Raj Kundra: ಮಗಳ ಜತೆ ಮುಖ ತೋರಿಸಲಾಗದೇ ​ಓಡಿ ಹೋದ ರಾಜ್​ ಕುಂದ್ರಾ; ಹಣೆ ಚಚ್ಚಿಕೊಂಡ ಶಿಲ್ಪಾ ಶೆಟ್ಟಿ

|

Updated on: Apr 24, 2023 | 4:22 PM

Shilpa Shetty Family: ಗಂಡನ ವರ್ತನೆ ನೋಡಿ ಶಿಲ್ಪಾ ಶೆಟ್ಟಿಗೆ ಮುಜುಗರ ಆಗಿದೆ. ಎಲ್ಲರ ಎದುರು ಅವರು ತಲೆ ಚಚ್ಚಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

Raj Kundra: ಮಗಳ ಜತೆ ಮುಖ ತೋರಿಸಲಾಗದೇ ​ಓಡಿ ಹೋದ ರಾಜ್​ ಕುಂದ್ರಾ; ಹಣೆ ಚಚ್ಚಿಕೊಂಡ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಕುಟುಂಬ
Follow us on

​ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅವರ ಪತಿ ರಾಜ್​ ಕುಂದ್ರಾ ಮಾಡಿದ ಎಡವಟ್ಟಿನಿಂದಾಗಿ ಇಡೀ ಕುಟುಂಬಕ್ಕೆ (Shilpa Shetty Family) ಮುಜುಗರ ಉಂಟಾಗಿತ್ತು. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡ ಆರೋಪ ರಾಜ್​ ಕುಂದ್ರಾ ಮೇಲಿದೆ. ಆ ಕೇಸ್​ನಲ್ಲಿ ಅವರು ಈಗಾಗಲೇ ಜೈಲು ಸೇರಿಬಂದಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿಕ ಅವರು ಸರಿಯಾಗಿ ಮುಖ ತೋರಿಸುತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಮಾಸ್ಕ್​ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡರು. ಅವರ ಜೊತೆ ಪತ್ನಿ ಶಿಲ್ಪಾ ಶೆಟ್ಟಿ, ನಾದಿನಿ ಶಮಿತಾ ಶೆಟ್ಟಿ, ಮಕ್ಕಳಾದ ವಿಯಾನ್​ ಮತ್ತು ಸಮೀಶಾ ಕೂಡ ಇದ್ದರು. ಈ ವೇಳೆ ಫೋಟೋಗೆ ಪೋಸ್​ ನೀಡುವಂತೆ ಪಾಪರಾಜಿಗಳು ಕೋರಿಕೊಂಡರು. ಆದರೆ ರಾಜ್​ ಕುಂದ್ರಾ (Raj Kundra) ತಪ್ಪಿಸಿಕೊಂಡು ಓಡಿಹೋದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್​ ಮುಂಬೈಗೆ ತೆರಳಿದ ಅವರು ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದರು. ಮೂರು ವರ್ಷದ ಮಗಳು ಸಮೀಶಾಳನ್ನು ಕರೆದುಕೊಂಡು ರಾಜ್​ ಕುಂದ್ರಾ ಹೋಗುತ್ತಿದ್ದರು. ಪಾಪರಾಜಿಗಳನ್ನು ನೋಡುತ್ತಿದ್ದಂತೆಯೇ ಅವರು ಓಡಲು ಆರಂಭಿಸಿದರು.

ಇದನ್ನೂ ಓದಿ
ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ
ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ
Shilpa Shetty: ಪತಿ ರಾಜ್​ ಕುಂದ್ರಾ ಚಿಂತೆ ಮರೆತು ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್​
‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ

ಗಂಡನ ಈ ವರ್ತನೆ ನೋಡಿ ಶಿಲ್ಪಾ ಶೆಟ್ಟಿಗೆ ಮುಜುಗರ ಆಗಿದೆ. ಎಲ್ಲರ ಎದುರು ಅವರು ತಲೆ ಚಚ್ಚಿಕೊಂಡಿದ್ದಾರೆ. ಇಂಥ ಘಟನೆಗಳು ಈ ಹಿಂದೆ ಕೂಡ ನಡೆದಿದ್ದವು. ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫೋಟೋಗೆ ಪೋಸ್​ ನೀಡುವಂತೆ ಪಾಪರಾಜಿಗಳು ಮನವಿ ಮಾಡಿದ್ದರು. ಆಗ ರಾಜ್​ ಕುಂದ್ರಾ ಅವರು ಕೋಪ ಮಾಡಿಕೊಂಡು ಎಸ್ಕೇಪ್​ ಆಗಿದ್ದರು. ಆಗಲೂ ಕೂಡ ಗಂಡನ ವರ್ತನೆಯಿಂದ ಶಿಲ್ಪಾ ಶೆಟ್ಟಿಗೆ ಇರಿಸುಮುರಿಸು ಆಗಿತ್ತು.

ಇದನ್ನೂ ಓದಿ: Shilpa Shetty: ಪತಿ ರಾಜ್​ ಕುಂದ್ರಾ, ತಂಗಿ ಶಮಿತಾ ಜತೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್​ನಲ್ಲಿ ಸಿಕ್ಕಿಬೀಳುವ ಮುನ್ನ ರಾಜ್​ ಕುಂದ್ರಾ ಅವರು ಹೀಗೆ ಇರಲಿಲ್ಲ. ಸಾರ್ವಜನಿಕವಾಗಿ ಅವರು ಬೆರೆಯುತ್ತಿದ್ದರು. ಪಾಪರಾಜಿಗಳಿಗೆ ಖುಷಿಯಿಂದ ಪೋಸ್​ ನೀಡುತ್ತಿದ್ದರು. ಆದರೆ ಜೈಲಿಗೆ ಹೋಗಿ ಬಂದ ಬಳಿಕ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಯಿತು. ಮುಖ ತೋರಿಸಲು ಅವರು ಅಂಜಿಕೊಳ್ಳಲು ಆರಂಭಿಸಿದರು. ಸಂಪೂರ್ಣ ಮುಖ ಮುಚ್ಚುವ ರೀತಿಯಲ್ಲಿ ಮಾಸ್ಕ್​ ಧರಿಸುವುದನ್ನು ಅವರು ರೂಢಿ ಮಾಡಿಕೊಂಡರು. ಆದರೆ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಎಂಟ್ರಿ ನೀಡುವಾಗ ಅವರು ಮಾಸ್ಕ್​ ಧರಿಸಿರಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:04 pm, Mon, 24 April 23