ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಮೊದಲ ದಿನವೇ 54 ಕೋಟಿ ರೂಪಾಯಿ ಕಲೆಕ್ಷನ್

|

Updated on: Aug 16, 2024 | 7:20 AM

ಹಾರರ್-ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2′ ಸಿದ್ಧವಾಗಿದೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ‘ಸ್ತ್ರೀ 2′ ಜೊತೆಗೆ ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಮತ್ತು ಜಾನ್ ಅಬ್ರಹಾಂ, ಶಾರ್ವರಿ ವಾಘ್ ಅವರ ‘ವೇದ್’ ಕೂಡ ಆಗಸ್ಟ್ 15 ರಂದು ಬಿಡುಗಡೆ ಆಗಿದೆ. ಈ ಪೈಕಿ ‘ಸ್ತ್ರೀ 2’ ಗೆದ್ದಿದೆ.

ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಮೊದಲ ದಿನವೇ 54 ಕೋಟಿ ರೂಪಾಯಿ ಕಲೆಕ್ಷನ್
ಸ್ತ್ರೀ 2
Follow us on

ಅಮರ್ ಕೌಶಿಕ್ ನಿರ್ದೇಶನದ ‘ಸ್ತ್ರೀ’ ಚಿತ್ರಕ್ಕೆ ಬರೋಬ್ಬರಿ 6 ವರ್ಷಗಳ ಬಳಿಕ ಸೀಕ್ವೆಲ್ ಬಂದಿದೆ. ‘ಸ್ತ್ರೀ 2’ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಿದೆ. ಇದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳು ರಿಲೀಸ್ ಆಗಿದ್ದವು. ಆದರೆ, ಈ ಚಿತ್ರ ಗೆದ್ದು ಬೀಗಿದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ 54.3 ಕೋಟಿ ರೂಪಾಯಿ ಆಗಿದೆ. ಒಳ್ಳೆಯ ಸಿನಿಮಾ ಕೊಟ್ಟರೆ ಎಲ್ಲರೂ ವೀಕ್ಷಿಸುತ್ತಾರೆ ಅನ್ನೋದಕ್ಕೆ ಇದು ಒಂದೊಳ್ಳೆಯ ಉದಾಹರಣೆ. ಈ ವರ್ಷದ ಅತಿ ದೊಡ್ಡ ಓಪನಿಂಗ್ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ.

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ‘ಸ್ತ್ರೀ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರೀಮಿಯರ್ ಶೋಗಳಿಂದ 8 ಕೋಟಿ ರೂಪಾಯಿ ಹಾಗೂ ಮೊದಲ ದಿನದ ಗಳಿಕೆಯಿಂದ 46 ಕೋಟಿ ರೂಪಾಯಿ ಸಿಕ್ಕಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 54.35 ಕೋಟಿ ರೂಪಾಯಿ ಆಗಿದೆ. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಮೊದಲ ದಿನದ ಕಲೆಕ್ಷನ್​ನ ಈ ಸಿನಿಮಾ ಹಿಂದಿಕ್ಕಿದೆ.

ಈ ಚಿತ್ರದ ಜೊತೆಗೆ ಬಾಲಿವುಡ್​ನಲ್ಲಿ ಇನ್ನೂ ಎರಡು ಸಿನಿಮಾಗಳು ಬಿಡುಗಡೆ ಕಂಡಿದ್ದವು. ‘ಖೇಲ್ ಖೇಲ್ ಮೇ’ ಹಾಗೂ ಜಾನ್ ಅಬ್ರಹಾಂ ನಟನೆಯ ‘ವೇದ’ ಚಿತ್ರಗಳು ರಿಲೀಸ್ ಆಗಿವೆ. ‘ವೇದ’ ಸಿನಿಮಾ 6 ಕೋಟಿ ರೂಪಾಯಿ ಹಾಗೂ ‘ಖೇಲ್ ಖೇಲ್ ಮೇ’ 5 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ.

ಇದನ್ನೂ ಓದಿ: ‘ಸ್ತ್ರೀ’ ತಂಡಕ್ಕೆ ಆಗಿತ್ತು ಹಾರರ್ ಅನುಭವ; ವಿವರಿಸಿದ ರಾಜ್​ಕುಮಾರ್ ರಾವ್

‘ಸ್ತ್ರೀ’ ಸಿನಿಮಾದ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಹಲವು ವಿಶೇಷ ಅತಿಥಿ ಪಾತ್ರಗಳು ಇವೆ. ವರುಣ್ ಧವನ್ ಅವರು ಕೂಡ ಈ ಚಿತ್ರದಲ್ಲಿ ಬಂದು ಹೋಗಿದ್ದಾರೆ. ಈ ಚಿತ್ರದಿಂದ ಬಾಲಿವುಡ್​ಗೆ ಮೊದಲ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.