ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್​ ಕೇಸ್​; ಬಂಧನ ಭೀತಿ

Shilpa Shetty: ಪತಿ ರಾಜ್​ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದರಿಂದ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕವಾಗಿ ತೀವ್ರ ಮುಜುಗರ ಆಗಿದೆ. ಅದರ ಜೊತೆಗೆ ಚೀಟಿಂಗ್​​ ಆರೋಪ ಕೂಡ ಕೇಳಿಬಂದಿರುವುದು ಅವರ ವೃತ್ತಿಜೀವನಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್​ ಕೇಸ್​; ಬಂಧನ ಭೀತಿ
ಶಿಲ್ಪಾ ಶೆಟ್ಟಿ, ಸುನಂದಾ ಶೆಟ್ಟಿ
Edited By:

Updated on: Aug 09, 2021 | 1:01 PM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಕುಟುಂಬಕ್ಕೆ ಸಂಕಷ್ಟಗಳ ಸರಣಿ ಮುಂದುವರಿದಿದೆ. ಒಂದೆಡೆ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಪೊಲೀಸರ ಅತಿಥಿ ಆಗಿದ್ದಾರೆ. ಇನ್ನೊಂದೆಡೆ ಶಿಲ್ಪಾ ಶೆಟ್ಟಿ ಮೇಲೆ ಚೀಟಿಂಗ್​ ಕೇಸ್​ ದಾಖಲಾಗಿದೆ. ಅದರಲ್ಲಿ ಅವರ ತಾಯಿ ಸುನಂದಾ ಶೆಟ್ಟಿ (Sunanda Shetty) ಹೆಸರು ಕೂಡ ಕೇಳಿಬಂದಿದೆ. ಇಬ್ಬರೂ ಈಗ ಬಂಧನ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಇಬ್ಬರು ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ಈಗ ವಿಚಾರಣೆ ಎದುರಿಸಬೇಕಾಗಿದೆ.

ಈಗಾಗಲೇ ತಿಳಿದಿರುವಂತೆ ನಟನೆ ಜೊತೆಗೆ ಶಿಲ್ಪಾ ಶೆಟ್ಟಿ ಅವರು ಫಿನ್ನೆಟ್​ ಕೇಂದ್ರವನ್ನೂ ನಡೆಸುತ್ತಾರೆ. ಇವೋಸಿಸ್​ ವೆಲ್​ನೆಸ್​ ಎಂಬ ಫಿಟ್ನೆಸ್​ ಕೇಂದ್ರವನ್ನು ಅವರು ಹೊಂದಿದ್ದಾರೆ. ಅದಕ್ಕೆ ಶಿಲ್ಪಾ ಶೆಟ್ಟಿ ಮುಖ್ಯಸ್ಥೆಯಾಗಿದ್ದರೆ, ಅವರ ತಾಯಿ ಸುನಂದಾ ನಿರ್ದೇಶಕಿ ಆಗಿದ್ದಾರೆ. ಅದರ ಶಾಖೆಯನ್ನು ಬೇರೆ ಬೇರೆ ನಗರಗಳಲ್ಲಿ ಆರಂಭ ಮಾಡುವುದು ಅವರ ಪ್ಲ್ಯಾನ್​. ಹೊಸ ಶಾಖೆ ಆರಂಭಿಸುವುದಾಗಿ ಭರವಸೆ ನೀಡಿ, ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಶಿಲ್ಪಾ ಮತ್ತು ಸುನಂದಾ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಜೋಸ್ನಾ ಚೌಹಾಣ್​ ಮತ್ತು ರೋಹಿತ್​ ವೀರ್​ ಸಿಂಗ್​ ಎಂಬುವವರು ದೂರು ದಾಖಲಿಸಿದ್ದಾರೆ. ಲಖನೌನ ಹಜರತ್​ಗಂಜ್​ ಮತ್ತು ವಿಭೂತಿ ಖಂಡ್​​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಲು ಲಖನೌ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಒಂದು ವೇಳೆ ಶಿಲ್ಪಾ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ಮೋಸ ಮಾಡಿರುವುದಕ್ಕೆ ಸೂಕ್ತ ಸಾಕ್ಷಿ ಸಿಕ್ಕರೆ, ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಹೈ ಪ್ರೊಫೈಲ್ ಕೇಸ್​ ಆದ್ದರಿಂದ ಎಲ್ಲ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸಲಿದ್ದಾರೆ.

ಪತಿ ರಾಜ್​ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದರಿಂದ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕವಾಗಿ ತೀವ್ರ ಮುಜುಗರ ಆಗಿದೆ. ಎಷ್ಟೋ ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆಗಿದ್ದ ಅವರು ಈಗ ನಷ್ಟ ಅನುಭವಿಸುವಂತಾಗಿದೆ. ಅದರ ಜೊತೆಗೆ ಇಂಥ ಚೀಟಿಂಗ್​ ಕೇಸ್​ ಆರೋಪ ಕೂಡ ಕೇಳಿಬಂದಿರುವುದು ಅವರ ವೃತ್ತಿಜೀವನಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:

‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

TV9 Web

TV9 Kannada

Read More
Loading...
Unable to load recommendations.
Follow Us