ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್​ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್​

| Updated By: ಮದನ್​ ಕುಮಾರ್​

Updated on: Sep 21, 2021 | 4:34 PM

ಜು.19ರಂದು ರಾಜ್​ ಕುಂದ್ರಾ ಬಂಧನವಾಗಿತ್ತು. ಎರಡು ತಿಂಗಳ ಬಳಿಕ ಅವರು ಜಾಮೀನು ಪಡೆದಿದ್ದಾರೆ. ಸಿಂಪಲ್​ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕ ಇಟ್ಟುಕೊಂಡು ಅವರು ಜೈಲಿನಿಂದ ಹೊರಬಂದರು.

ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್​ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್​
ರಾಜ್​ ಕುಂದ್ರಾ, ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿ
Follow us on

ಒಂದು ಕಾಲದಲ್ಲಿ ಉದ್ಯಮಿ ರಾಜ್​ ಕುಂದ್ರಾ ನಗುನಗುತ್ತಾ ಪೋಸ್​ ನೀಡುತ್ತಿದ್ದರು. ಆದರೆ ಇಂದು (ಸೆ.21) ಜೈಲಿನಿಂದ ಹೊರಬರುವಾಗ ಅವರು ಅಳುಮುಖ ಹೊತ್ತುಕೊಂಡು ಬಂದರು. ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಅವರಿಗೆ ಸೋಮವಾರ (ಸೆ.20) ಜಾಮೀನು ಸಿಕ್ಕಿತು. ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳೆಲ್ಲ ಇಂದು ಪೂರ್ಣಗೊಂಡ ಬಳಿಕ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಅವರಿಗೆ ಸದ್ಯಕ್ಕೆ ರಿಲೀಫ್​ ಸಿಕ್ಕಂತಾಗಿದೆ. ಜೈಲಿನಿಂದ ಹೊರಬಂದ ರಾಜ್​ ಕುಂದ್ರಾ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಜು.19ರಂದು ರಾಜ್​ ಕುಂದ್ರಾ ಬಂಧನವಾಗಿತ್ತು. ಎರಡು ತಿಂಗಳ ಬಳಿಕ ಅವರು ಜಾಮೀನು ಪಡೆದಿದ್ದಾರೆ. ಸಿಂಪಲ್​ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕ ಇಟ್ಟುಕೊಂಡು ಅವರು ಜೈಲಿನಿಂದ ಹೊರಬಂದರು. ಈ ವೇಳೆ ಅವರು ಭಾವುಕರಾದಂತೆ ಕಂಡರು. ಅವರ ಕಣ್ಣುಗಳು ತೇವವಾಗಿದ್ದವು. ಹೊರಬರುತ್ತಿದ್ದಂತೆಯೇ ರಾಜ್​ ಕುಂದ್ರಾ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಮುತ್ತಿಗೆ ಹಾಕಿದರು. ಆದರೆ ಯಾರ ಕೈಗೂ ಸಿಗದೇ ಅವರು ಕಾರು ಹತ್ತಿ ಹೊರಟುಹೋದರು.

ಪತಿ ರಾಜ್​ ಕುಂದ್ರಾ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತ ಆಗುವಂತಹ ಕೆಲವು ಸಾಲುಗಳನ್ನು ಅವರು ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ಕೆಳಗೆ ಬೀಳಿಸುವಂತಹ ಪರಿಸ್ಥಿತಿ ಸದಾ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ 7 ಸಲ ಬಿದ್ದರೂ ಕೂಡ, 8ನೇ ಸಲ ಎದ್ದು ನಿಲ್ಲುವಷ್ಟು ಶಕ್ತಿಯನ್ನು ತಂದುಕೊಳ್ಳಿ. ಕಷ್ಟದ ಪರಿಸ್ಥಿತಿಯಲ್ಲಿ ಎದ್ದು ನಿಲ್ಲಲು ಹೆಚ್ಚು ಬಲ, ಇಚ್ಛಾಶಕ್ತಿ ಮತ್ತು ಧೈರ್ಯ ಬೇಕು’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

ರಾಜ್​ ಕುಂದ್ರಾಗೆ ಜಾಮೀನು ಸಿಕ್ಕ ನಂತರವೂ ಶಿಲ್ಪಾ ಇದೇ ರೀತಿ ಸಾಲೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು. ‘ಕೆಟ್ಟ ಚಂಡಮಾರುತದ ನಂತರ ಒಳ್ಳೆಯ ಸಂಗತಿಗಳು ನಡೆಯುತ್ತವೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಕಾಮನಬಿಲ್ಲು ಇರುವುದು’ ಎಂಬ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿಕೊಂಡಿದ್ದರು.

ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ರಾಜ್​ ಕುಂದ್ರಾ ಅವರೇ ಪ್ರಮುಖ ರುವಾರಿ ಎಂದು ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದನ್ನು ರಾಜ್​ ಕುಂದ್ರಾ ಒಪ್ಪಿಕೊಂಡಿಲ್ಲ. ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಸೇರಿದಂತೆ 43 ಜನರ ಹೇಳಿಕೆಗಳನ್ನು ಚಾರ್ಜ್​ಶೀಟ್​ನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ:

ರಾಜ್​ ಕುಂದ್ರಾ ಜಾಮೀನು ಸುದ್ದಿ ಕೇಳಿ ಶಿಲ್ಪಾ ಶೆಟ್ಟಿಗೆ ಖುಷಿಯೋ ದುಃಖವೋ? ಹೀಗಿತ್ತು ನೋಡಿ ಮೊದಲ ಪ್ರತಿಕ್ರಿಯೆ

ಪತಿ ರಾಜ್​ ಕುಂದ್ರಾಗೆ ವಿಚ್ಛೇದನ ನೀಡ್ತಾರಾ ಶಿಲ್ಪಾ ಶೆಟ್ಟಿ? ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ ನಿರ್ಧಾರ ಸಾಧ್ಯತೆ