂತರ ಯುವತಿಯರಿದ್ದರು. ಆದರೆ ಮಾಧವನ್​ಗೆ ಮಾತ್ರ ನಟಿಯೊಬ್ಬರನ್ನು ಮದುವೆಯಾಗುವ ಆಸೆಯಾಗಿತ್ತು? ಯಾರು ಆ ನಟಿ.

ಮಾಧವನ್ ಸಿನಿಮಾಕ್ಕೆ ಕಾಲಿಡುವ ಮುಂಚೆ ಸುಮಾರು ಏಳು ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ 2000 ರಲ್ಲಿ ಬಿಡುಗಡೆ ಆದ ‘ಅಲೈಪಾಯುತೆ’ ಸಿನಿಮಾ ಅವರನ್ನು ಸ್ಟಾರ್ ಅನ್ನಾಗಿ ಮಾಡಿತು. ‘ಅಲೈಪಾಯುತೆ’ ಸಿನಿಮಾ ಬಿಡುಗಡೆಗೆ ಮುನ್ನವೇ ಮಾಧವನ್ ಮದುವೆ ಆಗಿದ್ದರು. ಆದರೆ ಅದಕ್ಕೂ ಮುನ್ನವೇ ಹಿಂದಿ ನಟಿಯೊಬ್ಬರನ್ನು ಮದುವೆಯಾಗುವ ಕನಸು ಕಂಡಿದ್ದರಂತೆ ಮಾಧವನ್. ಅವರೇ ಸ್ಟಾರ್ ನಟಿ ಜೂಹಿ ಚಾವ್ಲಾ.

ಇದನ್ನೂ ಓದಿ:ಮತ್ತೆ ಒಂದಾದ ಕಂಗನಾ ರಣಾವತ್​-ಆರ್​. ಮಾಧವನ್​; ಫೋಟೋ ವೈರಲ್​

1988 ರಲ್ಲಿ ಬಿಡುಗಡೆ ಆದ ಆಮಿರ್ ಖಾನ್-ಜೂಹಿ ಚಾವ್ಲಾ ನಟಿಸಿದ್ದ ‘ಖಯಾಮತ್​ ಸೆ ಖಯಾಮತ್ ತಕ್’ ಸಿನಿಮಾ ನೋಡಿದ್ದ ಆಮಿರ್ ಖಾನ್​, ಜೂಹಿ ಚಾವ್ಲಾ ಅವರನ್ನು ಮದುವೆಯಾಗುವ ಕನಸು ಕಂಡಿದ್ದರಂತೆ. ‘ಖಯಾಮತ್​ ಸೆ ಖಯಾಮತ್ ತಕ್’ ಸಿನಿಮಾ ನೋಡಿದ ಬಳಿಕ ಜೂಹಿಯ ಹುಚ್ಚು ಅಭಿಮಾನಿ ಆಗಿಬಿಟ್ಟಿದ್ದ ಮಾಧವನ್​, ಅವರ ತಾಯಿಯ ಬಳಿ ಹೋಗಿ ನಾನು ಜೂಹಿ ಚಾವ್ಲಾ ಅನ್ನು ಮದುವೆಯಾಗಬೇಕು ಎಂದುಕೊಂಡಿದ್ದೇನೆ, ನಾನು ಮದುವೆಯಾದರೆ ಅದು ಕೇವಲ ಜೂಹಿ ಚಾವ್ಲಾ ಅವರನ್ನು ಮಾತ್ರವೇ ಎಂದಿದ್ದರಂತೆ. ಅಂದಹಾಗೆ ಮಾಧವನ್​ಗೂ ಜೂಹಿ ಚಾವ್ಲಾಗೂ ಇರುವುದು ಮೂರು ವರ್ಷಗಳ ಅಂತರವಷ್ಟೆ, ಆದರೆ ಮಾಧವನ್ ಆಗಿನ್ನೂ ಸ್ಟಾರ್ ಆಗಿರಲಿಲ್ಲ, ಜೂಹಿ ಚಾವ್ಲಾ ಅದಾಗಲೇ ಸ್ಟಾರ್ ಆಗಿದ್ದರು.

ಅಂದಹಾಗೆ ಮಾಧವನ್​ ಮೊದಲು ನಾಯಕ ನಟನಾಗಿ ನಟಿಸಿದ್ದು ಕನ್ನಡದ ಸಿನಿಮಾ ‘ಶಾಂತಿ ಶಾಂತಿ ಶಾಂತಿ’ ಸಿನಿಮಾದಲ್ಲಿ ಈ ಸಿನಿಮಾನಲ್ಲಿ ಪ್ರೇಮಾ, ತಮಿಳಿನ ಮತ್ತೊಬ್ಬ ನಟ ಅಬ್ಬಾಸ್ ಸಹ ನಾಯಕನಾಗಿ ನಟಿಸಿದ್ದರು. ಸಿನಿಮಾ ಭಿನ್ನವಾಗಿತ್ತು ಆದರೆ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿರಲಿಲ್ಲ. ‘ಶಾಂತಿ ಶಾಂತಿ ಶಾಂತಿ’ ಸಿನಿಮಾದ ಬಳಿಕ ಮಾಧವನ್ 1999ರಲ್ಲಿ ಮದುವೆಯಾದರು. ಅದರ ಮರು ವರ್ಷ ಮಣಿರತ್ನಂ ನಿರ್ದೇಶನದ ‘ಅಲೈಪಾಯುತೆ’ ಸಿನಿಮಾ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯ್ತು. ಆ ನಂತರ ಮಾಧವನ್ ಹಿಂತಿರುಗಿ ನೋಡಿದ್ದೇ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ