ಚಿತ್ರರಂಗದ ತಾರೆಯರು ಶೂಟಿಂಗ್ನಿಂದ ಬಿಡುವನ್ನು ಪಡೆದು, ಮಾಲ್ಡೀವ್ಸ್ಗೆ ತೆರಳಿ ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಅಂತೆಯೇ ಬಾಲಿವುಡ್ ತಾರೆ ಸನ್ನಿ ಲಿಯೋನ್ ತಮ್ಮ ಕುಟುಂಬದವರೊಂದಿಗೆ ಮಾಲ್ಡೀವ್ಸ್ಗೆ ತೆರಳಿದ್ದು, ಅಲ್ಲಿ ಕಳೆಯುತ್ತಿರುವ ಸುಂದರ ಸಮಯವನ್ನು ಹಾಗೂ ನಿಸರ್ಗ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರು ಸಮುದ್ರದ ಒಳಗಿಂದ ಎದ್ದು ಬರುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ನೋಡಿದ ಅಭಿಮಾನಿಗಳು ಪರವಶರಾಗಿದ್ದಾರೆ.
ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ಹಾಗೂ ಮಕ್ಕಳಾದ ನಿಶಾ, ಆಷರ್ ಹಾಗೂ ನೋಹ್ ಅವರೊಂದಿಗೆ ಮಾಲ್ಡೀವ್ಸ್ನಲ್ಲಿದ್ದಾರೆ. ಇತ್ತೀಚೆ ಹಂಚಿಕೊಂಡ ವಿಡಿಯೊದಲ್ಲಿ ಸನ್ನಿ ಸಮುದ್ರದ ಒಳಗಿನಿಂದ ಬರುವ ದೃಶ್ಯವಿದೆ. ಯೋ ಯೋ ಹನಿ ಸಿಂಗ್ ಹಾಗೂ ನೇಹಾ ಕಕ್ಕರ್ ಹಾಡಿರುವ ‘ಸನ್ನಿ ಸನ್ನಿ’ ಹಾಡಿನ ತುಣುಕನ್ನು ಅವರು ವಿಡಿಯೊಗೆ ಹಾಕಿದ್ದಾರೆ. ಈ ವಿಡಿಯೊ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸನ್ನಿ ಹಂಚಿಕೊಂಡ ವಿಡಿಯೊ:
ಮಾಲ್ಡೀವ್ಸ್ನಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು, ವಿಡಿಯೊಗಳನ್ನು ಸನ್ನಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಾವು ತಂಗಿದ್ದ ರೆಸಾರ್ಟ್ನ ಅಭೂತಪೂರ್ವ ದೃಶ್ಯಗಳನ್ನು ಅಭಿಮಾನಿಗಳಿಗೆ ವಿಡಿಯೊ ಮುಖಾಂತರ ತೋರಿಸಿದ್ದರು. ಸಮುದ್ರದ ನಡುವೆ ಇರುವ ಆ ರೆಸಾರ್ಟ್ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು.
ಬೀಚ್ನಲ್ಲಿ ಸುತ್ತಾಡುತ್ತಿರುವ ಚಿತ್ರ ಹಂಚಿಕೊಂಡ ಸನ್ನಿ:
ಸನ್ನಿ ಲಿಯೋನ್ ಪ್ರಸ್ತುತ ‘ಅನಾಮಿಕ’ ವೆಬ್ ಸೀರೀಸ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಕ್ರಮ್ ಭಟ್ ಇದನ್ನು ನಿರ್ದೇಶನ ಮಾಡುತ್ತಿದ್ದು, ಆಕ್ಷನ್ ಮಾದರಿಯ ಸೀರೀಸ್ ಇದಾಗಿರಲಿದೆ. ಇದರ ಹೊರತಾಗಿ ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಸ್ತುತದ ಸಮಸ್ಯೆಗಳಿಗೆ ಧ್ವನಿ ಎತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಲೆ ಏರಿಕೆಯ ವಿರುದ್ಧ ತಮ್ಮದೇ ಧಾಟಿಯಲ್ಲಿ ಪ್ರತಿಭಟಿಸಿದ್ದರು. ಇವುಗಳೊಂದಿಗೆ ಅವರು ಆಗಾಗ ಪ್ರಾಣಿಗಳ ಕುರಿತ ಜಾಗೃತಿ ಕಾರ್ಯಕ್ರಮದ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ:
Sunny Leone: ನೆಚ್ಚಿನ ಅಭಿಮಾನಿಗಳಿಗೆ ಕುಳಿತಲ್ಲೇ ಮಾಲ್ಡೀವ್ಸ್ ದರ್ಶನ ಮಾಡಿಸಿದ ಸನ್ನಿ ಲಿಯೋನ್
Samantha: ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡ ಸಮಂತಾ ಈಗೇನು ಮಾಡುತ್ತಿದ್ದಾರೆ?; ಉತ್ತರ ನೀಡುತ್ತಿದೆ ಈ ಫೊಟೊ
(Sunny Leone shared a reel of coming from sea and that reel got fans attention)