4 ಕೋಟಿ ರೂಪಾಯಿಯ ಲ್ಯಾಂಬೊರ್ಗೀನಿ ಖರೀದಿಸಿದ ಶ್ರದ್ಧಾ ಕಪೂರ್; ಇದರ ವಿಶೇಷತೆಗಳೇನು?

|

Updated on: Oct 25, 2023 | 12:53 PM

ಶ್ರದ್ಧಾ ಕಪೂರ್ ಗೆಳತಿ ಪೂಜಾ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಲ್ಯಾಂಬೊರ್ಗೀನಿ ಕಾರಿನ ಎದುರು ಇವರು ಪೋಸ್ ನೀಡಿದ್ದಾರೆ. ಕಾರು ಖರೀದಿಸಿದ ಬಳಿಕ ಅವರು ಮುಂಬೈ ರಸ್ತೆಗಳಲ್ಲಿ ಸುತ್ತಾಡಿದ್ದಾರೆ.

4 ಕೋಟಿ ರೂಪಾಯಿಯ ಲ್ಯಾಂಬೊರ್ಗೀನಿ ಖರೀದಿಸಿದ ಶ್ರದ್ಧಾ ಕಪೂರ್; ಇದರ ವಿಶೇಷತೆಗಳೇನು?
ಶ್ರದ್ಧಾ ಕಪೂರ್
Follow us on

ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರು ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರು 4 ಕೋಟಿ ರೂಪಾಯಿ ಬೆಲೆಯ ಲ್ಯಾಂಬೊರ್ಗೀನಿ ಹುರಾಕಾನ್ ಕಾರು ಖರೀದಿಸಿದ್ದಾರೆ. ಈ ಕಾರಿನ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ನಟಿ ಶ್ರದ್ಧಾ ಅವರು ಈ ಕಾರನ್ನು ಡ್ರೈವ್ ಮಾಡಿದ್ದಾರೆ. ನಟಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಶ್ರದ್ಧಾ ಅವರು ಕಾರಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ.

ಶ್ರದ್ಧಾ ಕಪೂರ್ ಗೆಳತಿ ಪೂಜಾ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಲ್ಯಾಂಬೊರ್ಗೀನಿ ಕಾರಿನ ಎದುರು ಇವರು ಪೋಸ್ ನೀಡಿದ್ದಾರೆ. ಕಾರು ಖರೀದಿಸಿದ ಬಳಿಕ ಅವರು ಮುಂಬೈ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. ಈ ಕಾರು ಖರೀದಿ ಮಾಡಿದ್ದರಿಂದ ನಟಿಯ ಖುಷಿ ಹೆಚ್ಚಾಗಿದೆ.

ಲ್ಯಾಂಬೊರ್ಗೀನಿ ಹುರಾಕಾನ್ ಕಾರು ಕಾರು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಕಾರಿನ ಗರಿಷ್ಠ ವೇಗ 310 ಕಿಲೋಮೀಟರ್​ ಇದೆ. ಈ ಕಾರಿನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು. 5204 ಸಿಸಿ ಇಂಜಿನ್​ನ ಇದು ಹೊಂದಿದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲ್​ಗೆ 7 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 9.6 ಸೆಕೆಂಡ್​ನಲ್ಲಿ ಜೀರೋದಿಂದ 100 ಕಿಲೋಮೀಟರ್ ವೇಗ ತಲುಪಬಹುದು. ವಿ10 ಇಂಜಿನ್​ನ ಇದು ಹೊಂದಿದೆ.


ಇದನ್ನೂ ಓದಿ: ಆನ್​ಲೈನ್ ಬೆಟ್ಟಿಂಗ್ ಕೇಸ್; ಕಪಿಲ್ ಶರ್ಮಾ, ಶ್ರದ್ಧಾ ಕಪೂರ್ ಸೇರಿ ಹಲವರಿಗೆ ನೋಟಿಸ್

ಶ್ರದ್ಧಾ ಕಪೂರ್ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ‘ತು ಜೂಟಿ ಮೇ ಮಕ್ಕರ್’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ಗೆದ್ದು ಬೀಗಿದೆ. ‘ಸ್ತ್ರೀ 2’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. 2018ರಲ್ಲಿ ರಿಲೀಸ್ ಆದ ‘ಸ್ತ್ರೀ’ ಸಿನಿಮಾದ ಸೀಕ್ವೆಲ್ ಇದಾಗಿದೆ. ಇದನ್ನು ಹೊರತುಪಡಿಸಿ ಅವರು ಮತ್ಯಾವುದೇ ಸಿನಿಮಾನ ಅವರು ಘೋಷಣೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ