AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶಾರಾಮಿ ಕಾರು, ಬಂಗ್ಲೆ ಮಾರಿ ಸಾಮಾನ್ಯರಂತೆ ಬದುಕಿದ ಮಾಜಿ ಸ್ಟಾರ್ ನಟ

Imran Khan: ಕಡಿಮೆ ವಯಸ್ಸಿಗೆ ಸ್ಟಾರ್ ನಟನಾದ ಇಮ್ರಾನ್ ಖಾನ್, ಫೆರಾರಿ ಕಾರು, ಐಶಾರಾಮಿ ಬಂಗ್ಲೆಗಳನ್ನೆಲ್ಲ ಮಾರಿ ಹತ್ತು ವರ್ಷಗಳ ಕಾಲ ಎಲ್ಲದರಿಂದ ದೂರ ಉಳಿದು ಸಾಧಾರಣ ವ್ಯಕ್ತಿಯಂತೆ ಜೀವನ ನಡೆಸಿದರು. ಕಾರಣ?

ಐಶಾರಾಮಿ ಕಾರು, ಬಂಗ್ಲೆ ಮಾರಿ ಸಾಮಾನ್ಯರಂತೆ ಬದುಕಿದ ಮಾಜಿ ಸ್ಟಾರ್ ನಟ
ಮಂಜುನಾಥ ಸಿ.
|

Updated on: Feb 06, 2024 | 9:05 PM

Share

ಸಿನಿಮಾ ಸ್ಟಾರ್​ಗಳ (Movie) ಜೀವನ ಸದಾ ಐಶಾರಾಮಿ, ಗ್ಲಾಮರ್​ನಿಂದ ತುಂಬಿರುತ್ತದೆ. ಈಗಂತೂ ಒಂದೆರಡು ಸಿನಿಮಾ ಹಿಟ್ ಆಗಿಬಿಟ್ಟರೆ ಸಾಕು ನಟರು ಶ್ರೀಮಂತರಾಗಿಬಿಡುತ್ತಾರೆ. ಐಶಾರಾಮಿ ಕಾರು, ಬಂಗ್ಲೆಗಳನ್ನು ಖರೀದಿಸುತ್ತಾರೆ. ಬಾಲಿವುಡ್​ನಲ್ಲಿ ಸ್ಟಾರ್ ನಟ ಆಗಿದ್ದ ಇಮ್ರಾನ್, ಸಹ ಹೀಗೆಯೇ ಐಶಾರಾಮಿ ಕಾರು, ಬಂಗ್ಲೆಗಳನ್ನು ಹೊಂದಿದ್ದರು. ಆದರೆ ಅವೆಲ್ಲವನ್ನೂ ಮಾರಾಟ ಮಾಡಿ ಬರೋಬ್ಬರಿ ಹತ್ತು ವರ್ಷಗಳ ಕಾಲ ತೀರ ಸಾಮಾನ್ಯನ ರೀತಿ ಬದುಕಿದ್ದರು. ಅದೇಕೆ ಹಾಗೆ ಎಂಬುದನ್ನು ಅವರೇ ವಿವರಿಸಿದ್ದಾರೆ.

ಆಮಿರ್ ಖಾನ್​ರ ಹತ್ತಿರದ ಸಂಬಂಧಿ ಇಮ್ರಾನ್ ಖಾನ್ ‘ಜಾನೆ ತು ಯ ಜಾನೆ ನ’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಸೂಪರ್-ಡೂಪರ್ ಹಿಟ್ ಆಯ್ತು. ಅದಾದ ಬಳಿಕ ಹಲವು ಸಿನಿಮಾಗಳ ಅವಕಾಶ ದೊರೆತವು ಕೆಲವು ಹಿಟ್ ಆದರೆ ಕೆಲವು ಫ್ಲಾಪ್ ಆದವು. 2008 ರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ಇಮ್ರಾನ್ ಖಾನ್ 2015ರ ವರೆಗೆ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅದಾದ ಬಳಿಕ ಹಠಾತ್ತನೆ ಚಿತ್ರರಂಗಿದಂದ ದೂರಾಗಿಬಿಟ್ಟರು.

ಸ್ಟಾರ್ ಆಗಿದ್ದಾಗ ಅವರ ಬಳಿ ದುಬಾರಿ ಕಾರಾದ ಫೆರಾರಿ ಇತ್ತು, ಮುಂಬೈನ ಪಾಲಿ ಹಿಲ್​ನಲ್ಲಿ ಐಶಾರಾಮಿ ಬಂಗ್ಲೆ ಇತ್ತು. ಐಶಾರಾಮಿ ಜೀವನವನ್ನೇ ಅವರು ಲೀಡ್ ಮಾಡುತ್ತಿದ್ದರು. ಆದರೆ 2015ರ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದ ಇಮ್ರಾನ್ ಖಾನ್, ತಮ್ಮ ಬಳಿ ಇದ್ದ ಫೆರಾರಿ ಕಾರು ಮಾರಿದರು. ಐಶಾರಾಮಿ ಬಂಗ್ಲೆ ಮಾರಾಟ ಮಾಡಿದರು. ಬಾಂದ್ರಾನಲ್ಲಿ ಸಾಧಾರಣ ಅಪಾರ್ಟ್​ಮೆಂಟ್​ನಲ್ಲಿ ಕುಟುಂಬದೊಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ:ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ

ಅವರೇ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ‘ಫೆರಾರಿ ಕಾರು ಮಾರಿ ಸಾಧಾರಣ ವೋಲ್ಕ್ಸ್ ವ್ಯಾಗನ್ ಕಾರು ಖರೀದಿಸಿದೆ. ಅಪಾರ್ಟ್​ಮೆಂಟ್​ನಲ್ಲಿ ಸಹ ಕೇವಲ ಐದು ತಟ್ಟೆ, ಐದು ಚಮಚ, ಒಂದು ಕುಕ್ಕರ್, ಒಂದು ಪ್ಯಾನ್ ಇಷ್ಟನ್ನೇ ಇಟ್ಟುಕೊಂಡಿದ್ದೆವು. ಒಂದೇ ರೆಬನ್ ಗ್ಲಾಸ್​ ಅನ್ನು ಬರೋಬ್ಬರಿ ಹತ್ತು ವರ್ಷ ಬಳಸಿದೆ. ಈಗಲೂ ಅದನ್ನೇ ಬಳಸುತ್ತೇನೆ. ಇತ್ತೀಚೆಗಷ್ಟೆ ಆಮಿರ್ ಖಾನ್​ರ ಪುತ್ರಿ ಇರಾ ಖಾನ್ ಮದುವೆಗೆ ಹೋದಾಗ ಸಹ ಹತ್ತು ವರ್ಷದ ಹಿಂದೆ ನನ್ನ ಕೊನೆಯ ಸಿನಿಮಾದ ಪ್ರೆಸ್​ಮೀಟ್​ನಲ್ಲಿ ಧರಿಸಿದ್ದ ಕೋಟ್ ಅನ್ನೇ ಧರಿಸಿದ್ದೆ’ ಎಂದಿದ್ದಾರೆ.

2016ರ ಸಮಯದಲ್ಲಿ ನಾನು ವಯಕ್ತಿಕವಾಗಿ ಬಹಳ ಲೋ ಆಗಿಬಿಟ್ಟೆ. ಖಿನ್ನತೆ ಕಾಡಲಾರಂಭಿಸಿತು. ಹಣದ ಬಗ್ಗೆ ವ್ಯಾಮೋಹವೇ ಹೋಗಿಬಿಟ್ಟಿತು. ಅದೇ ಸಮಯಕ್ಕೆ ಮಗಳು ಜನಿಸಿದರು. ನನ್ನ ಕುಟುಂಬಕ್ಕಾಗಿ ನಾನು ಗಟ್ಟಿಯಾಗಬೇಕು ಎನಿಸಿತು. ಶಿಸ್ತಿನಿಂದ ಜೀವನ ನಡೆಸಬೇಕು ಎನಿಸಿತು. ಹಾಗಾಗಿ ನನ್ನ ವೈಯಕ್ತಿಕ ಆರೋಗ್ಯ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದೆ’ ಎಂದಿದ್ದಾರೆ.

ಇಮ್ರಾನ್ ಖಾನ್ ಹತ್ತು ವರ್ಷದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅಬ್ಬಾಸ್ ಟೈರ್​ವಾಲ ನಿರ್ದೇಶಿಸುತ್ತಿರುವ ವೆಬ್ ಸರಣಿಯಲ್ಲಿ ಇಮ್ರಾನ್ ನಟಿಸುತ್ತಿದ್ದು, ವೆಬ್ ಸರಣಿ ಜನಪ್ರಿಯ ಒಟಿಟಿಯೊಂದರಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್