ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ರಾಜಮೌಳಿ (SS Rajamouli) ಸೋಲಿಲ್ಲದ ಸರದಾರ. ದೊಡ್ಡ ಕನಸು ಕಾಣುವ ಅವರು ಅದನ್ನು ನನಸಾಗಿಸಿ ತೋರಿಸುತ್ತಾರೆ. ‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾಗಳನ್ನು ಮಾಡಿ ಜಗತ್ತಿನಾದ್ಯಂತ ಫೇಮಸ್ ಆದ ಅವರು ಈಗ ಆರ್ಆರ್ಆರ್ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಸಿನಿಮಾ ಮಾಡಲು ಹಲವು ವರ್ಷಗಳ ಸಮಯ ಮೀಸಲಿಡುವುದು ಅವರ ಸ್ಟೈಲ್. ಅದರಿಂದಾಗಿ ಅವರು ಬೇರೆ ಕೆಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಬೇಕಾಗುತ್ತದೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ಸಿನಿಮಾ ಮಾಡುವ ಅವಕಾಶವನ್ನು ಕೂಡ ಅವರು ಕೈ ಚೆಲ್ಲಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ.
2015ರಲ್ಲಿ ಸಲ್ಮಾನ್ ಖಾನ್ ನಟಿಸಿದ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಅದಕ್ಕೆ ನಿರ್ದೇಶನ ಮಾಡಿದವರು ಕಬೀರ್ ಖಾನ್. ಕಥೆ ಬರೆದವರು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್. ರಾಜಮೌಳಿ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂಬುದು ವಿಜಯೇಂದ್ರ ಪ್ರಸಾದ್ ಅವರ ಆಸೆ ಆಗಿತ್ತು. ಆದರೆ ಅವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಆ ಆಸೆ ಈಡೇರಲಿಲ್ಲ. ಆ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್ ಈಗ ಬಾಯಿ ಬಿಟ್ಟಿದ್ದಾರೆ.
‘ಒಂದು ಸೂಕ್ತವಲ್ಲದ ಸಮಯದಲ್ಲಿ ನಾನು ನನ್ನ ಮಗನಿಗೆ ಬಜರಂಗಿ ಭಾಯಿಜಾನ್ ಚಿತ್ರದ ಕಥೆ ಹೇಳಿದೆ. ಆ ಸಂದರ್ಭದಲ್ಲಿ ಅವನು ಬಾಹುಬಲಿ ಚಿತ್ರದಲ್ಲಿನ ಯುದ್ಧದ ಸನ್ನಿವೇಶದ ಶೂಟಿಂಗ್ ಮಾಡುತ್ತಿದ್ದ. ಅದು ತುಂಬ ಬ್ಯುಸಿ ಸಮಯವಾಗಿತ್ತು. ನಮ್ಮೆಲ್ಲರ ಗಮನ ಶೂಟಿಂಗ್ ಮೇಲಿತ್ತು. ಹಾಗಾಗಿ ಬಜರಂಗಿ ಭಾಯಿಜಾನ್ ಕಥೆಯ ಕಡೆಗೆ ರಾಜಮೌಳಿಗೆ ಗಮನ ನೀಡಲು ಸಾಧ್ಯವಾಗಲಿಲ್ಲ. ಬೇರೆ ಯಾವುದಾದರೂ ಸರಿಯಾದ ಸಮಯ ನೋಡಿಕೊಂಡು ನಾನು ಕಥೆ ಹೇಳಬೇಕಿತ್ತು’ ಎಂದು ಈಗ ವಿಜಯೇಂದ್ರ ಪ್ರಸಾದ್ ಪಶ್ಚಾತ್ತಾಪ ಪಟ್ಟಿದ್ದಾರೆ.
ಮಾಮೂಲಿ ಸಲ್ಮಾನ್ ಖಾನ್ ಸಿನಿಮಾಗಳಿಗಿಂತ ತುಂಬ ಡಿಫರೆಂಟ್ ಆದ ಕಥೆಯನ್ನು ‘ಬಜರಂಗಿ ಭಾಯಿಜಾನ್’ ಚಿತ್ರ ಹೊಂದಿತ್ತು. ಕಬೀರ್ ಖಾನ್ ಅತ್ಯುತ್ತಮವಾಗಿ ನಿರ್ದೇಶನ ಮಾಡಿದ್ದರು. ಪುಟ್ಟ ಬಾಲಕಿ ಹರ್ಷಾಲಿ ಮಲ್ಹೋತ್ರಾ, ನಾಯಕಿ ಕರೀನಾ ಕಪೂರ್, ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ನವಾಜುದ್ದೀನ್ ಸಿದ್ಧಿಖಿ ಸೇರಿದಂತೆ ಎಲ್ಲರ ನಟನೆಯೂ ಗಮನಾರ್ಹವಾಗಿತ್ತು.
ಇದನ್ನೂ ಓದಿ:
ವಿದೇಶದಲ್ಲಿದ್ದಾರಾ ಸಲ್ಮಾನ್ ಖಾನ್ ಪತ್ನಿ ನೂರ್ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ
‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ