
ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಎಚ್ಚರಿಕೆವಹಿಸಬೇಕು. ಇಲ್ಲವಾದಲ್ಲಿ ಅವಘಢಗಳು ಸಂಭವಿಸುತ್ತವೆ. ಕೆಲವೊಮ್ಮೆ ಎಚ್ಚರಿಕೆವಹಿಸಿದ ಹೊರತಾಗಿಯೂ ತೊಂದರೆ ಆಗುತ್ತದೆ. ಈಗ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಶೂಟಿಂಗ್ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಅವರ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ. ಈ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ತಮಾಷೆಯ ಶೀರ್ಷಿಕೆಯನ್ನೂ ನೀಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗಷ್ಟೇ ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾಣಿ ಹೊಸ ಸುದ್ದಿ ಹಂಚಿಕೊಂಡಿದ್ದರು. ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದರು. ಈ ದಂಪತಿಯ ಜೀವನದಲ್ಲಿ ಸಾಲು ಸಾಲು ಒಳ್ಳೆಯ ಬೆಳವಣಿಗೆಗಳು ನಡೆಯುತ್ತಿವೆ. ಈ ಖುಷಿಯ ನಡುವೆಯೇ ಅವರಿಗೆ ಗಾಯವಾಗಿರುವುದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ವಿಶೇಷವೆಂದರೆ, ‘ನಾನು ಬ್ರೇಕ್ ಎ ಲೆಗ್ (ಬ್ರೇಕ್ ಎ ಲೆಗ್ ಎಂದರೆ ಒಳ್ಳೆಯದಾಗಲಿ ಎಂಬ ಅರ್ಥ ಇಂಗ್ಲಿಷ್ನಲ್ಲಿದೆ) ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡೆ’ ಎಂದು ಅವರು ಇದಕ್ಕೆ ತಮಾಷೆಯ ಕ್ಯಾಪ್ಷನ್ ನೀಡಿದ್ದಾರೆ. ಈ ಪರಿಸ್ಥಿತಿಯಲ್ಲೂ ಅವರು ಕಾಮಿಡಿ ಮಾಡಿದ್ದು ವಿಶೇಷ.
ಅಕ್ಟೋಬರ್ 7ರಂದು ಈ ಜೋಡಿ ಸಿಹಿ ಸುದ್ದಿ ನೀಡಿತ್ತು. ಇನ್ಸ್ಟಾಗ್ರಾಮ್ನಲ್ಲಿ ಜಂಟಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಗುವಿನ ಪುಟ್ಟ ಪಾದರಕ್ಷೆಗಳ ಫೋಟೋ ಪೋಸ್ಟ್ ಮಾಡಿದ್ದರು. ‘ಮತ್ತೊಮ್ಮೆ ದೇವರ ಆಶೀರ್ವಾದ ಸಿಕ್ಕಿದೆ’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ‘ಟಾಕ್ಸಿಕ್’ ಚೆಲುವೆ ಕಿಯಾರಾ ಅಡ್ವಾಣಿ
ಸಿದ್ಧಾರ್ಥ್ ಮತ್ತು ಕಿಯಾರಾ 2023 ರಲ್ಲಿ ಮದುವೆಯಾಗಿದ್ದರು. 2025 ರ ಜುಲೈನಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗಳಿಗೆ ಸರಾಯ ಎಂದು ಹೆಸರಿಟ್ಟಿದ್ದಾರೆ. ವೃತ್ತಿಜೀವನದ ವಿಷಯಕ್ಕೆ ಬಂದರೆ ಸಿದ್ಧಾರ್ಥ್ ಇತ್ತೀಚೆಗೆ ತೆರೆಮೇಲೆ ಕಾಣಿಸಿಕೊಂಡಿದ್ದರು. ‘ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿದ್ದರು. ಈ ಸಿನಿಮಾ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಿತ್ತು. ಆದರೆ, ಸಿನಿಮಾ ಹೆಚ್ಚು ಗಮನ ಸೆಳೆಯಲು ವಿಫಲವಾಗಿದೆ. ಇನ್ನು, ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.