‘ಖೈದಿ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗೋದು ಯಾವಾಗ? ಉತ್ತರ ಕೊಟ್ಟ ಕಾರ್ತಿ
Kaithi 2: ಕಾರ್ತಿ ನಟಿಸಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದ ‘ಖೈದಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಿಂದಲೇ ‘ಎಲ್ಸಿಯು’ ಪ್ರಾರಂಭವಾಗಿದ್ದು ಸಹ. ‘ಖೈದಿ 2’ ಸಿನಿಮಾ ಬರಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿತ್ತು. ಇದೀಗ ಆ ಬಗ್ಗೆ ಸ್ಪಷ್ಟನೆ ದೊರಕಿದೆ.
ನಟ ಕಾರ್ತಿ (Karti) ನಟನೆಯ, ಲೋಕೇಶ್ ಕನಗರಾಜ್ ನಿರ್ದೇಶನದ ‘ಖೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿತ್ತು. ಈ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧವಾಗುತ್ತಿದೆ. ಸಿನಿಮಾ ಸೆಟ್ಟೇರುವ ಮೊದಲೇ ಈ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಸೆಟ್ಟೇರೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ಉತ್ತರ ಸಿಗೋ ಮೊದಲೇ ಒಂದೊಳ್ಳೆಯ ವಿಚಾರ ಸಿಕ್ಕಿದೆ.
ಕಾರ್ತಿ ಅವರು ‘ಖೈದಿ’ ಸಿನಿಮಾದಲ್ಲಿ ಡಿಲ್ಲಿ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಜೈಲಿನಿಂದ ಬರುವ ಖೈದಿಯಾಗಿ ಕಾಣಿಸಿಕೊಂಡಿದ್ದರು ಅವರು. ಒಂದೇ ರಾತ್ರಿಯಲ್ಲಿ ಕಥೆ ನಡೆಯುತ್ತದೆ. ಈ ಚಿತ್ರವನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದರು. ಈ ಸಿನಿಮಾದಲ್ಲಿ ಡ್ರಗ್ ಕೇಸ್ ಬಗ್ಗೆ ಇತ್ತು. ಈಗ ಬರ್ತಿರೋದು ಇದರ ಹಿಂದಿನ ಕಥೆ. ಈ ವಿಚಾರದ ಬಗ್ಗೆ ಕಾರ್ತಿ ಹೊಸ ಅಪ್ಡೇಟ್ ನೀಡಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಖಾತ್ರಿ: ಇದು ಎಲ್ಸಿಯು ಭಾಗವಾ?
‘ಖೈದಿ’ ಸಿನಿಮಾದಲ್ಲಿ ಒಂದು ಡೈಲಾಗ್ ಬರುತ್ತದೆ. ನಾನು ಜೈಲಿನಲ್ಲಿ ಇದ್ದೆ ಅನ್ನೋದಷ್ಟೇ ನಿಮಗೆ ಗೊತ್ತು. ಅದಕ್ಕೂ ಮೊದಲು ನಾನೇನು ಮಾಡುತ್ತಿದ್ದೆ ಎಂಬುದು ನಿಮಗೆ ಗೊತ್ತಿಲ್ಲ ಅಲ್ಲವೇ’ ಎಂದು ಡೈಲಾಗ್ ಹೇಳಿದ್ದಾರೆ ಅವರು. ‘ಮುಂದಿನ ವರ್ಷ ಸಿನಿಮಾ ಆರಂಭಿಸುತ್ತೇವೆ’ ಎಂದು ಹೇಳಿದ್ದಾರೆ ಅವರು. ಈ ಚಿತ್ರಕ್ಕಾಗಿ ಇನ್ನೂ ಎರಡು ವರ್ಷ ಕಾಯಬೇಕು ಎಂದು ಕೇಳಿ ಕೆಲವರಿಗೆ ಬೇಸರ ಆಗಿದೆ.
ಲೋಕೇಶ್ ಕನರಾಜ್ ಅವರು ‘ಖೈದಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಾರ್ತಿ, ಅರ್ಜುನ್ ದಾಸ್ ಹಾಗೂ ನರೇನ್ ಮೊಲಾದವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಗಿಸಿದ್ದರು. ಇದು ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಈ ಚಿತ್ರವನ್ನು ಎಸ್ಆರ್ ಪ್ರಭು ಅವರು ‘ಡ್ರೀಮ್ ವಾರಯರ್ ಪಿಕ್ಚರ್ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ‘ಖೈದಿ’ ಚಿತ್ರದ ರೆಫರೆನ್ಸ್ ‘ವಿಕ್ರಮ್’ ಸಿನಿಮಾದಲ್ಲಿ ಬಂದಿತ್ತು. ಈ ಚಿತ್ರದಲ್ಲಿ ಕಾರ್ತಿ ಅವರ ಧ್ವನಿ ಬಂದಿತ್ತು.
ಕಾರ್ತಿ ಅವರು ‘96’ ಸಿನಿಮಾ ನಿರ್ದೇಶಕ ಪ್ರೇಮ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದದ್ದಾರೆ. ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿ ಇವೆ. ಅವರು ಆ್ಯಕ್ಷನ್ ಹಾಗೂ ಕಾಮಿಡಿ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Sat, 2 March 24