ಮದುವೆ ಸೀರೆಯನ್ನು ಮತ್ತೆ ಧರಿಸಿದ ಆಲಿಯಾ ಭಟ್​ಗೆ ಸುಹಾನಾ ಖಾನ್​ ಹೇಳಿದ್ದೇನು? ವಿಡಿಯೋ ವೈರಲ್​

ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ‘ದಿ ಆರ್ಚೀಸ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈ ಸಲುವಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಆಲಿಯಾ ಭಟ್​ ಬಗ್ಗೆ ಅವರು ಮಾತನಾಡಿದ್ದಾರೆ. ಅವರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಮದುವೆ ಸೀರೆಯನ್ನು ಮತ್ತೆ ಧರಿಸಿದ ಆಲಿಯಾ ಭಟ್​ಗೆ ಸುಹಾನಾ ಖಾನ್​ ಹೇಳಿದ್ದೇನು? ವಿಡಿಯೋ ವೈರಲ್​
ಆಲಿಯಾ ಭಟ್​, ಸುಹಾನಾ ಖಾನ್​
Follow us
ಮದನ್​ ಕುಮಾರ್​
|

Updated on:Nov 29, 2023 | 11:28 AM

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಧರಿಸುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಪ್ರತಿ ಬಾರಿಯೂ ಹೊಸ ಬಟ್ಟೆಯನ್ನು ಅವರು ಧರಿಸುತ್ತಾರೆ. ಆದರೆ ಕೆಲವು ಸೆಲೆಬ್ರಿಟಿಗಳು, ಕೆಲವೊಮ್ಮೆ ಈ ಅಲಿಖಿತ ನಿಯಮವನ್ನು ಮುರಿಯುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ನಟಿ ಆಲಿಯಾ ಭಟ್​ (Alia Bhatt). ಇತ್ತೀಚೆಗೆ ಅವರು ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವಾಗ ಮದುವೆ ಸೀರೆಯನ್ನು ಧರಿಸಿದ್ದರು. ಈ ಬಗ್ಗೆ ಶಾರುಖ್​ ಖಾನ್ ಅವರ ಪುತ್ರಿ ಸುಹಾನಾ ಖಾನ್​ (Suhana Khan) ಪ್ರತಿಕ್ರಿಯೆ ನೀಡಿದ್ದಾರೆ. ಆಲಿಯಾ ಭಟ್​ ಅವರ ನಡೆಯನ್ನು ಸುಹಾನಾ ಶ್ಲಾಘಿಸಿದ್ದಾರೆ.

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ನಟನೆಗೆ ಆಲಿಯಾ ಭಟ್​ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಅದನ್ನು ಸ್ವೀಕರಿಸಲು ಅವರು ಮದುವೆಯ ಸೀರೆ ಧರಿಸಿ ಬಂದಿದ್ದರು. ಆ ವಿಷಯದ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಒಮ್ಮೆ ಧರಿಸಿದ ಬಟ್ಟೆಯನ್ನು ಪುನಃ ಧರಿಸುವ ಮೂಲಕ ಆಲಿಯಾ ಭಟ್​ ಅವರು ಬೇರೆಲ್ಲರಿಗೂ ಮಾದರಿ ಆಗುತ್ತಿದ್ದಾರೆ ಎಂದು ಸುಹಾನಾ ಖಾನ್​ ಅಭಿಪ್ರಾಯಪಟ್ಟಿದ್ದಾರೆ.

Deepfake: ರಶ್ಮಿಕಾ ಮಂದಣ್ಣ, ಕಾಜೋಲ್​ ಬಳಿಕ ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ

‘ಅಷ್ಟು ಪ್ರಭಾವಿ ಆಗಿರುವ ನಟಿಯೊಬ್ಬರು, ಮದುವೆ ಸೀರೆಯನ್ನು ಪುನಃ ಧರಿಸುವ ಮೂಲಕ ತುಂಬ ಅಗತ್ಯವಾಗಿರುವ ಸಂದೇಶವನ್ನು ನೀಡಿದ್ದಾರೆ. ಸುಸ್ಥಿರತೆ ಬಗ್ಗೆ ಆಲಿಯಾ ಭಟ್​ ಅವರು ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ. ಆಲಿಯಾ ಭಟ್​ ಅವರು ಬಟ್ಟೆಯನ್ನು ಮರುಬಳಕೆ ಮಾಡುತ್ತಾರೆ ಎಂಬುದಾದರೆ ನಾವು ಕೂಡ ಪಾರ್ಟಿಗೆ ಹಳೇ ಬಟ್ಟೆಯನ್ನೇ ಪುನಃ ಧರಿಸಬಹುದು. ಪ್ರತಿ ಬಾರಿ ಹೊಸ ಬಟ್ಟೆ ಖರೀದಿಸುವ ಅವಶ್ಯಕತೆ ಇಲ್ಲ’ ಎಂದು ಸುಹಾನಾ ಖಾನ್​ ಹೇಳಿದ್ದಾರೆ.

ಸುಹಾನಾ ಖಾನ್​ ಅವರು ಈ ರೀತಿ ಹೇಳಿದ್ದರ ಹಿಂದೆ ಪರಿಸರ ಕಾಳಜಿ ಇದೆ. ಸೆಲೆಬ್ರಿಟಿಗಳ ಬಳಿ ಬೇಕಾದಷ್ಟು ಹಣ ಇರುತ್ತದೆ. ಹಾಗೆಂದ ಮಾತ್ರಕ್ಕೆ ಪತಿ ಬಾರಿಯೂ ಹೊಸ ಹೊಸ ಬಟ್ಟೆ ಖರೀದಿಸಿದರೆ ಪರಿಸರಕ್ಕೆ ಹಾನಿ ಆಗುತ್ತದೆ. ಆ ಬಗ್ಗೆ ಸುಹಾನಾ ಮಾತನಾಡಿದ್ದಾರೆ. ‘ನಮಗೆ ಇದು ಅರಿವಾಗುವುದಿಲ್ಲ. ಆದರೆ ಹೊಸ ಬಟ್ಟೆ ತಯಾರಿಸುವುದರಿಂದ ತ್ಯಾಜ್ಯ ಸೃಷ್ಟಿ ಆಗುತ್ತದೆ. ಅದರಿಂದ ಪರಿಸರ ಮತ್ತು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದು ತುಂಬ ಮುಖ್ಯ’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:27 am, Wed, 29 November 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್