ರಾಹುಲ್​ ಗಾಂಧಿಯ ತಿರುಚಿದ ಫೋಟೋ ಹಂಚಿಕೊಂಡ ಕಂಗನಾ ಮೇಲೆ 40 ಕೋಟಿ ರೂ. ಮಾನನಷ್ಟ ಕೇಸ್

ಜಾತಿ ಗಣತಿ ಬಗ್ಗೆ ರಾಹುಲ್​ ಗಾಂಧಿ ಮಾತಾಡಿದ್ದನ್ನು ಟೀಕಿಸುವುದು ಕಂಗನಾ ರಣಾವತ್​ ಉದ್ದೇಶ ಆಗಿತ್ತು. ಆದರೆ ಅದಕ್ಕಾಗಿ ಎಡಿಟೆಡ್​ ಫೋಟೋವನ್ನು ಬಳಸಿದ್ದರಿಂದ ರಾಹುಲ್​ ಗಾಂಧಿಗೆ ಅವಮಾನ ಮಾಡಲಾಗಿದೆ ಎಂದು ವಕೀಲರೊಬ್ಬರು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ರಾಹುಲ್​ ಗಾಂಧಿಯ ತಿರುಚಿದ ಫೋಟೋ ಹಂಚಿಕೊಂಡ ಕಂಗನಾ ಮೇಲೆ 40 ಕೋಟಿ ರೂ. ಮಾನನಷ್ಟ ಕೇಸ್
ರಾಹುಲ್​ ಗಾಂಧಿ, ಕಂಗನಾ ರಣಾವತ್​
Follow us
|

Updated on: Aug 08, 2024 | 9:17 PM

ನಟಿ ಕಂಗನಾ ರಣಾವತ್​ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಮಾಡಿಕೊಂಡ ವಿವಾದಗಳಿಗೆ ಲೆಕ್ಕವೇ ಇಲ್ಲ. ಈಗ ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದಲ್ಲೂ ವಿವಾದಗಳ ಸರಣಿಯನ್ನು ಅವರು ಮುಂದುವರಿಸಿದ್ದಾರೆ. ಬಿಜೆಪಿ ಪಕ್ಷದಿಂದ ಸಂಸದೆಯಾಗಿ ಆಯ್ಕೆ ಆಗಿರುವ ಕಂಗನಾ ರಣಾವತ್​ ಅವರು ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಬಗ್ಗೆ ಟೀಕೆ ಮಾಡುವ ಭರದಲ್ಲಿ ಒಂದು ತಿರುಚಿದ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಸಂಸತ್ತಿನಲ್ಲಿ ರಾಹುಲ್​ ಗಾಂಧಿ ಅವರು ಜಾತಿ ಗಣತಿ ಬಗ್ಗೆ ಮಾತನಾಡಿದ್ದರು. ಅದನ್ನು ವಿರೋಧಿಸುವ ಸಲುವಾಗಿ ಕಂಗನಾ ಅವರು ಒಂದು ಎಡಿಟೆಡ್​ ಫೋಟೋವನ್ನು ಹಂಚಿಕೊಂಡರು. ಆ ಫೋಟೋದಲ್ಲಿ ರಾಹುಲ್​ ಗಾಂಧಿ ತಲೆಗೆ ಮುಸ್ಲಿಂ ಟೋಪಿ, ಕ್ರಿಸ್ಚಿಯನ್​ ಕ್ರಾಸ್​, ಹಿಂದೂಗಳ ತಿಲಕ ಮುಂತಾದ್ದನ್ನು ಎಡಿಟ್​ ಮಾಡಲಾಗಿತ್ತು. ಇದರಿಂದ ರಾಹುಲ್​ ಗಾಂಧಿ ಅವರಿಗೆ ಅವಮಾನ ಆಗಿದೆ ನೆಟ್ಟಿಗರು ಗರಂ ಆಗಿದ್ದರು.

ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್​ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ

ಈ ವಿಚಾರಕ್ಕೆ ಸಂಬಂಧಿಸಿ ಕಂಗನಾ ರಣಾವತ್​ ವಿರುದ್ಧ ಸುಪ್ರೀಂ ಕೋರ್ಟ್​ ಲಾಯರ್​ ನರೇಂದ್ರ ಮಿಶ್ರಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯಾವುದೇ ವ್ಯಕ್ತಿಯ ಪೋಟೋವನ್ನು ತಿರುಚಿ, ಅದನ್ನು ಆನ್​ಲೈನ್​ನಲ್ಲಿ ಶೇರ್​ ಮಾಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅಪರಾಧ ಆಗುತ್ತದೆ. ಇದರಿಂದ ರಾಹುಲ್ ಗಾಂಧಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಆಗಿದೆ ಎಂದು ನರೇಂದ್ರ ಮಿಶ್ರಾ ಹೇಳಿದ್ದಾರೆ.

ಕಂಗನಾ ಶೇರ್​ ಮಾಡಿದ್ದ ಎಡಿಟೆಡ್​ ಫೋಟೋ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಕಂಗನಾ ರಣಾವತ್​ ಅವರು ಆಯ್ಕೆ ಆಗಿದ್ದಾರೆ. ಸಿನಿಮಾ ಕೆಲಸಗಳನ್ನು ಬದಿಗೊತ್ತಿ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ, ನಿರ್ಮಾಣ ಮಾಡಿ, ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆ ಆಗಲಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಎಲ್ಲವೂ ಪ್ಲ್ಯಾನ್​ ಪ್ರಕಾರ ನಡೆದಿದ್ದರೆ ಈಗಾಗಲೇ ಈ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ವಿಳಂಬ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ