ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಕಿಯಾರಾ-ಸಿದ್ದಾರ್ಥ್; ಮಂಡಿಯೂರಿ ಪ್ರಪೋಸ್ ಮಾಡಿದ್ದ ನಟ

|

Updated on: Feb 07, 2024 | 10:37 AM

ಸಿದ್ದಾರ್ಥ್ ಹಾಗೂ ಕಿಯಾರಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ವಿವಾಹ ಆದರು. ಈ ಜೋಡಿ ಮೊದಲ ಬಾರಿಗೆ ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಈ ಚಿತ್ರದ ಸೆಟ್ನಲ್ಲಿ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಈ ಪರಿಚಯ ಪ್ರೀತಿಗೆ ತಿರುಗಿತು.

ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಕಿಯಾರಾ-ಸಿದ್ದಾರ್ಥ್; ಮಂಡಿಯೂರಿ ಪ್ರಪೋಸ್ ಮಾಡಿದ್ದ ನಟ
ಸಿದ್ದಾರ್ಥ್-ಕಿಯಾರಾ
Follow us on

ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ಅವರು ಮದುವೆ ಆಗಿ ಒಂದು ವರ್ಷ ಕಳೆದಿದೆ. 2023ರ ಫೆಬ್ರವರಿ 7ರಂದು ಈ ಜೋಡಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿರುವ ಸೂರ್ಯಗಢ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ಮದುವೆ ಆಯಿತು. ಈಗ ನೋಡ ನೋಡುತ್ತಿದ್ದಂತೆ ವರ್ಷ ಕಳೆದಿದೆ. ಇವರು ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ದಂಪತಿಗೆ ಅಭಿಮಾನಿಗಳು ಹಾಗೂ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇವರು ನೂರುಕಾಲ ಸುಖವಾಗಿ ಬಾಳಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. ಈ ಜೋಡಿ ಮೊದಲ ಬಾರಿಗೆ ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಈ ಸಿನಿಮಾ ರಿಲೀಸ್ ಆಗಿದ್ದು ಒಟಿಟಿಯಲ್ಲಿ. ಈ ಚಿತ್ರದ ಸೆಟ್​ನಲ್ಲಿ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಈ ಪರಿಚಯ ಪ್ರೀತಿಗೆ ತಿರುಗಿತು. ಕಳೆದ ವರ್ಷ ಇವರು ಮದುವೆ ಆಗಿ ಪ್ರೀತಿಗೆ ಹೊಸ ಅರ್ಥ ನೀಡಿದರು.

ಸಿದ್ದಾರ್ಥ್ ಹಾಗೂ ಕಿಯಾರಾ ಕುಟುಂಬದವರ ಜೊತೆ ವಿದೇಶಕ್ಕೆ ತೆರಳಿದ್ದರು. ಆಗಲೇ ಇಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು. ಒಂದಲ್ಲಾ ಒಂದು ದಿನ ಸಿದ್ದಾರ್ಥ್ ಪ್ರಪೋಸ್ ಮಾಡುತ್ತಾರೆ ಎನ್ನುವ ವಿಚಾರ ಕಿಯಾರಾಗೆ ಖಚಿತವಾಗಿತ್ತು. ರೋಮ್​ನಲ್ಲಿ ಸಿದ್ದಾರ್ಥ್ ಅವರು ಮಂಡಿಯೂರಿ ಕಿಯಾರಾಗೆ ಪ್ರಪೋಸ್ ಮಾಡಿದರು. ‘ಶೇರ್ಷಾ’ ಸಿನಿಮಾದಲ್ಲಿ ಬರೋ ಒಂದು ರೊಮ್ಯಾಂಟಿಕ್ ಲೈನ್​ನ ಸಿದ್ದಾರ್ಥ್ ಹೇಳಿದರು. ಇದು ಕಿಯಾರಾ ಜೀವನದಲ್ಲಿ ವಿಶೇಷ ಕ್ಷಣ ಎನಿಸಿಕೊಂಡಿದೆ.

ಸಿದ್ದಾರ್ಥ್ ಪೋಸ್ಟ್​

ಸಿದ್ದಾರ್ಥ್ ಪ್ರಪೋಸ್ ಮಾಡಿದಾಗ ಕಿಯಾರಾಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿರಲಿಲ್ಲ. ಆ ಬಳಿಕ ಅವರು ಪ್ರೀತಿಯನ್ನು ಒಪ್ಪಿಕೊಂಡರು. ‘ಕುಟುಂಬದವರನ್ನು ನೀನೇ ಒಪ್ಪಿಸಬೇಕು’ ಎಂದು ಸಿದ್ದಾರ್ಥ್​ಗೆ ಕಿಯಾರಾ ಹೇಳಿದ್ದರು. ಅಂತೆಯೇ ನಡೆದುಕೊಂಡರು ಸಿದ್ದಾರ್ಥ್. ಕುಟುಂಬದವರನ್ನು ಒಪ್ಪಿಸಿ ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆ ಆದರು. ಇವರು ಅನೇಕರಿಗೆ ಮಾದರಿ ಆಗಿದ್ದಾರೆ.

ಇದನ್ನೂ ಓದಿ: ‘ಈಗ ಅಧಿಕೃತ’; ನಟ ಸಿದ್ದಾರ್ಥ್ ಜೊತೆ ಹೊಸ ವರ್ಷ ಆಚರಿಸಿಕೊಂಡ ಅದಿತಿ

ಸಿದ್ದಾರ್ಥ್ ಹಾಗೂ ಕಿಯಾರಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆಗಾಗ ಬಿಡುವು ಮಾಡಿಕೊಂಡು ಇವರು ಸುತ್ತಾಟ ನಡೆಸುತ್ತಿದ್ದಾರೆ. ಇವರು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಬ್ರೇಕಪ್ ಆಗಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಆ ಬಳಿಕ ಇವರು ಪ್ಯಾಚಪ್​ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:48 am, Wed, 7 February 24