AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೇದಾ’ ಸಿನಿಮಾದ ಜೊತೆ ಬರಲಿದೆ ‘ಎಮರ್ಜೆನ್ಸಿ’ ಟ್ರೇಲರ್​: ಏನಿದು ಪ್ಲ್ಯಾನ್?

ರಾಜಕೀಯದ ಕಥಾಹಂದರ ಇರುವ ‘ಎಮರ್ಜೆನ್ಸಿ’ ಸಿನಿಮಾಗೆ ಕಂಗನಾ ರಣಾವತ್​ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರವನ್ನೂ ಅವರೇ ಮಾಡಿದ್ದಾರೆ. ಸೆಪ್ಟೆಂಬರ್​ 6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ‘ವೇದಾ’ ಚಿತ್ರದ ಜೊತೆ ‘ಎಮರ್ಜೆನ್ಸಿ’ ಟ್ರೇಲರ್​ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಕೇಳಿಬಂದಿದೆ.

‘ವೇದಾ’ ಸಿನಿಮಾದ ಜೊತೆ ಬರಲಿದೆ ‘ಎಮರ್ಜೆನ್ಸಿ’ ಟ್ರೇಲರ್​: ಏನಿದು ಪ್ಲ್ಯಾನ್?
ವೇದಾ, ಎಮರ್ಜೆನ್ಸಿ
ಮದನ್​ ಕುಮಾರ್​
|

Updated on: Aug 09, 2024 | 7:37 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಎಮರ್ಜೆನ್ಸಿ’ ಚಿತ್ರ ಕೂಡ ಇದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ಟೀಸರ್​ ಮೂಲಕ ಭಾರಿ ನಿರೀಕ್ಷೆ ಸೃಷ್ಟಿಸಲಾಗಿದೆ. ಈಗ ಟ್ರೇಲರ್​ ಬಿಡುಗಡೆಗೆ ತಯಾರಿ ನಡೆದಿದೆ. ದೊಡ್ಡ ಪರದೆಯಲ್ಲಿ ಈ ಟ್ರೇಲರ್​ ಬಿಡುಗಡೆ ಮಾಡಲು ಪ್ಲ್ಯಾನ್​ ನಡೆದಿದೆ. ‘ವೇದಾ’ ಸಿನಿಮಾದ ಜೊತೆ ‘ಎಮರ್ಜೆನ್ಸಿ’ ಟ್ರೇಲರ್​ ಅಟ್ಯಾಚ್​ ಮಾಡಲಾಗುವುದು ಎಂದು ವರದಿ ಆಗಿದೆ. ಅಂದರೆ, ಆಗಸ್ಟ್​ 15ರಂದು ಚಿತ್ರಮಂದಿರಗಳಲ್ಲಿ ‘ಎಮರ್ಜೆನ್ಸಿ’ ಚಿತ್ರದ ಟ್ರೇಲರ್​ ರಾರಾಜಿಸಲಿದೆ.

‘ಎಮರ್ಜೆನ್ಸಿ’ ಸಿನಿಮಾಗೆ ಕಂಗನಾ ರಣಾವತ್​ ಅವರು ನಿರ್ದೇಶನ ಮಾಡಿದ್ದಾರೆ. ಇಂದಿರಾ ಗಾಂಧಿಯ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದಾರೆ. ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದಾರೆ. ಈ ಚಿತ್ರವನ್ನು ‘ಜೀ ಸ್ಟುಡಿಯೋಸ್​’ ಸಂಸ್ಥೆಯು ವಿತರಣೆ ಮಾಡಲಿದೆ. ‘ವೇದಾ’ ಸಿನಿಮಾವನ್ನು ‘ಜೀ ಸ್ಟುಡಿಯೋಸ್​’ ನಿರ್ಮಾಣ ಮಾಡಿದೆ. ಹಾಗಾಗಿ ‘ವೇದಾ’ ಜೊತೆ ‘ಎಮರ್ಜೆನ್ಸಿ’ ಟ್ರೇಲರ್​ನ ಬಿತ್ತರಿಸುವ ಪ್ಲ್ಯಾನ್​ ಮಾಡಲಾಗಿದೆ.

ಇತ್ತೀಚೆಗೆ ‘ಎಮರ್ಜೆನ್ಸಿ’ ಟ್ರೇಲರ್​ಗೆ ಸೆನ್ಸಾರ್ ಪ್ರಕ್ರಿಯೆ ನಡೆದಿದೆ. ಇದಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ‘ಬಾಲಿವುಡ್​ ಹಂಗಾಮಾ’ ವರದಿ ಪ್ರಕಾರ ಇದರ ಅವಧಿ 2.57 ನಿಮಿಷ ಇದೆ. ಆಗಸ್ಟ್​ 15ರಂದು ‘ವೇದಾ’ ತೆರೆಕಾಣಲಿದ್ದು, ಆ ಸಿನಿಮಾವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ‘ಎಮರ್ಜೆನ್ಸಿ’ ಟ್ರೇಲರ್​ ಕಾಣಸಿಗಲಿದೆ. ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ಜಾತಿ ವಿವಾದ ಹೊಂದಿರುವ ‘ವೇದಾ’ ಸಿನಿಮಾದ 9 ನಿಮಿಷ ಅವಧಿಯ ದೃಶ್ಯಗಳು ಡಿಲೀಟ್​

ಆಗಸ್ಟ್​ 15ರಂದು ಪೈಪೋಟಿ ಜೋರಾಗಿ ಇರಲಿದೆ. ‘ವೇದಾ’ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಮತ್ತು ಶಾರ್ವರಿ ವಾಘ್​ ಅವರು ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದ ಜೊತೆ ‘ಸ್ತ್ರೀ 2’ ಕೂಡ ಬಿಡುಗಡೆ ಆಗಲಿದೆ. ಶ್ರದ್ಧಾ ಕಪೂರ್, ರಾಜ್​ಕುಮಾರ್​ ರಾವ್​ ಪ್ರಮುಖ ಪಾತ್ರಗಳನ್ನು ನಿಭಾಯಿಸಿರುವ ‘ಸ್ತ್ರೀ 2’ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಹಾರರ್​ ಪ್ರಿಯರು ಈ ಸಿನಿಮಾಗಾಗಿ ಕಾದಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯದ ‘ಖೇಲ್​ ಖೇಲ್​ ಮೇ’ ಸಿನಿಮಾ ಕೂಡ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಈ ಮೂರು ಸಿನಿಮಾಗಳ ನಡುವೆ ‘ಎಮರ್ಜೆನ್ಸಿ’ ಟ್ರೇಲರ್​ ಎಷ್ಟರಮಟ್ಟಿಗೆ ಗಮನ ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!