ನಟಿ ಸೋನಾಕ್ಷಿ ಸಿನ್ಹಾ ಅವರು ಮದುವೆಯಾಗಿ ಈಗಿನ್ನೂ 2 ತಿಂಗಳು ಕಳೆಯುತ್ತಿದೆ. ಪ್ರಿಯಕರ ಝಹೀರ್ ಇಖ್ಬಾಲ್ ಜೊತೆ ಅವರು ಮದುವೆ ಆಗಿದ್ದು, ಆರಾಮಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಈ ನಡುವೆ ಒಂದು ಶಾಕಿಂಗ್ ವಿಚಾರ ತಿಳಿದುಬಂದಿದೆ. ಸೋನಾಕ್ಷಿ ಅವರು ಮುಂಬೈನಲ್ಲಿ ಇರುವ ತಮ್ಮ ಮನೆಯನ್ನು ಮಾರುತ್ತಿದ್ದಾರೆ ಎಂಬ ವಿಷಯ ಬಹಿರಂಗ ಆಗಿದೆ. ಬಹುಕೋಟಿ ರೂಪಾಯಿ ಬೆಲೆ ಬಾಳುವ ಈ ಮನೆಯನ್ನು ಅವರು ಯಾಕೆ ಮಾರುತ್ತಿದ್ದಾರೆ? ಅಂಥ ಅನಿವಾರ್ಯತೆ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಸೋನಾಕ್ಷಿ ಸಿನ್ಹಾ ಅವರು ಮನೆ ಹೊಂದಿದ್ದರು. ಸಮುದ್ರ ಕಡೆಗೆ ಮುಖ ಮಾಡಿರುವ ಈ ಫ್ಲಾಟ್ ತುಂಬ ವಿಶಾಲವಾಗಿದೆ. 4200 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ವಿಶಾಲವಾದ 2 ಬೆಡ್ ರೂಮ್ ಇದೆ. ಅಸಲಿಗೆ, ಇದು 4 ಬೆಡ್ ರೂಮ್ನಷ್ಟು ವಿಶಾಲವಾದ ಜಾಗ. ಆದರೆ ಆ ಜಾಗದಲ್ಲಿ 2 ಬೆಡ್ ರೂಮ್ ಇದ್ದು, ಜಿಮ್, ಪ್ರೈವೇಟ್ ಲಿಫ್ಟ್ ಮುಂತಾದ ಸೌಕರ್ಯಗಳು ಇವೆ.
ಇದನ್ನೂ ಓದಿ: ಐದೇ ನಿಮಿಷದಲ್ಲಿ ಮದುವೆ ಡ್ರೆಸ್ ಆಯ್ಕೆ ಮಾಡಿದ್ದ ನಟಿ ಸೋನಾಕ್ಷಿ ಸಿನ್ಹಾ; ಹೇಗೆ ಸಾಧ್ಯ?
ರಿಯಲ್ ಎಸ್ಟೇಟ್ ಕಂಪನಿಯೊಂದು ಈ ಮನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಮನೆಯ ಎಲ್ಲ ಕೋಣೆಯನ್ನು ತೋರಿಸಲಾಗಿದೆ. ಎಲ್ಲಿಯೂ ಇದು ಸೋನಾಕ್ಷಿ ಸಿನ್ಹಾ ಅವರ ಮನೆ ಎಂದು ಉಲ್ಲೇಖಿಸಿಲ್ಲ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರಿಗೆ ಇದು ಸೋನಾಕ್ಷಿಯ ಮನೆ ಎಂಬುದು ಖಚಿತವಾಗಿದೆ. ಸ್ವತಃ ಸೋನಾಕ್ಷಿ ಸಿನ್ಹಾ ಕೂಡ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಲೈಕ್ ಮಾಡಿದ್ದಾರೆ.
ಅಂದಹಾಗೆ, ಈ ಮನೆಯ ಬೆಲೆ ಬರೋಬ್ಬರಿ 25 ಕೋಟಿ ರೂಪಾಯಿ! ಮುಂಬೈ ಮಹಾನಗರದಲ್ಲಿ ಇಷ್ಟು ದುಬಾರಿ ಬೆಲೆ ಬಾಳುವ ಆಸ್ತಿಯನ್ನು ಮಾರುವುದು ಎಂದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇತ್ತೀಚೆಗಷ್ಟೇ ಮದುವೆ ಆಗಿರುವ ಸೋನಾಕ್ಷಿ ಸಿನ್ಹಾ ಅವರು ಮನೆ ಮಾರಾಟ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರ ಮದುವೆ ನಡೆದಿದ್ದು ಕೂಡ ಇದೇ ಮನೆಯಲ್ಲಿ. ಈಗ ಅವರಿಗೆ ಹಣದ ಕೊರತೆ ಉಂಟಾಗಿರಬಹುದೇ ಎಂಬ ಪ್ರಶ್ನೆ ಸಹ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಸೋನಾಕ್ಷಿ ಸಿನ್ಹಾ ಉತ್ತರ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.