‘ದಿ ಕೇರಳ ಸ್ಟೋರಿ 2’ ಚಿತ್ರದಲ್ಲಿ ಲೈಂಗಿಕ ಹಗರಣದ ಕಥೆ ಇರುತ್ತಾ? ಸ್ಪಷ್ಟನೆ ನೀಡಿದ ನಿರ್ದೇಶಕ

|

Updated on: Sep 25, 2024 | 5:21 PM

ನೈಜ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುವ ನಿರ್ದೇಶಕ ಸುದೀಪ್ತೋ ಸೇನ್​ ಅವರು ಈಗ ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಸ್ಕ್ರಿಪ್ಟ್​ ಕೆಲಸ ಶುರುವಾಗಿದೆ. ಈ ಸಿನಿಮಾದ ಕಥಾವಸ್ತು ಏನು ಎಂಬ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಇದೆ. ಕೆಲವರು ಈ ಕುರಿತು ಗಾಸಿಪ್​ ಹರಡಿಸಿದ್ದಾರೆ. ಆದರೆ ಈ ಬಗ್ಗೆ ನಿರ್ದೇಶಕರಿಂದಲೇ ಸ್ಪಷ್ಟನೆ ಸಿಕ್ಕಿದೆ.

‘ದಿ ಕೇರಳ ಸ್ಟೋರಿ 2’ ಚಿತ್ರದಲ್ಲಿ ಲೈಂಗಿಕ ಹಗರಣದ ಕಥೆ ಇರುತ್ತಾ? ಸ್ಪಷ್ಟನೆ ನೀಡಿದ ನಿರ್ದೇಶಕ
ದಿ ಕೇರಳ ಸ್ಟೋರಿ
Follow us on

ನಿರ್ದೇಶಕ ಸುದೀಪ್ತೋ ಸೇನ್​ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಭಾರಿ ಖ್ಯಾತಿ ಪಡೆದುಕೊಂಡರು. ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ 240 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಹಾಗಾದರೆ, ‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಯಾವ ಕಹಾನಿ ಇರಲಿದೆ ಎಂಬ ಕೌತುಕ ಪ್ರೇಕ್ಷಕರ ಮನದಲ್ಲಿ ಮೂಡಿದೆ. ಅದಕ್ಕೆ ತಕ್ಕಂತೆ ಕೆಲವು ಗಾಸಿಪ್​ಗಳು ಕೂಡ ಹರಿದಾಡಲು ಆರಂಭಿಸಿವೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸುದೀಪ್ತೋ ಸೇನ್​ ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಲೈಂಗಿಕ ಹಗರಣಗಳು ಬೆಳಕಿಗೆ ಬಂದವು. ಅದಕ್ಕೆಲ್ಲ ಕಾರಣ ಆಗಿದ್ದು ‘ಹೇಮಾ ಕಮಿಟಿ’ ನೀಡಿದ ವರದಿ. ಮಾಲಿವುಡ್​ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಈ ಸಮಿತಿಯ ವರದಿ ಒತ್ತಿ ಹೇಳಿದೆ. ಅದರಲ್ಲಿನ ವಿವರಗಳನ್ನೇ ಇಟ್ಟುಕೊಂಡು ನಿರ್ದೇಶಕ ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ಮಾಡುತ್ತಾರೆ ಎಂಬ ಗಾಸಿಪ್​ ಹಬ್ಬಿದೆ. ಆದರೆ ಅದನ್ನು ಅವರು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಸುದೀಪ್ತೋ ಸೇನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇಂಥ ಸುದ್ದಿ ಎಲ್ಲಿಂದ ಹಬ್ಬಿದೆಯೋ ನನಗೆ ಗೊತ್ತಿಲ್ಲ. ಅದು ನಿಜವಲ್ಲ. ಸುದ್ದಿಗಳನ್ನು ನೋಡಿದ ಬಳಿಕ ನನಗೆ ಮತ್ತು ನಿರ್ಮಾಪಕ ವಿಪುಲ್​ ಅವರಿಗೆ ನಗು ಬಂತು. ಸಿನಿಮಾಗೆ ಸೀಕ್ವೆಲ್​ ಬರುವುದು ನಿಜ. ಈಗಾಗಲೇ ಸ್ಕ್ರಿಪ್ಟ್​ ಕೆಲಸ ನಡೆಯುತ್ತಿದೆ. ಆದರೆ ಹೇಮಾ ಸಮಿತಿಯ ವರದಿಗೂ ನಮ್ಮ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ’ ಎಂದು ಸುದೀಪ್ತೋ ಸೇನ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೆ ಬಂದು ಮೀಟೂ ಅಂದವರ ಮೇಲೆ ಮೊದಲು ಕೇಸ್ ಹಾಕಬೇಕು: ಕೆ. ಮಂಜು

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಇದೆ ಎಂಬುದು ಅನೇಕರ ದೂರು. ಇಂಥ ಪಿಡುಗಿನಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಅನೇಕ ಮಹಿಳೆಯರು ಈಗಾಗಲೇ ಮೀಟೂ ಅಭಿಯಾನದಲ್ಲಿ ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ಬೇರೆ ಬೇರೆ ಭಾಷೆಯ ಚಿತ್ರರಂಗಗಳಲ್ಲೂ ವಿಶೇಷ ಕಮಿಟಿ ಮೂಲಕ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮಲಯಾಳಂ ಚಿತ್ರರಂಗದ ಅನೇಕರ ಹೆಸರಿಗೆ ಕಪ್ಪು ಚುಕ್ಕಿ ಅಂಟಿದೆ. ಆದರೆ ಆ ವಿಷಯವನ್ನು ಇಟ್ಟುಕೊಂಡು ಸುದೀಪ್ತೋ ಸೇನ್ ಅವರು ಸಿನಿಮಾ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.