
ಸುಹಾನಾ ಖಾನ್ (Suhana Khan) ಅವರಿಗೆ ಇಂದು (ಮೇ 22) ಜನ್ಮದಿನ. ಅವರು ಈಗತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ದಿ ಆರ್ಚೀಸ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರ ನಟನೆಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಅವರನ್ನು ಸಾಕಷ್ಟು ಟ್ರೋಲ್ ಕೂಡ ಮಾಡಲಾಗಿತ್ತು. ಅವರು ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಸ್ವತಃ ಶಾರುಖ್ ಖಾನ್ ಅವರೇ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಏನಾದರೂ ಅಪ್ಡೇಟ್ ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ. ಸುಹಾನಾ ಸ್ಟಾರ್ ಕಿಡ್. ಚಿನ್ನದ ಸ್ಪೂನ್ ಹಿಡಿದು ಬೆಳೆದವರು ಅವರು. ಅವರ ಆಸ್ತಿ ಕೋಟ್ಯಂತ ರೂಪಾಯಿ ಇದೆ.
ಮೇ 21ರಂದು ಶಾರುಖ್ ಒಡೆತನದ ಕೋಲ್ಕತ್ತಾ ನೈಟ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಫೈನಲ್ ತಲುಪಿದೆ. ಈ ಮ್ಯಾಚ್ ನೋಡಲು ತಂದೆ ಜೊತೆ ಸುಹಾನಾ ಖಾನ್ ಕೂಡ ಇದ್ದರು. ಈ ಮೂಲಕ ಸುಹಾನಾ ಬರ್ತ್ಡೇಗೆ ಕೆಕೆಆರ್ ಗೆಲುವಿನ ಉಡುಗೊರೆ ನೀಡಿದಂತೆ ಆಗಿದೆ.
ಸುಹಾನಾ ತಂದೆ ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ತಮ್ಮ ಆಸ್ತಿಯಲ್ಲಿ ಒಂದಷ್ಟನ್ನು ಶಾರುಖ್ ಖಾನ್ ಅವರು ಮಗಳ ಹೆಸರಿಗೆ ಬರೆದಿದ್ದಾರೆ. ಸುಹಾನಾ ಹೆಸರಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಲೇ ಸುಹಾನಾ ಖಾನ್ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಿದೆ. ಸಿನಿಮಾದಲ್ಲಿ ನಟಿಸದ ಹೊರತಾಗಿಯೂ ಅವರು ಹಣ ಮಾಡಿದ್ದಾರೆ.
ಕೆಲವು ಮೂಲಗಳ ಪ್ರಕಾರ ಸುಹಾನಾ ಅವರ ಒಟ್ಟೂ ಆಸ್ತಿ 13 ಕೋಟಿ ರೂಪಾಯಿ. ಅಮೆರಿಕದಲ್ಲಿ ನಟನಾ ತರಬೇತಿ ಪಡೆದು ಬಂದ ಅವರು ಈಗ ಸಿನಿಮಾ ರಂಗಕ್ಕೆ ಜಿಗಿದಿದ್ದಾರೆ. ಅವರು ಅಲಿಭಾಗ್ನಲ್ಲಿ ಇತ್ತೀಚೆಗೆ ದೊಡ್ಡದಾದ ಜಮೀನು ಖರೀದಿ ಮಾಡಿದ್ದರು. ಇದರಲ್ಲಿ ಫಾರ್ಮ್ಹೌಸ್ ಮಾಡೋ ಆಲೋಚನೆ ಅವರಿಗೆ ಇದೆ ಎನ್ನಲಾಗಿದೆ.
ಶಾರುಖ್ ಖಾನ್ ಮಗಳು ಎನ್ನುವ ಕಾರಣಕ್ಕೆ ಕೆಲವು ಬ್ರ್ಯಾಂಡ್ಗಳು ಸುಹಾನಾ ಖಾನ್ ಬಳಿ ಬಂದಿವೆ. ಇದರಿಂದ ಸುಹಾನಾಗೆ ದೊಡ್ಡ ಮೊತ್ತದ ಹಣ ಬರುತ್ತಿದೆ. ಸಿನಿಮಾ ಒಪ್ಪಿಕೊಂಡು ನಟಿಸಿದ ಅವರಿಗೆ ಹಣ ಸಿಗುತ್ತಿದೆ. ಶಾರುಖ್ ಮಗ ಆರ್ಯನ್ ಖಾನ್ ಅವರು ಈಗಾಗಲೇ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ. ಸುಹಾನಾ ಖಾನ್ ಕೂಡ ಇದೇ ರೀತಿಯಲ್ಲಿ ಯಾವುದಾದರೂ ಬ್ರ್ಯಾಂಡ್ನ ಆರಂಭಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಸ್ತಿ ಮೌಲ್ಯ ಎಷ್ಟು?
ಸುಹಾನಾ ಹೆಸರಲ್ಲಿ ಶಾರುಖ್ ಖಾನ್ ಅವರು ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸುಹಾನಾ ಶ್ರೀಮಂತೆ ಎನಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಇರೋ ರಿಚ್ ಕಿಡ್ಗಳಲ್ಲಿ ಸುಹಾನಾ ಕೂಡ ಒಬ್ಬರು ಅನ್ನೋದು ವಿಶೇಷ. ಸುಹಾನಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಅಭಿಮಾನಿಗಳಿಗಾಗಿ ಫೋಟೊ ಹಂಚಿಕೊಳ್ಳುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.