‘ಸ್ತ್ರೀ’ ತಂಡಕ್ಕೆ ಆಗಿತ್ತು ಹಾರರ್ ಅನುಭವ; ವಿವರಿಸಿದ ರಾಜ್​ಕುಮಾರ್ ರಾವ್

ಹಾರರ್-ಕಾಮಿಡಿ ಚಿತ್ರ 'ಸ್ತ್ರೀ 2'ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗ ಬಿಡುಗಡೆಗೆ ಹೆಚ್ಚು ಸಮಯ ಉಳಿದಿಲ್ಲ. ಹೀಗಿರುವಾಗ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುತ್ತಿದೆ. ಮೊದಲ ಸಿನಿಮಾದ ಶೂಟ್ ವೇಳೆ ಯಾವ ರೀತಿಯ ಅನುಭವ ಆಗಿತ್ತು ಎಂದು ರಾಜ್​ಕುಮಾರ್ ರಾವ್ ಹೇಳಿದ್ದರು.

‘ಸ್ತ್ರೀ’ ತಂಡಕ್ಕೆ ಆಗಿತ್ತು ಹಾರರ್ ಅನುಭವ; ವಿವರಿಸಿದ ರಾಜ್​ಕುಮಾರ್ ರಾವ್
ರಾಜ್​ಕುಮಾರ್ ರಾವ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 08, 2024 | 10:56 AM

ಹಾರರ್​ ಚಿತ್ರಗಳನ್ನು ಮಾಡುವಾಗ ಕೆಟ್ಟ ಅನುಭವಗಳು ಆಗೋದು ಸಾಮಾನ್ಯ. ಈ ರೀತಿಯ ಅನುಭವಗಳನ್ನು ಅನೇಕರು ಹೇಳಿಕೊಂಡಿದ್ದಾರೆ. ಕೆಲವರು ಇದನ್ನು ಸಿನಿಮಾ ಪ್ರಚಾರಕ್ಕೆ ಹೇಳಿದರೆ ಇನ್ನೂ ಕೆಲವರು ನಿಜವಾದ ಅನುಭವ ಹಂಚಿಕೊಂಡಿದ್ದಾರೆ. ಈ ಮೊದಲು ರಾಜ್​ಕುಮಾರ್ ರಾವ್ ತಂಡಕ್ಕೆ ಇದೇ ರೀತಿಯ ಅನುಭವ ಆಗಿತ್ತು. ‘ಸ್ತ್ರೀ’ ಸಿನಿಮಾದ ಶೂಟ್ ವೇಳೆ ಹಾರರ್ ಅನುಭವ ಆದ ಬಗ್ಗೆ ರಾಜ್​ಕುಮಾರ್ ರಾವ್ ಈ ಮೊದಲು ಹೇಳಿಕೊಂಡಿದ್ದರು.

ಹಾರರ್-ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2′ ಸಿದ್ಧವಾಗಿದೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ‘ಸ್ತ್ರೀ 2′ ಜೊತೆಗೆ ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಮತ್ತು ಜಾನ್ ಅಬ್ರಹಾಂ, ಶಾರ್ವರಿ ವಾಘ್ ಅವರ ‘ವೇದ್’ ಕೂಡ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರಕ್ಕೆ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ರಾಜ್​ಕುಮಾರ್ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದರು.

‘ಸ್ತ್ರೀ’ ಸಿನಿಮಾದ ಶೂಟ ಭೋಪಾಲ್​ನಲ್ಲಿ ನಡೆದಿತ್ತು. ಈ ಚಿತ್ರದ ಶೂಟ್ ವೇಳೆ ಅವರಿಗೆ ಹಾರರ್ ಅನುಭವ ಆಗಿತ್ತಂತೆ. ‘ನಾವು ಸ್ತ್ರೀ ಚಿತ್ರವನ್ನು ಭೋಪಾಲ್​ನಲ್ಲಿ ಶೂಟ್ ಮಾಡುತ್ತಾ ಇದ್ದೆವು. ಏನನ್ನು ಮಾಡಬಾರದು ಎನ್ನುವ ಬಗ್ಗೆ ಉದ್ದ ಪಟ್ಟಿ ಇತ್ತು. ನಾವು ಪರ್ಫ್ಯೂಮ್ ಹಾಕಬಾರದಿತ್ತು, ಹೆಣ್ಣುಮಕ್ಕಳು ಕೂದಲನ್ನು ಬಿಟ್ಟುಕೊಳ್ಳಬಾರದಿತ್ತು, ಎಲ್ಲರೂ ಗುಂಪಿನಲ್ಲಿ ಇರಬೇಕಿತ್ತು. ಅದು ನೈಟ್ ಶೂಟ್ ಆಗಿತ್ತು’ ಎಂದು ಕಥೆ ಆರಂಭಿಸಿದರು ಅವರು.

‘ನಮ್ಮ ಕ್ಯಾಮೆರಾಮೆನ್ 15 ಅಡಿ ಗೋಡೆಯ ಮೇಲೆ ಒಬ್ಬರೇ ಕೂತಿದ್ದರು. ಶೂಟಿಂಗ್ ನಡೆಯುತ್ತಿತ್ತು. ತಕ್ಷಣ ನಮ್ಮ ಕ್ಯಾಮೆರಾಮೆನ್ ಬಿದ್ದರು. ಯಾರೋ ನನ್ನನ್ನು ತಳ್ಳಿದರು ಎಂದಿದ್ದರು. ಅಲ್ಲಿ ಯಾರೂ ಇರಲಿಲ್ಲ’ ಎಂದಿದ್ದಾರೆ ರಾಜ್​ಕುಮಾರ್ ರಾವ್.

ಇದನ್ನೂ ಓದಿ: r‘ಮಾಡಿದ ತಪ್ಪಿಗೆ ಸ್ತ್ರೀಲೋಲ ಎಂಬ ಹಣಪಟ್ಟಿಯೊಂದಿಗೆ ಬದುಕುತ್ತಿದ್ದೇನೆ’; ರಣಬೀರ್ ಕಪೂರ್ ಬೇಸರ

‘ಸ್ತ್ರೀ’ ಸಿನಿಮಾ 2018ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ರಾಜ್​ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಒಟ್ಟಾಗಿ ನಟಿಸಿದ್ದರು. ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಎರಡನೇ ಪಾರ್ಟ್ ಬರುತ್ತಿದೆ. ಮೊದಲ ಚಿತ್ರದ ಮುಂದುವರಿದ ಭಾಗ ಆಗಿ ಈ ಚಿತ್ರ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:26 am, Thu, 8 August 24