ಸೋನಾಕ್ಷಿ ಸಿನ್ಹಾ ಮದುವೆ ಬಳಿಕ ಆಸ್ಪತ್ರೆಗೆ ದಾಖಲಾದ ತಂದೆ ಶತ್ರುಘ್ನ ಸಿನ್ಹಾ; ಕಾರಣ ಏನು?

|

Updated on: Jun 30, 2024 | 8:48 PM

7 ವರ್ಷಗಳ ಕಾಲ ಪ್ರೀತಿಸಿದ್ದ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್​ ಅವರು ಜೂ.23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯದ್ದು ಅಂತರ್​ಧರ್ಮೀಯ ವಿವಾಹ. ಮದುವೆ ನಂತರ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲಾದರು. ಆ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಯಿತು. ಈ ಕುರಿತು ಈಗ ಇನ್ನಷ್ಟು ಮಾಹಿತಿ ಸಿಕ್ಕಿದೆ.

ಸೋನಾಕ್ಷಿ ಸಿನ್ಹಾ ಮದುವೆ ಬಳಿಕ ಆಸ್ಪತ್ರೆಗೆ ದಾಖಲಾದ ತಂದೆ ಶತ್ರುಘ್ನ ಸಿನ್ಹಾ; ಕಾರಣ ಏನು?
ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​, ಶತ್ರುಘ್ನ ಸಿನ್ಹಾ
Follow us on

ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ನಟ ಝಹಿರ್​ ಇಖ್ಬಾಲ್​ ಅವರು ಕೆಲವೇ ದಿನಗಳ ಹಿಂದೆ ಮದುವೆ ಆದರು. ಇವರದ್ದು ಅಂತರ್​​ಧರ್ಮೀಯ ವಿವಾಹ. ಆ ಕಾರಣದಿಂದ ಅನೇಕರು ಈ ಜೋಡಿಯನ್ನು ಟ್ರೋಲ್​ ಮಾಡಿದ್ದರು. ಈ ಮದುವೆಗೆ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ (Sonakshi Sinha) ಒಪ್ಪಿಕೊಂಡಿರಲಿಲ್ಲ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು. ಆದರೆ ಆ ಸುದ್ದಿಯನ್ನು ಶತ್ರುಘ್ನ ಸಿನ್ಹಾ ತಳ್ಳಿ ಹಾಕಿದ್ದರು. ಮಗಳ ಮದುವೆಯಲ್ಲಿ ಅವರು ಖುಷಿಯಿಂದ ಭಾಗಿ ಆಗಿದ್ದರು. ಆದರೆ ಅದಾದ ಬಳಿಕ ಅವರು ಮುಂಬೈ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅದಕ್ಕೆ ಕಾರಣ ಏನು ಎಂಬುದು ಈಗ ಬಹಿರಂಗ ಆಗಿದೆ.

ಸೋನಾಕ್ಷಿ ಸಿನ್ಹಾ ಅವರು ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡೇ ದಿನಗಳಲ್ಲಿ ಶತ್ರುಘ್ನ ಸಿನ್ಹಾ ಅವರು ಆಸ್ಪತ್ರೆಗೆ ದಾಖಲಾಗಿದ್ದು ನೋಡಿ ಅಭಿಮಾನಿಗಳಿಗೆ ಶಾಕ್​ ಆಯಿತು. ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್​ ಜೊತೆಯಾಗಿ ಆಸ್ಪತ್ರೆಗೆ ಹೋಗಿ ಶತ್ರುಘ್ನ ಸಿನ್ಹಾ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ನಟನ ಆರೋಗ್ಯದಲ್ಲಿ ಏರುಪೇರು ಆಗಿದ್ದಕ್ಕೆ ಕಾರಣ ತಿಳಿದುಬಂದಿದೆ.

ವರದಿಗಳ ಪ್ರಕಾರ, ಶತ್ರುಘ್ನ ಸಿನ್ಹಾ ಅವರು ಮನೆಯಲ್ಲಿ ಸೋಫಾ ಮೇಲೆ ಕುಳಿತಿದ್ದರು. ಅಲ್ಲಿಂದ ಮೇಲೇಳುವಾಗ ಅವರು ಆಯ ತಪ್ಪಿ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಅವರ ಪಕ್ಕೆಲುಬಿಗೆ ಪೆಟ್ಟಾಗಿದೆ. ಈ ಘಟನೆ ನಡೆದಾಗ ಸೋನಾಕ್ಷಿ ಸಿನ್ಹಾ ಕೂಡ ಮನೆಯಲ್ಲೇ ಇದ್ದರು. ಹಾಗಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಭಿಮಾನಿಗಳು ಆತಂಕ ಪಡುವುದು ಬೇಡ ಎನ್ನಲಾಗಿದೆ. ಅವರಿಗೆ ಜ್ವರ ಮತ್ತು ನಿಶಕ್ತಿ ಕೂಡ ಉಂಟಾಗಿದೆ ಎಂದು ವರದಿ ಆಗಿದೆ.

ಬಣ್ಣದ ಲೋಕದಲ್ಲಿ ಗಾಸಿಪ್​ಗಳಿಗೆ ಕೊರತೆ ಇಲ್ಲ. ಸೋನಾಕ್ಷಿ ಸಿನ್ಹಾ ಅವರು ಬೇರೆ ಧರ್ಮದ ಯುವಕನ ಜೊತೆ ಮದುವೆ ಆಗಿದ್ದರಿಂದ ಶತ್ರುಘ್ನ ಸಿನ್ಹಾ ಅವರು ಬೇಸರ ಮಾಡಿಕೊಂಡಿರಬಹುದು. ಅದೇ ಚಿಂತೆಯಲ್ಲಿ ಅವರಿಗೆ ಆರೋಗ್ಯ ಕೈಕೊಟ್ಟಿರಬಹುದು ಎಂದು ಕೆಲವರು ಮಾತನಾಡಿಕೊಂಡಿದ್ದರು. ಆದರೆ ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಅಸಲಿ ಕಾರಣ ಏನು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮದುವೆ ಮುಗಿದ ಬೆನ್ನಲ್ಲೇ ಚೆಕಪ್​ಗೆ ಆಸ್ಪತ್ರೆಗೆ ತೆರಳಿದ ಸೋನಾಕ್ಷಿ; ಹುಟ್ಟಿದೆ ಪ್ರೆಗ್ನೆನ್ಸಿ ಸುದ್ದಿ

ಕಳೆದ 7 ವರ್ಷಗಳಿಂದ ಝಹೀಲ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಪ್ರೀತಿಯ ಬಗ್ಗೆ ಮಾಹಿತಿ ಹೊರಬಿತ್ತು. ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ಮದುವೆ ನೆರವೇರಿತು. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಆರತಕ್ಷತೆ ಸಮಾರಂಭಕ್ಕೆ ತೆರಳಿ ನವ ಜೋಡಿಗೆ ಅಭಿನಂದನೆ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.