ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರು ಮೂಲದವರು. ಅವರು ಈಗ ಬಾಲಿವುಡ್ನಲ್ಲಿ ಸೆಟಲ್ ಆಗಿರಬಹುದು, ಆದರೆ, ಅವರು ಎಂದಿಗೂ ತಮ್ಮ ಸಂಪ್ರದಾಯವನ್ನು ಮರೆತಿಲ್ಲ. ಅವರು ಶುದ್ಧವಾಗಿ ತುಳು ಮಾತನಾಡುತ್ತಾರೆ. ಅಲ್ಲಿನ ಸಂಸ್ಕೃತಿಗಳನ್ನು ಶಿಲ್ಪಾ ಫಾಲೋ ಮಾಡುತ್ತಾರೆ. ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಬೆನ್ನಲ್ಲೇ ಅವರು ದೈವದ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಶೀಲ್ಪಾ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದಾರೆ. ತಾಯಿ ಹಾಗೂ ಮಕ್ಕಳ ಜೊತೆ ಅವರು ದೈವ ಕೋಲ ವೀಕ್ಷಿಸಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಜೊತೆಗೆ ಆ ಸಂದರ್ಭದ ಅನುಭವ ಹೇಗಿತ್ತು ಎಂದು ಅವರು ವಿವರಿಸಿದ್ದಾರೆ.
‘ತುಳುನಾಡಿನ ಹೆಣ್ಣು. ನನ್ನ ಮೂಲಕ್ಕೆ ಮರಳಿದ್ದೇನೆ. ನನ್ನ ಮಕ್ಕಳಿಗೆ ನನ್ನ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೇನೆ. ಮಂಗಳೂರಿನಲ್ಲಿ ನಾಗಮಂಡಲ ಹಾಗೂ ಕೊಡಮಣಿತ್ತಾಯ ದೈವ ಕೋಲವನ್ನು ವೀಕ್ಷಿಸಿದೆ. ಇದನ್ನು ನೋಡಿ ನನ್ನ ಮಕ್ಕಳು ವಿಸ್ಮಯಗೊಂಡರು. ಭಕ್ತಿಯಿಂದ ಅನುಸರಿಸುವ ಶಕ್ತಿ ಮತ್ತು ನಂಬಿಕೆಯನ್ನು ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ’ ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.
ದೈವ ಕೋಲ ಆಚರಣೆ ತುಳುನಾಡಿನ ಸಂಸ್ಕೃತಿಗಳಲ್ಲಿ ಒಂದು. ‘ಕಾಂತಾರ’ ಸಿನಿಮಾದಲ್ಲಿ ಈ ಬಗ್ಗೆ ಇತ್ತು. ಹೀಗಾಗಿ, ಶಿಲ್ಪಾ ಶೆಟ್ಟಿಯನ್ನು ಫಾಲೋ ಮಾಡುವ ಅನೇಕರಿಗೆ ‘ದೈವ ಕೋಲ’ದ ವಿಚಾರ ಅರ್ಥವಾಗಿದೆ. ಮಕ್ಕಳಿಗೂ ತಮ್ಮ ಸಂಸ್ಕೃತಿ ಬಗ್ಗೆ ಮಾಹಿತಿ ನೀಡುತ್ತಿರುವುದು ಅನೇಕರಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್; 98 ಕೋಟಿ ರೂಪಾಯಿ ಆಸ್ತಿ ಸೀಜ್
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾಗೆ ಇತ್ತೀಚೆಗೆ ಸಂಕಷ್ಟ ಎದುರಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು 90 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರು. ಇದರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ ಮುಂಬೈ ಮನೆ ಕೂಡ ಇತ್ತು. ಇದಾದ ಬಳಿಕ ಅವರು ದೈವ ಕೋಲ ನೋಡಲು ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Mon, 29 April 24