ಸಿನಿಮಾ ಮತ್ತು ಕ್ರಿಕೆಟ್ಗೆ ಹತ್ತಿರದ ನಂಟು. ಅನೇಕ ಕ್ರಿಕೆಟರ್ಗಳ ಬದುಕಿನ ಕುರಿತು ಸಿನಿಮಾಗಳು ಮೂಡಿಬಂದಿವೆ. ಆದರೆ ಯಶಸ್ಸು ಕಂಡಿರುವುದು ಕೆಲವೇ ಕೆಲವು ಮಾತ್ರ. ಕೂಲ್ ಕ್ಯಾಪ್ಟನ್ ಎನಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಕುರಿತು ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ (MS Dhoni: The Untold Story) ಚಿತ್ರ ಮೂಡಿಬಂದಿತ್ತು. ಆ ಬಯೋಪಿಕ್ನಲ್ಲಿ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಧೋನಿ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ವಿಶೇಷ ಏನೆಂದರೆ, ಮೇ 12ರಂದು ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೋಡಿ ಖುಷಿಪಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತಿದೆ. ಎಂ.ಎಸ್. ಧೋನಿ (MS Dhoni) ಅಭಿಮಾನಿಗಳು ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡಲಿದ್ದಾರೆ.
ಎಂ.ಎಸ್. ಧೋನಿ ಅವರು ಕ್ರಿಕೆಟ್ ಲೋಕದಲ್ಲಿ ಮಾಡಿದ ಸಾಧನೆ ಅಪಾರ. ಟೀಮ್ ಇಂಡಿಯಾವನ್ನು ಅವರು ಮುನ್ನಡೆಸಿದ ರೀತಿಗೆ ಫ್ಯಾನ್ಸ್ ಸಲಾಂ ಎನ್ನುತ್ತಾರೆ. ಧೋನಿ ಅವರ ಬಗ್ಗೆ ಅಭಿಮಾನಿಗಳು ಹೊಂದಿರುವ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ. ಅದರ ಜೊತೆಗೆ ಅವರ ರಿಯಲ್ ಲೈಫ್ ಘಟನೆಗಳು ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿವೆ. ಹಾಗಾಗಿ ಆ ಎಲ್ಲ ವಿವರಗಳನ್ನು ಇಟ್ಟುಕೊಂಡು ಬಯೋಪಿಕ್ ಮಾಡಲಾಯಿತು.
ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ವೇಳೆ ಸುಶಾಂತ್ ಸಿಂಗ್ ದೇಹದ ಮೇಲಿತ್ತು ಗಾಯ; ಸತ್ಯ ಮುಚ್ಚಿಟ್ರಾ ವೈದ್ಯರು?
2016ರ ಸೆಪ್ಟೆಂಬರ್ 30ರಂದು ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾ ಬಿಡುಗಡೆ ಆಗಿತ್ತು. ನೀರಜ್ ಪಾಂಡೆ ನಿರ್ದೇಶನದ ಆ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಜಯಭೇರಿ ಬಾರಿಸಿತು. ಕ್ರಿಕೆಟ್ ಪ್ರೇಮಿಗಳು ಆ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡರು. ಹಾಡುಗಳು ಕೂಡ ಜನರ ಮನಸೆಳೆದವು. ಈಗ ಮತ್ತೊಮ್ಮೆ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವ ಸಮಯ ಹತ್ತಿರವಾಗಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಎನು ಮಾಡುತ್ತಿದ್ದಾರೆ? ಇಲ್ಲಿದೆ ಮಾಹಿತಿ
ಸುಶಾಂತ್ ಸಿಂಗ್ ರಜಪೂತ್ ಅವರಿಗೆ ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿತು. ಧೋನಿ ಪಾತ್ರದಲ್ಲಿ ಅವರ ನಟನೆಗೆ ಎಲ್ಲರೂ ಭೇಷ್ ಎಂದರು. ಈ ಪಾತ್ರವನ್ನು ನಿಭಾಯಿಸಲು ಅವರು ತೆರೆಹಿಂದೆ ಸಾಕಷ್ಟು ಶ್ರಮಿಸಿದ್ದರು. ನಟಿ ಕಿಯಾರಾ ಅಡ್ವಾಣಿ ಮತ್ತು ದಿಶಾ ಪಟಾಣಿ ಕೂಡ ಈ ಸಿನಿಮಾದಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.