ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಈಗ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಶೇರ್ಷಾ’ ಸಿನಿಮಾ ಇತ್ತೀಚೆಗೆ ಅಮೇಜಾನ್ ಪ್ರೈಂ ಮೂಲಕ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ. ಹುತಾತ್ಮ ಯೋಧ ವಿಕ್ರಮ್ ಬಾತ್ರಾ ಅವರ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ವಿಕ್ರಮ್ ಬಾತ್ರಾ ಅವರ ಪಾತ್ರಕ್ಕೆ ಸಿದ್ದಾರ್ಥ್ ಬಣ್ಣ ಹಚ್ಚಿದ್ದು, ಅವರ ಪ್ರೇಯಸಿ ಪಾತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಕಿಸ್ ದೃಶ್ಯ ಕೂಡ ಪ್ರೇಕ್ಷಕರ ಕಣ್ಣು ಕುಕ್ಕಿದೆ. ಈ ಬಗ್ಗೆ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಪ್ರಶ್ನೆ ಎದುರಾಗಿದೆ. ಸಿನಿಮಾ ಪ್ರಚಾರದ ಸಲುವಾಗಿ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಭಾಗವಹಿಸಿದ್ದರು. ಆಗ ಅವರಿಬ್ಬರಿಗೂ ಕಪಿಲ್ ಒಂದು ಪ್ರಶ್ನೆ ಕೇಳಿದರು. ‘ಈ ಸಿನಿಮಾದಲ್ಲಿ ಬರುವ ಕಿಸ್ ದೃಶ್ಯ ಮೊದಲೇ ಸ್ಕ್ರಿಪ್ಟ್ನಲ್ಲಿ ಇತ್ತಾ ಅಥವಾ ನೀವೇ ನಿಮ್ಮ ಕ್ರಿಯೇಟಿವಿ ತೋರಿಸಿ ಆ ದೃಶ್ಯವನ್ನು ಸೇರಿಸಿದ್ರಾ’ ಎಂದು ಅವರು ಕೇಳಿದರು. ಅದಕ್ಕೆ ಸಿದ್ದಾರ್ಥ್ ನೀಡಿದ ಉತ್ತರ ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಿತ್ತು.
‘ವಿಕ್ರಮ್ ಬಾತ್ರಾ ಅವರ ಜೀವನವನ್ನು ಶೇ.90ರಷ್ಟು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಕಿಸ್ಸಿಂಗ್ ದೃಶ್ಯಗಳು ಕೂಡ ನಮ್ಮ ಪಾತ್ರದ ಭಾಗವಾಗಿದ್ದವು. ಆ ದೃಶ್ಯದಲ್ಲಿ ನಟಿಸುವಾಗ ತುಂಬ ಕಷ್ಟ ಆಯಿತು. ಬಲವಂತದಿಂದ ಅದನ್ನೆಲ್ಲ ಮಾಡಬೇಕಾಯಿತು’ ಎಂದು ಸಿದ್ದಾರ್ಥ್ ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ರಿಯಲ್ ಲೈಫ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಸಾಕ್ಷಿ ನೀಡುವ ರೀತಿಯಲ್ಲೇ ಅವರಿಬ್ಬರು ನಡೆದುಕೊಳ್ಳುತ್ತಿದ್ದಾರೆ. ಹೊಸ ವರ್ಷ ಆಚರಿಸಲು ಸಿದ್ದಾರ್ಥ್ ಮತ್ತು ಕಿಯಾರಾ ಮಾಲ್ಡೀವ್ಸ್ಗೆ ತೆರಳಿದ್ದರು. ಹಾಗಿದ್ದರೂ ಕೂಡ ಈ ಜೋಡಿ ತಮ್ಮ ಪ್ರೀತಿಯ ವಿಚಾರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈ ಹಿಂದೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗವಹಿಸಿದ್ದಾಗಲೂ ಸಿದ್ದಾರ್ಥ್ಗೆ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆಗಲೂ ಅವರು ಡೇಟಿಂಗ್ ವದಂತಿಯನ್ನು ತಳ್ಳಿ ಹಾಕಿದ್ದರು. ಸದ್ಯ ಅವರು ‘ಮಿಷನ್ ಮಜ್ನು’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ಮುಗಿದಿದೆ.
ಇದನ್ನೂ ಓದಿ:
Kiara Advani: ಮಾದಕ ನೋಟದಲ್ಲಿ ಮಿಂಚುತ್ತಿರುವ ಕಿಯಾರಾ; ಪಡ್ಡೆಹುಡುಗರ ನಿದ್ದೆಗೆಡಿಸುವ ಚಿತ್ರಗಳು ಇಲ್ಲಿವೆ
ಸಿದ್ಧಾರ್ಥ್ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ
Published On - 8:37 am, Thu, 23 September 21