100 ಕೋಟಿ ರೂಪಾಯಿ ಕ್ಲಬ್ ಸೇರುವ ಸನಿಹದಲ್ಲಿ ‘ಶೈತಾನ್’; ಹಾರರ್ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ

|

Updated on: Mar 13, 2024 | 11:09 AM

ಅಜಯ್ ದೇವಗನ್ ಹಾಗೂ ಆರ್ ಮಾಧವನ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ‘ಶೈತಾನ್’ ಚಿತ್ರಕ್ಕಾಗಿ ಒಂದಾಗಿ ಗಮನ ಸೆಳೆದಿದ್ದಾರೆ. ಮಾಧವನ್ ಅವರು ಮಾಂತ್ರಿಕನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಚಿತ್ರ ಮಂಗಳವಾರ 6.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರದ ಗಳಿಕೆ 68 ಕೋಟಿ ರೂಪಾಯಿ ಆಗಿದೆ.

100 ಕೋಟಿ ರೂಪಾಯಿ ಕ್ಲಬ್ ಸೇರುವ ಸನಿಹದಲ್ಲಿ ‘ಶೈತಾನ್’; ಹಾರರ್ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ
ಶೈತಾನ್
Follow us on

ಆ್ಯಕ್ಷನ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಹಾರರ್ ಸಿನಿಮಾಗಳ ಸಂಖ್ಯೆ ಕಡಿಮೆ. ಈಗ ಅಜಯ್ ದೇವಗನ್ ಹಾಗೂ ಆರ್​ ಮಾಧವನ್ ಒಟ್ಟಾಗಿ ನಟಿಸಿರುವ ಸೂಪರ್​ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ‘ಶೈತಾನ್’ (Shaitaan Movie) ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಸಿನಿಮಾ ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮೂಲಕ ಚಿತ್ರದ ಗಳಿಕೆ 100 ಕೋಟಿ ರೂಪಾಯಿ ಸಮೀಪಿಸಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಅಜಯ್ ದೇವಗನ್ ಹಾಗೂ ಆರ್ ಮಾಧವನ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ‘ಶೈತಾನ್’ ಚಿತ್ರಕ್ಕಾಗಿ ಒಂದಾಗಿ ಗಮನ ಸೆಳೆದಿದ್ದಾರೆ. ಮಾಧವನ್ ಅವರು ಮಾಂತ್ರಿಕನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಚಿತ್ರ ಮಂಗಳವಾರ (ಮಾರ್ಚ್ 13) 6.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರದ ಗಳಿಕೆ 68 ಕೋಟಿ ರೂಪಾಯಿ ಆಗಿದೆ. ವಿಶ್ವ ಮಟ್ಟದಲ್ಲಿ 88 ಕೋಟಿ ರೂಪಾಯಿ ಕಮಾಯಿ ಮಾಡಿದೆ.

‘ಶೈತಾನ್’ ಸಿನಿಮಾ ಶುಕ್ರವಾರ (ಮಾರ್ಚ್ 8) 14.75 ಕೋಟಿ ರೂಪಾಯಿ ಗಳಿಕೆ ಮಾಡಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದಿದ್ದರಿಂದ ಸಿನಿಮಾಗೆ ಸಹಕಾರಿ ಆಯಿತು. ಶನಿವಾರ (ಮಾರ್ಚ್ 9) 18.75 ಕೋಟಿ ರೂಪಾಯಿ ಹಾಗೂ ಭಾನುವಾರ 20 ಕೋಟಿ ರೂಪಾಯಿ ಬಾಚಿಕೊಂಡಿದೆ ಈ ಚಿತ್ರ. ಸೋಮವಾರ 7.25 ಕೋಟಿ ರೂಪಾಯಿ ಗಳಿಕೆ ಮಾಡಿ ಚಿತ್ರ ಒಳ್ಳೆಯ ಗಳಿಕೆಯನ್ನೇ ಮಾಡಿದಂತೆ ಆಗಿದೆ. ಮಂಗಳವಾರ 6 ಕೋಟಿ ರೂಪಾಯಿ ಕಮಾಯಿ ಮಾಡಿದೆ.

ಮಾರ್ಚ್ 15ರಂದು ಹಿಂದಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರಾ, ದಿಶಾ ಪಟಾಣಿ ಹಾಗೂ ರಾಶಿ ಖನ್ನಾ ನಟನೆಯ ‘ಯೋಧ’ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ‘ಶೈತಾನ್’ ಸಿನಿಮಾ ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.  ‘ಯೋಧ’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

ಇದನ್ನೂ ಓದಿ: ಸೋಮವಾರದ ಪರೀಕ್ಷೆಯಲ್ಲಿ ಪಾಸ್​ ಆಯ್ತಾ ‘ಶೈತಾನ್​’? ಈವರೆಗಿನ ಕಲೆಕ್ಷನ್​ ಲೆಕ್ಕ ಇಲ್ಲಿದೆ..

2023ರಲ್ಲಿ ರಿಲೀಸ್ ಆದ ‘ವಶ್’ ಹೆಸರಿನ ಗುಜರಾತಿ ಸಿನಿಮಾದ ರಿಮೇಕ್ ಆಗಿ ‘ಶೈತಾನ್’ ಮೂಡಿ ಬಂದಿದೆ. ಅಜಯ್ ದೇವಗನ್ ಜೊತೆ ಜ್ಯೋತಿಕಾ, ಆರ್​ ಮಾಧವನ್ ಪ್ರಮುಖ ಪಾತ್ರ ಮಾಡಿದ್ದಾರೆ.  ದೇವಗನ್ ಫಿಲ್ಮ್ಸ್, ಜಿಯೋ ಸ್ಟುಡಿಯೋ ಹಾಗೂ ಪನೋರಮಾ ಸ್ಟುಡಿಯೋ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ