ನಿರ್ಮಾಣಗೊಂಡಿದೆ ಆಲಿಯಾ-ರಣ್ಬೀರ್ರ 250 ಕೋಟಿ ಮೌಲ್ಯದ ಮನೆ, ವಿಶೇಷತೆಗಳೇನು?
Alia Bhatt and Ranbir Kapoor: ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅವರು ಮುಂಬೈನ ಬಾಂದ್ರಾನಲ್ಲಿ ಭಾರಿ ಐಶಾರಾಮಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. 250 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಲಾಗಿರುವ ಈ ಐಶಾರಾಮಿ ಮನೆಯಲ್ಲಿ ಹಲವು ವಿಶೇಷತೆಗಳು ಇವೆ. ಈ ಮನೆಯ ವಿಶೇಷತೆಗಳೇನು? ಈ ಮನೆಗೆ 250 ಕೋಟಿ ರೂಪಾಯಿ ಖರ್ಚಾಗಿರುವುದು ಏಕೆ? ಇಲ್ಲಿದೆ ಮಾಹಿತಿ...

ಆಲಿಯಾ ಭಟ್ (Alia Bhatt) ಮತ್ತು ರಣ್ಬೀರ್ ಕಪೂರ್ (Ranbir Kapoor) ಅವರದ್ದು ಬಾಲಿವುಡ್ನ ನಂಬರ್ 1 ತಾರಾ ಜೋಡಿ. ಹಿಟ್, ಸಂಭಾವನೆ ಲೆಕ್ಕಾಚಾರದಲ್ಲಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಜೋಡಿಗಿಂತಲೂ ತುಸು ಎತ್ತರದ್ದೇ ಇದೆ ಆಲಿಯಾ-ರಣ್ಬೀರ್ ಅವರ ಜೋಡಿ. ಆಲಿಯಾ ಮತ್ತು ರಣ್ಬೀರ್ ಕಪೂರ್ ವಿವಾಹವಾಗಿ ಮೂರು ವರ್ಷಗಳಾಗಿದ್ದು ಈ ಜೋಡಿಗೆ ಮುದ್ದಾದ ಹೆಣ್ಣು ಮಗುವೊಂದಿದೆ. ಇದೀಗ ಈ ತಾರಾ ಜೋಡಿ ತಮಗಾಗಿ ಬಲು ಐಶಾರಾಮಿಯಾದ ಮನೆಯೊಂದನ್ನು ನಿರ್ಮಿಸಿದ್ದಾರೆ. ಮನೆಯ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹಲವು ವಿಶೇಷತೆಗಳನ್ನು ಈ ಮನೆ ಒಳಗೊಂಡಿದೆ.
ಮುಂಬೈನ ಐಶಾರಾಮಿ ಏರಿಯಾ ಎಂದೇ ಹೆಸರಾಗಿರುವ ಬಾಂದ್ರಾದ ಪಾಲಿ ಹಿಲ್ಸ್ನಲ್ಲಿ ತಮ್ಮದೇ ಪೂರ್ವಜರ ಸ್ಥಳದಲ್ಲಿ ಐಶಾರಾಮಿ ಮನೆಯನ್ನು ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಕೃಷ್ಣರಾಜ್ ಬಂಗ್ಲೆ ಇದ್ದ ತಮ್ಮ ತಾತನ ಜಾಗದಲ್ಲಿ ಇದೀಗ ಐಶಾರಾಮಿ ಮನೆ ನಿರ್ಮಿಸಲಾಗಿದ್ದು, ಈ ಹೊಸ ಮನೆ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ರ ಪುತ್ರಿ ರಾಹಾ ಹೆಸರಿನಲ್ಲಿ ನೊಂದಣಿ ಆಗಿರುವುದು ವಿಶೇಷ.
ರಣ್ಬೀರ್-ಆಲಿಯಾ ನಿರ್ಮಾಣ ಮಾಡಿರುವ ಮನೆಯ ಬೆಲೆ ಬರೋಬ್ಬರಿ 250 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಈ ಐಶಾರಾಮಿ ಮನೆ ಹಲವು ವಿಶೇಷ ಸೌಲಭ್ಯಗಳನ್ನು, ತಂತ್ರಜ್ಞಾನವನ್ನು ಹೊಂದಿವೆಯಂತೆ. ವಿಶ್ವದ ಅತ್ಯುತ್ತಮ ವಸ್ತುಗಳನ್ನು ಬಳಸಿ ಈ ಮನೆಯನ್ನು ರಣ್ಬೀರ್ ಹಾಗೂ ಆಲಿಯಾ ನಿರ್ಮಿಸಿದ್ದಾರೆ. ಅತ್ಯುತ್ತಮ ಟೈಲ್ಸ್, ಫರ್ನೀಚರ್ಗಳು, ಅಲಂಕಾರಿಕ ದೀಪಗಳು, ಸೋಫಾಗಳನ್ನು ಈ ಮನೆಗೆ ತರಲಾಗಿದೆ.
ಇದನ್ನೂ ಓದಿ:ಇವರು ಮತ್ತೋರ್ವ ಜಯಾ ಬಚ್ಚನ್’; ಆಲಿಯಾ ಭಟ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು
ಮನೆಯಲ್ಲಿ ಅತ್ಯುತ್ತಮ ಜಿಮ್, ಸ್ವಿಮ್ಮಿಂಗ್ ಪೂಲ್, ಮಗಳಿಗಾಗಿ ಆಟದ ಕೋಣೆ, ರಣ್ಬೀರ್ ಕಪೂರ್ಗಾಗಿ ಗೇಮ್ ಜೋನ್, ಖಾಸಗಿ ಚಿತ್ರಮಂದಿರ, ಕಚೇರಿ, ಖಾಸಗಿ ಬಾರ್, ದೊಡ್ಡ ಗರಾಜು, ಲೈಬ್ರೆರಿಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಮನೆಯ ಲಿಫ್ಟ್ ಕಾರುಗಳನ್ನು ಸಹ ಮೇಲಕ್ಕೆ ಹೊತ್ತೊಯ್ಯುತ್ತದೆ. ಗೇಟಿನ ಒಳಗೆ ಹೋಗುವ ಕಾರು ಲಿಫ್ಟ್ ಮೂಲಕ ನೇರವಾಗಿ ಮನೆಯ ಹಾಲ್ ಬಳಿ ಹೋಗಿ ನಿಲ್ಲುತ್ತದೆಯಂತೆ. ಜೊತೆಗೆ ಈ ಮನೆಗೆ ಅತ್ಯುತ್ತಮ ಭದ್ರತಾ ವ್ಯವಸ್ಥೆಯನ್ನು ಸಹ ನೀಡಲಾಗಿದೆ.
ಎರಡು ದಿನದ ಹಿಂದಷ್ಟೆ ಈ ಮನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋನಲ್ಲಿ ಮನೆಯ ಒಳಾಂಗಣ ವಿನ್ಯಾಸ ಕಾಣುತ್ತಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತುಸು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಆಲಿಯಾ ಭಟ್. ಮುಂಬೈ ಅಂಥಹಾ ನಗರಗಳಲ್ಲಿ ಒಂದು ಮನೆಯ ಕಿಟಕಿ ತೆಗೆದರೆ ಇನ್ನೊಂದು ಮನೆಯ ಲಿವಿಂಗ್ ರೂಮ್ ಕಾಣುತ್ತದೆ. ಹಾಗೆಂದು ಅವುಗಳನ್ನು ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ಖಾಸಗಿತನದ ಉಲ್ಲಂಘನೆಯಾಗಿದೆ’ ಎಂದಿದ್ದಾರೆ. ಇದೇ ವರ್ಷವೇ ಈ ಮನೆಯ ಗೃಹ ಪ್ರವೇಶ ನಡೆಯಲಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




