ಆ ಆ್ಯಪ್​ ಬಗ್ಗೆ ನಂಗೆ ಗೊತ್ತಿಲ್ಲ, ಪತಿಯ ಉದ್ಯಮದಲ್ಲಿ ನಾನು ತಲೆ ಹಾಕಲ್ಲ; ಶಿಲ್ಪಾ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Jul 30, 2021 | 4:54 PM

ರಾಜ್​ ಕುಂದ್ರಾ ಬಂಧನ ನಡೆದು ಎರಡು ವಾರ ಕಳೆಯುತ್ತಾ ಬಂದಿದೆ. ಸಾಕಷ್ಟು ಜನರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದ ಮುಂಬೈ ಪೊಲೀಸ್​ ಅಪರಾಧ ವಿಭಾಗ ತಂಡ ಅವರನ್ನು ವಿಚಾರಣೆಗೆ ಒಳಪಡಿಸಿತ್ತು

ಆ ಆ್ಯಪ್​ ಬಗ್ಗೆ ನಂಗೆ ಗೊತ್ತಿಲ್ಲ, ಪತಿಯ ಉದ್ಯಮದಲ್ಲಿ ನಾನು ತಲೆ ಹಾಕಲ್ಲ; ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
Follow us on

ಅಶ್ಲೀಲ ಸಿನಿಮಾ ದಂಧೆಯನ್ನು ರಾಜ್​ ಕುಂದ್ರಾ ಇಷ್ಟು ದಿನ ಸದ್ದಿಲ್ಲದೆ ನಡೆಸುತ್ತಿದ್ದರು. ಈ ದಂಧೆಯಲ್ಲಿ ಸಾಕಷ್ಟು ಮಾಡೆಲ್ ಹಾಗೂ ಹೀರೋಯಿನ್​ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ರಾಜ್​ ಕುಂದ್ರಾ ಹಣ ಮಾಡೋಕೆ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಅಚ್ಚರಿ ಎಂದರೆ, ಶಿಲ್ಪಾ ಶೆಟ್ಟಿ ಅವರಿಗೂ ಕೂಡ ಈ ಬಗ್ಗೆ ಅರಿವಿರಲಿಲ್ಲವಂತೆ.

ರಾಜ್​ ಕುಂದ್ರಾ ಬಂಧನ ನಡೆದು ಎರಡು ವಾರ ಕಳೆಯುತ್ತಾ ಬಂದಿದೆ. ಸಾಕಷ್ಟು ಜನರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದ ಮುಂಬೈ ಪೊಲೀಸ್​ ಅಪರಾಧ ವಿಭಾಗ ತಂಡ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಕೆಲವು ಮಹತ್ವದ ಹೇಳಿಕೆಯನ್ನು ಶಿಲ್ಪಾ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್​ ಕುಂದ್ರಾ ಹಾಟ್​ ಶಾಟ್ಸ್​ ಹೆಸರಿನ ಆ್ಯಪ್​ ಮೂಲಕ ನೀಲಿಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ಈ ಆ್ಯಪ್​ಅನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಲಾಗಿತ್ತು. ಈ ಆ್ಯಪ್​ ಬಗ್ಗೆ ಶಿಲ್ಪಾ ಶೆಟ್ಟಿಗೆ ತಿಳಿದಿತ್ತಾದರೂ ಅದರಲ್ಲಿ ಯಾವ ಕಂಟೆಂಟ್​ ಸಿಗುತ್ತದೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.

‘ಹಾಟ್​ ಶಾಟ್ಸ್​ ಆ್ಯಪ್​ನಲ್ಲಿ ಯಾವ ವಿಚಾರ ಸಿಗುತ್ತದೆ, ಅದರಲ್ಲಿ ಏನು ಸಿಗುತ್ತದೆ ಎನ್ನುವ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ. ನಾನು ಎಂದಿಗೂ ನನ್ನ ಪತಿ ಉದ್ಯಮದಲ್ಲಿ ತಲೆ ಹಾಕಿಲ್ಲ. ಹೀಗಾಗಿ, ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ’ ಎಂದು ಪೊಲೀಸರ ಎದುರು ಶಿಲ್ಪಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕೋರ್ಟ್​ ಪ್ರಶ್ನೆ

ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು. ಇವರ ಬಗ್ಗೆ ನಾನಾ ಸುದ್ದಿಗಳು ಪ್ರಸಾರಗೊಂಡವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಲ್ಪಾ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದು, ಮಾನನಷ್ಟ ಮೊಕದ್ದಮೆ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ವಿಚಾರಣೆಗೆ ಒಳಪಟ್ಟಿದೆ. ‘ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು? ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದು ಅವರ ಜೀವನದ ಒಂದು ಭಾಗ. ಈ ಹಿಂದೆ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಹಲವು ತೀರ್ಪು ನೀಡಲಾಗಿತ್ತು. ಎಷ್ಟು ಬಾರಿ ಇದನ್ನೇ ಹೇಳಬೇಕು? ಪೊಲೀಸ್​ ಮೂಲಗಳು ಹೇಳಿವೆ ಎಂದು ವರದಿಯಾದರೆ ಅದು ಎಂದಿಗೂ ಮಾನಹಾನಿಯಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ?’ ಎಂದು ನ್ಯಾಯಮೂರ್ತಿ ಜಿಎಸ್​ ಪಟೇಲ್ ಅವರು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜ್​ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್​ ದೂರಿನಲ್ಲಿ ರಹಸ್ಯ ಬಹಿರಂಗ

‘ಅಳುವುದರ ಬಗ್ಗೆ ಸುದ್ದಿ ಪ್ರಕಟಿಸಿದರೆ ಮಾನನಷ್ಟ ಹೇಗಾಗುತ್ತೆ?’ ಶಿಲ್ಪಾ ಶೆಟ್ಟಿಗೆ ಕೋರ್ಟ್ ತರಾಟೆ