ಬಾಲಿವುಡ್ನಲ್ಲಿ ಸೋನಾಕ್ಷಿ ಸಿನ್ಹಾ ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್ಗಳು ಬರುತ್ತಿಲ್ಲ. ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಬಾಲಿವುಡ್ನಲ್ಲಿ ಹೊರಗಿನವರನ್ನು ಪರೋಕ್ಷವಾಗಿ ಟೀಕಿಸಿದ್ದು, ನಮಗೂ ಆಫರ್ಗಳು ಕೈತಪ್ಪುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.
ಸ್ಟಾರ್ ನಟರ ಮಕ್ಕಳು ಹಾಗೂ ಹೊರಗಿನವರು ಎನ್ನುವ ಎರಡು ವರ್ಗದಲ್ಲಿ ಬಾಲಿವುಡ್ಅನ್ನು ವಿಂಗಡಿಸಲಾಗುತ್ತದೆ. ಸ್ಟಾರ್ ನಟರಿಂದ ನಮ್ಮ ಆಫರ್ ಕೈ ತಪ್ಪಿತು ಎಂದು ಹೊರಗಿನವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸುಶಾಂತ್ ಸಿಂಗ್ಗೆ ಸಿನಿಮಾಆಫರ್ಗಳು ತಪ್ಪಿ ಹೋಗುವುದಕ್ಕೆ ಸಾಕಷ್ಟು ಸ್ಟಾರ್ ನಿರ್ದೇಶಕರ ಕೈವಾಡ ಇತ್ತು ಎನ್ನುವ ಆರೋಪ ಇದೆ. ಹೀಗಿರುವಾಗಲೇ ಸೋನಾಕ್ಷಿ ಈ ಬಗ್ಗೆ ಮಾತನಾಡಿದ್ದಾರೆ.
‘ನಮಗೆ ಬಂದ ಸಿನಿಮಾ ಬೇರೆಯವರ ಕೈ ಸೇರುವುದು ಸರ್ವೇ ಸಾಮಾನ್ಯ. ಈ ವಿಚಾರದಲ್ಲಿ ಸ್ಟಾರ್ ಕಿಡ್ಗಳನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲ. ಸ್ಟಾರ್ ನಟರ ಮಕ್ಕಳೂ ಸಿನಿಮಾ ಆಫರ್ ಕಳೆದುಕೊಂಡ ಉದಾಹರಣೆ ಇದೆ. ಆದರೆ, ಅವರು ಹೋಗಿ ಎಲ್ಲರ ಎದುರು ಅತ್ತಿಲ್ಲ. ಈ ರೀತಿ ಎಲ್ಲರಿಗೂ ಆಗುತ್ತದೆ. ಇದು ಜೀವನ. ಅದನ್ನು ಎದುರಿಸಿ’ ಎಂದು ಸೋನಾಕ್ಷಿ ಕಿವಿಮಾತು ಹೇಳಿದ್ದಾರೆ.
ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್ ಖಾನ್ ನಟನೆಯ ದಬಾಂಗ್ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.
ಇದನ್ನೂ ಓದಿ: ಬಾಲಯ್ಯನ ಜೊತೆ ನಟಿಸ್ತಿಲ್ವಂತೆ ಸೋನಾಕ್ಷಿ, ಹೊಸ ಸಿನಿಮಾ ಬಗ್ಗೆ ಶೀಘ್ರವೇ ಕೊಡ್ತಾರಂತೆ ಸುದ್ದಿ
Published On - 6:59 pm, Wed, 29 September 21