‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !

Sidharth Shukla:ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಅವರೀಗ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ತೆರಳಿದ್ದಾರೆ.

‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !
ಸಿದ್ಧಾರ್ಥ್​ ಶುಕ್ಲಾ

ಹಿಂದಿ ಉದಯೋನ್ಮುಖ ನಟ, ಬಿಗ್​ಬಾಸ್​ 13 ಸೀಸನ್​ ವಿಜೇತ ಸಿದ್ಧಾರ್ಥ್​ ಶುಕ್ಲಾ ಇಂದು ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ಧಾರ್ಥ್​ ಸಾವು ಅವರ ಕುಟುಂಬ, ಅಭಿಮಾನಿಗಳು, ಮಿತ್ರರು, ಸಹಕಲಾವಿದರಿಗೆಲ್ಲ ಬಹುದೊಡ್ಡ ಶಾಕ್​ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ ಸೋಷಿಯಲ್​ ಮೀಡಿಯಾದಲ್ಲಿ ಸಿದ್ಧಾರ್ಥ್​ ಶುಕ್ಲಾ ಅವರ ಹಳೇ ಟ್ವೀಟ್​ವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಸಿದ್ಧಾರ್ಥ್​ ಶುಕ್ಲಾ ತಮ್ಮ ಬ್ಯೂಸಿ ಶೆಡ್ಯೂಲ್​ ಮಧ್ಯೆಯೂ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತಿದ್ದರು. ಹಾಗೇ 2021ರ ಫೆಬ್ರವರಿ 24ರಂದು ಜೀವನದ ಬಗ್ಗೆ ಒಂದು ಅದ್ಭುತ ಸಂದೇಶವನ್ನು ಟ್ವೀಟ್​ ಮಾಡಿದ್ದರು. ಜೀವನ ತುಂಬ ಚಿಕ್ಕದು ಎಂದು ಹೇಳಿಕೊಂಡಿದ್ದರು. ಆ ಟ್ವೀಟ್​ ಕಾಕತಾಳೀಯವೆಂಬಂತೆ ಸ್ವತಃ ಸಿದ್ಧಾರ್ಥ್​ಗೇ ಅನ್ವಯ ಆಗಿದ್ದು ದುರಂತ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.

ಅಂದು ಶುಕ್ಲಾ ಮಾಡಿದ್ದ ಟ್ವೀಟ್ ಹೀಗಿದೆ: ‘ಬೇರೆಯವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ..ಯೋಚಿಸುತ್ತಾರೆ ಎಂದು ತಲೆಕೆಡಿಸಿಕೊಳ್ಳುವಷ್ಟೆಲ್ಲ ಜೀವನದಲ್ಲಿ ಸಮಯವಿಲ್ಲ. ಈ ಜೀವನ ತುಂಬ ಚಿಕ್ಕದು. ನಾವು ನಮ್ಮ ಬದುಕನ್ನು ಎಂಜಾಯ್​ ಮಾಡಬೇಕು ಮತ್ತು ಈ ಮೂಲಕ ಮಾತನಾಡುವವರಿಗೆ ನಿಮ್ಮ ಬಗ್ಗೆ ಮಾತನಾಡಲು ಏನಾದರೂ ವಿಷಯ ನೀವೇ ಕೊಡಬೇಕು..’

ಬರೀ ಇಷ್ಟೇ ಅಲ್ಲ, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕೂಡ ಸಿದ್ಧಾರ್ಥ್​ ಶುಕ್ಲಾ ಜೀವನದಕ್ಕೆ ಸಂಬಂಧಪಟ್ಟಂತೆ ತಮ್ಮ ವಿಚಾರಧಾರೆಯನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದರು. ‘ನೀವು ಇವತ್ತು ಏನು ಮಾಡುತ್ತಿರೋ? ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಕುರಿಗಳಂತೆ ಇದ್ದು ಸುದೀರ್ಘ ಜೀವನವನ್ನು ನಡೆಸುವ ಬದಲು, ಒಂದೇ ದಿನವಾದರೂ ಸರಿ ಸಿಂಹದಂತೆ ಬದುಕಬೇಕು’ ಎಂದು ಹೇಳಿದ್ದರು.

40ವರ್ಷಕ್ಕೇ ಜೀವನ ಅಂತ್ಯ
ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ಇದೀಗ 40 ವರ್ಷದಲ್ಲೇ ತಮ್ಮ ಪಯಣ ಮುಗಿಸಿ ಹೊರಟಿದ್ದಾರೆ. ಇಡೀ ಬಾಲಿವುಡ್​ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಸಿದ್ಧಾರ್ಥ್​ ನಿಧನ; ಗೆಳತಿ ಶೆಹನಾಜ್​ ಪರಿಸ್ಥಿತಿ ಹೇಗಿದೆ? ಪ್ರತಿಕ್ರಿಯೆ ನೀಡಿದ ತಂದೆ

Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ

Click on your DTH Provider to Add TV9 Kannada