Aryan Khan: ಶಾರುಖ್ ಪುತ್ರ ಆರ್ಯನ್​ಗೆ ಜಾಮೀನು ಸಿಗಲಿದೆಯೇ?; ಇಂದು ತೀರ್ಪು ನೀಡಲಿದೆ ನ್ಯಾಯಾಲಯ

Aryan Khan Bail Hearing: ಮುಂಬೈನ ಐಷಾರಾಮಿ ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿ ವೇಳೆ ಬಂಧಿಸಲಾಗಿದ್ದ ಆರ್ಯನ್ ಖಾನ್ ಜಾಮೀನಿನ ತೀರ್ಪು ಇಂದು ಹೊರಬರಲಿದೆ. ಪ್ರಸ್ತುತ ಆರ್ಯನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

Aryan Khan: ಶಾರುಖ್ ಪುತ್ರ ಆರ್ಯನ್​ಗೆ ಜಾಮೀನು ಸಿಗಲಿದೆಯೇ?; ಇಂದು ತೀರ್ಪು ನೀಡಲಿದೆ ನ್ಯಾಯಾಲಯ
ಆರ್ಯನ್ ಖಾನ್
Edited By:

Updated on: Oct 20, 2021 | 10:45 AM

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಜಾಮೀನಿನ ಕುರಿತು ತೀರ್ಪು ಹೊರಬರಲಿದೆ. ಮುಂಬೈನ NDPS​ ನ್ಯಾಯಾಲಯವು ಜಾಮೀನಿನ ಸಂಬಂಧ ಈಗಾಗಲೇ ವಿಚಾರಣೆಯನ್ನು ನಡೆಸಿ, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಐಷಾರಾಮಿ ಕ್ರೂಸ್ ಶಿಪ್​ನಲ್ಲಿ ಡ್ರಗ್ಸ್ ಪಾರ್ಟಿ ವೇಳೆ ಆರ್ಯನ್ ಅವರನ್ನು ಎನ್​ಸಿಬಿ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಆರ್ಯನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2ರಂದು ಬಂಧಿಸಲಾಗಿತ್ತು. ಅಕ್ಟೋಬರ್ 3ರಂದು ಒಂದು ದಿನದ ಕಾಲ ಎನ್​ಸಿಬಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ನಂತರ ಅಕ್ಟೋಬರ್ 4ರಂದು ಆರ್ಯನ್ ಖಾನ್, ಅರ್ಬಾಜ್ ಮರ್ಚಂಟ್ ಹಾಗೂ ಮುನ್ಮುನ್ ಧಮ್ಮೇಚಾ ಅವರನ್ನು 7 ದಿನಗಳ ಕಾಲ ಎನ್​ಸಿಬಿಗೆ ಒಪ್ಪಿಸಲಾಯಿತು. ನಂತರ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈಗಾಗಲೇ ಕೆಲವು ಬಾರಿ ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಡೆದು, ಬೇಲ್ ನಿರಾಕರಿಸಲಾಗಿತ್ತು. ಆರ್ಯನ್ ಪರ ಖ್ಯಾತ ವಕೀಲ ಸತೀಶ್ ಮಾನಶಿಂಧೆ ವಾದ ಮಂಡಿಸಿದ್ದರು. ಕಳೆದ ಬಾರಿಯ ವಿಚಾರಣೆಯಿಂದ ನಟ ಸಲ್ಮಾನ್ ಖಾನ್​ ಪರ ಹಿಟ್ ಆಂಡ್ ರನ್ ಪ್ರಕರಣದಲ್ಲಿ ವಾದ ಮಂಡಿಸಿದ್ದ ಅಮಿತ್ ದೇಸಾಯಿ, ಆರ್ಯನ್ ಪರ ವಕೀಲರಾಗಿದ್ದಾರೆ. ಆದ್ದರಿಂದ ಇಂದು ಹೊರಬರುವ ತೀರ್ಪು ಕುತೂಹಲ ಕೆರಳಿಸಿದೆ.

ಆರ್ಯನ್​ ಖಾನ್​ಗೆ ಜೈಲಿನಲ್ಲಿ ಕೌನ್ಸೆಲಿಂಗ್ ನೀಡಲಾಗಿದೆ ಎಂದು ವರದಿಯಾಗಿತ್ತು. ಅಲ್ಲಿ ಅವರು ಇನ್ನು ಮುಂದೆ ಒಳ್ಳೆಯ ಮನುಷ್ಯನಾಗುತ್ತೇನೆ ಎಂದು ತಿಳಿಸಿದ್ದಾರೆ. ಹಾಗೂ ಅವರಿಗೆ ತಪ್ಪಿನ ಅರಿವಾಗಿದೆ ಎಂದೂ ಹೇಳಲಾಗಿತ್ತು. ಇತ್ತ ಶಾರುಖ್ ಕುಟುಂಬ ಸಂಪೂರ್ಣವಾಗಿ ಮೌನ ತಳೆದಿದೆ. ಆರ್ಯನ್ ಬಂಧನದ ನಂತರ ಶಾರುಖ್ ಹಾಗೂ ಪತ್ನಿ ಗೌರಿ ಖಾನ್ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಗೌರಿ ಖಾನ್ ಜನ್ಮದಿನವನ್ನೂ ಆಚರಿಸಿಕೊಂಡಿಲ್ಲ. ಮನೆಯಲ್ಲಿ ಬಾಣಸಿಗರಿಗೆ ಸಿಹಿಯನ್ನೂ ತಯಾರಿಸದಂತೆ ಅವರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​

ಆರ್ಯನ್‌ ಖಾನ್‌ ಈಗ ಖೈದಿ ನಂಬರ್ 956; ಕೋಟ್ಯಧಿಪತಿ ಖಾನ್ ಕುಟುಂಬ ಆರ್ಯನ್​ಗೆ ನೀಡಿರೋ ಮನಿ ಆರ್ಡರ್ ಎಷ್ಟು ಸಾವಿರ?

Published On - 10:32 am, Wed, 20 October 21