ಶ್ರೀ ಶ್ರೀ ರವಿಶಂಕರ್ ಗುರೂಜಿ ಬಯೋಪಿಕ್​ನಲ್ಲಿ ವಿಕ್ರಾಂತ್; ಸಿನಿಮಾದಲ್ಲಿ ಏನೆಲ್ಲ ಇರಲಿದೆ?

ಸಿದ್ದಾರ್ಥ್ ಆನಂದ್ ನಿರ್ಮಿಸುತ್ತಿರುವ ಶ್ರೀ ಶ್ರೀ ರವಿಶಂಕರ್ ಅವರ ಬಯೋಪಿಕ್‌ನಲ್ಲಿ ವಿಕ್ರಾಂತ್ ಮಾಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರವಿಶಂಕರ್ ಅವರ ಜೀವನದ ವಿವಿಧ ಹಂತಗಳು ಮತ್ತು ಅವರ ಅಂತಾರಾಷ್ಟ್ರೀಯ ಶಾಂತಿ ಪ್ರಯತ್ನಗಳನ್ನು ಚಿತ್ರ ಪ್ರದರ್ಶಿಸಲಿದೆ. ವಿಕ್ರಾಂತ್ ಈ ಪಾತ್ರವನ್ನು ಒಂದು ದೊಡ್ಡ ಜವಾಬ್ದಾರಿ ಎಂದು ಪರಿಗಣಿಸಿದ್ದು, ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಶ್ರೀ ಶ್ರೀ ರವಿಶಂಕರ್ ಗುರೂಜಿ ಬಯೋಪಿಕ್​ನಲ್ಲಿ ವಿಕ್ರಾಂತ್; ಸಿನಿಮಾದಲ್ಲಿ ಏನೆಲ್ಲ ಇರಲಿದೆ?
ವಿಕ್ರಾಂತ್-ಶ್ರೀ ಶ್ರೀ ರವಿಶಂಕರ್

Updated on: Jul 11, 2025 | 11:47 AM

ಬಾಲಿವುಡ್​ನಲ್ಲಿ ಸಾಕಷ್ಟು ಆ್ಯಕ್ಷನ್ ಸಿನಿಮಾಗಳನ್ನು ನೀಡಿರುವ ಸಿದ್ದಾರ್ಥ್ ಆನಂದ್ ಅವರು ಈಗ ಬಯೋಪಿಕ್ ಮಾಡುವತ್ತ ಗಮನ ಹರಿಸುತ್ತಿದ್ದಾರೆ. ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಮೇಲೆ ಜೀವನ ಚರಿತ್ರೆಯನ್ನು ತೆರೆಮೇಲೆ ತರುವ ಪ್ರಯತ್ನದಲ್ಲಿ ಇದ್ದಾರೆ. ಅವರ ಜರ್ನಿಯಲ್ಲಿನ ಅಪರೂಪದ ವಿಚಾರಗಳನ್ನು ಪ್ರೇಕ್ಷಕರ ಎದುರು ಇಡಲಿದ್ದಾರೆ. ಈ ಸಿನಿಮಾದಲ್ಲಿ ವಿಕ್ರಾಂತ್ ಮಾಸಿ (Vikrant Massy) ಅವರು ಶ್ರೀ ಶ್ರೀ ರವಿಶಂಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರವಿಶಂಕರ್ ಗುರೂಜಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ವಿಕ್ರಾಂತ್ ಅವರು ಈ ಪಾತ್ರವನ್ನು ಮಾಡುವುದಕ್ಕೆ ಖುಷಿಪಟ್ಟಿದ್ದಾರೆ. ಅಲ್ಲದೆ ಇದೊಂದು ದೊಡ್ಡ ಜವಾಬ್ದಾರಿ ಎಂದು ಅವರು ಪರಿಗಣಿಸಿದ್ದಾರೆ.

‘ಇದು ಅವರ ಜೀವನ ಮತ್ತು ವಿಶ್ವ ಇತಿಹಾಸದ ಒಂದು ಪ್ರಮುಖ ಭಾಗ. ಕೊಲಂಬಿಯಾದಲ್ಲಿ ಮತ್ತು ವಿಶ್ವ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಅವರ ಕೊಡುಗೆಯ ಬಗ್ಗೆ ಭಾರತದಲ್ಲಿ ಅನೇಕರಿಗೆ ತಿಳಿದಿಲ್ಲ ಎಂಬುದು ದುರದೃಷ್ಟಕರ. ಈ ಚಿತ್ರದ ಮೂಲಕ ಆ ವಿಷಯಗಳನ್ನು ಹೇಳುತ್ತಿದ್ದೇವೆ. ಅವರ ಪಾತ್ರವನ್ನು ಮಾಡುತ್ತಿರುವುದೇ ಒಂದು ಗೌರವ. ನಾನು ಎಂದಿಗೂ ಅವರಾಗಲು ಸಾಧ್ಯವಿಲ್ಲ. ಆದರೆ ನಾನು ಅವರಾಗಲು ಪ್ರಯತ್ನಿಸಬಹುದು. ನನ್ನ ಪ್ರಯತ್ನವು ಅವರ ಪ್ರಯತ್ನಗಳಷ್ಟೇ ಪ್ರಾಮಾಣಿಕವಾಗಿರಲಿ ಎಂದು ನಾನು ಆಶಿಸುತ್ತೇನೆ’ ಎಂದು ವಿಕ್ರಾಂತ್ ಮಾಸಿ ಹೇಳಿದ್ದಾರೆ.

ಇದನ್ನೂ ಓದಿ
ನಟ ದರ್ಶನ್ ಬಳಿಯೂ ಇತ್ತು ಹಮ್ಮರ್; ಮಾರಿದ್ದು ಏಕೆ?
‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಭೂಮಿಕಾಗೆ ಅವಳಿ ಮಕ್ಕಳು
‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ
TRPಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’

ಕಳೆದ ವರ್ಷ ವಿಕ್ರಾಂತ್ ಮಾಸ್ಸಿ ಅವರು ಶ್ರೀ ಶ್ರೀ ಅವರನ್ನು ಭೇಟಿ ಆದರು. ಆ ಭೇಟಿ ಅವರ ಮೇಲೆ ವೈಯಕ್ತಿಕವಾಗಿ ಶಾಶ್ವತವಾದ ಪ್ರಭಾವ ಬೀರಿತು. ‘ಅವರೊಂದಿಗೆ ಕಳೆದ ಪ್ರತಿ ಕ್ಷಣವೂ ನನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ನನಗೆ ಆ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ. ಆಗಸ್ಟ್‌ನಲ್ಲಿ ಶೂಟಿಂಗ್ ಆರಂಭ ಆಗಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ

ವಿಕ್ರಾಂತ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಾರೆ. ಅವರು ‘12th ಫೇಲ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು. ‘ಡಾನ್ 3’ ಹಾಗೈ ‘ರಾಮಾಯಣ’ ಸಿನಿಮಾಗಳಲ್ಲಿ ವಿಕ್ರಾಂತ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 9:07 am, Fri, 11 July 25