AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರದ ಪರೀಕ್ಷೆಯಲ್ಲಿ ಪಾಸ್​ ಆಯ್ತಾ ‘ಶೈತಾನ್​’? ಈವರೆಗಿನ ಕಲೆಕ್ಷನ್​ ಲೆಕ್ಕ ಇಲ್ಲಿದೆ..

ಶುಕ್ರವಾರ, ಶನಿವಾರ ಮತ್ತು ಭಾನುವಾರ ‘ಶೈತಾನ್​’ ಸಿನಿಮಾದ ಗಳಿಕೆ ಏರಿಕೆ ಆಗುತ್ತಿತ್ತು. ಆದರೆ ಸೋಮವಾರ ಸಡನ್​ ಕುಸಿತ ಕಂಡಿದೆ. 4 ದಿನಗಳ ಕಾಲ ಪ್ರದರ್ಶನ ಕಂಡಿರುವ ಈ ಸಿನಿಮಾ 62.94 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 100 ಕೋಟಿ ರೂಪಾಯಿ ಗಡಿ ಮುಟ್ಟಲು ಇನ್ನೂ ಕೆಲವು ದಿನಗಳು ಬೇಕಿವೆ. ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿದ್ದಾರೆ.

ಸೋಮವಾರದ ಪರೀಕ್ಷೆಯಲ್ಲಿ ಪಾಸ್​ ಆಯ್ತಾ ‘ಶೈತಾನ್​’? ಈವರೆಗಿನ ಕಲೆಕ್ಷನ್​ ಲೆಕ್ಕ ಇಲ್ಲಿದೆ..
ಅಜಯ್​ ದೇವಗನ್​
ಮದನ್​ ಕುಮಾರ್​
|

Updated on: Mar 12, 2024 | 3:53 PM

Share

ಜಾನಕಿ ಬೋಡಿಬಾಲಾ, ಅಜಯ್​ ದೇವಗನ್ (Ajay Devgn)​, ಜ್ಯೋತಿಕಾ, ಆರ್​. ಮಾಧವನ್​ ನಟನೆಯ ‘ಶೈತಾನ್​’ ಸಿನಿಮಾ ಹಿಟ್​ ಆಗಲಿದೆ ಎಂದು ರಿಲೀಸ್​ಗೂ ಮೊದಲೇ ಭವಿಷ್ಯ ನುಡಿಯಲಾಗಿತ್ತು. ಹಾರರ್​ ಕಹಾನಿ ಇರುವ ಈ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಆಗಿದೆ. ಮೊದಲ ಮೂರು ದಿನ ಶೈತಾನ್​’ (Shaitan) ಚಿತ್ರಕ್ಕೆ ಬಹುಕೋಟಿ ರೂಪಾಯಿ ಹಣ ಹರಿದು ಬಂತು. ಆದರೆ ಸೋಮವಾರದ ಪರೀಕ್ಷೆಯಲ್ಲಿ ಈ ಸಿನಿಮಾ ಸ್ವಲ್ಪ ಡಲ್​ ಆಗಿದೆ. ನಾಲ್ಕನೇ ದಿನಕ್ಕೆ ಈ ಸಿನಿಮಾದ ಕಲೆಕ್ಷನ್​ (Shaitan Collection) ಒಂದಂಕಿಗೆ ಕುಸಿದಿದೆ. ಇದರಿಂದ ಚಿತ್ರತಂಡಕ್ಕೆ ಸ್ವಲ್ಪ ಚಿಂತೆ ಆಗಿದೆ.

ಮಾರ್ಚ್​ 8ರಂದು ಬಿಡುಗಡೆಯಾದ ‘ಶೈತಾನ್​’ ಸಿನಿಮಾ ಮೊದಲ ದಿನ 15.21 ಕೋಟಿ ರೂ. ಕಲೆಕ್ಷನ್​ ಮಾಡಿತು. ಮೊದಲ ಶೋ ನೋಡಿದವರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ಅದರ ಪರಿಣಾಮವಾಗಿ ಎರಡನೇ ದಿನ ಕೂಡ ಕಲೆಕ್ಷನ್​ ಹೆಚ್ಚಾಯಿತು. ಮಾರ್ಚ್​ 9ರಂದು ‘ಶೈತಾನ್​’ ಗಳಿಸಿದ್ದು 19.18 ಕೋಟಿ ರೂಪಾಯಿ. 3ನೇ ದಿನ 20.74 ಕೋಟಿ ರೂಪಾಯಿ ಹರಿದು ಬಂತು. ಆದರೆ ನಾಲ್ಕನೇ ದಿನ 7.81 ಕೋಟಿ ರೂಪಾಯಿಗೆ ಕಲೆಕ್ಷನ್​ ಕುಸಿಯಿತು.

ಇದನ್ನೂ ಓದಿ: ‘ನನಗೂ ದೆವ್ವದ​ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್​ ದೇವಗನ್​

ಯಾವುದೇ ಸಿನಿಮಾಗೆ ಸೋಮವಾರದ ಬಿಸ್ನೆಸ್​ ತುಂಬ ಮುಖ್ಯವಾಗುತ್ತದೆ. ಮೊದಲ 3 ದಿನ ಹೌಸ್​ಫುಲ್​ ಪ್ರದರ್ಶನ ಆಗಿದ್ದರೂ 4ನೇ ದಿನವಾದ ಸೋಮವಾರ ಕಲೆಕ್ಷನ್​ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ‘ಶೈತಾನ್​’ ವಿಚಾರದಲ್ಲೂ ಹಾಗೆಯೇ ಆಗಿದೆ. ಈಗ ರಂಜಾನ್​ ಮಾಸ ಆರಂಭ ಆಗಿದೆ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವವರ ಸಂಖ್ಯೆ ಕೂಡ ಇಳಿಮುಖ ಆಗಲಿದೆ. ಅದರಿಂದ ‘ಶೈತಾನ್’ ಗಳಿಕೆ ಮೇಲೆ ಪರಿಣಾಮ ಬೀರಲಿದೆ.

‘ಶೈತಾನ್​’ ಸಿನಿಮಾದ ಕಲೆಕ್ಷನ್​ ಬಗ್ಗೆ ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 4 ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್​ 62.94 ಕೋಟಿ ರೂಪಾಯಿ ಆಗಿದೆ. ಒಂದು ವಾರ ಪೂರ್ಣಗೊಳ್ಳುವುದರೊಳಗೆ ಈ ಸಿನಿಮಾ 82 ಕೋಟಿ ರೂಪಾಯಿ ಗಳಿಸಬಹುದು ಎಂದು ಅವರು ಅಂದಾಜಿಸಿದ್ದಾರೆ. 2ನೇ ವೀಕೆಂಡ್​ ವೇಳೆಗೆ 100 ಕೋಟಿ ರೂಪಾಯಿ ಗಡಿ ಮುಟ್ಟಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್