ಸೆಲೆಬ್ರಿಟಿಗಳನ್ನು ಕಾಡಿದ ಖಿನ್ನತೆ; ಆತ್ಮಹತ್ಯೆಗೆ ಶರಣಾದ ನಟ-ನಟಿಯರು ಇವರೇ ನೋಡಿ

| Updated By: ಮದನ್​ ಕುಮಾರ್​

Updated on: Aug 05, 2023 | 2:20 PM

ಚಿತ್ರರಂಗದ ಅನೇಕರು ಆತ್ಮಹತ್ಯೆಗೆ ಶರಣಾದ ಉದಾಹರಣೆ ಇದೆ. ಸುಶಾಂತ್ ಸಿಂಗ್ ರಜಪೂತ್ ಸೇರಿ ಅನೇಕ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೆಲೆಬ್ರಿಟಿಗಳನ್ನು ಕಾಡಿದ ಖಿನ್ನತೆ; ಆತ್ಮಹತ್ಯೆಗೆ ಶರಣಾದ ನಟ-ನಟಿಯರು ಇವರೇ ನೋಡಿ
ತುನಿಷಾ ಶರ್ಮಾ, ಸುಶಾಂತ್​ ಸಿಂಗ್​ ರಜಪೂತ್​, ಜಿಯಾ ಖಾನ್​
Follow us on

‘ಸೆಲೆಬ್ರಿಟಿಗಳಿಗೆ ಯಾವುದೇ ಚಿಂತೆ ಇರುವುದಿಲ್ಲ, ಅವರು ಹಾಯಾಗಿ ಜೀವನ ನಡೆಸುತ್ತಾ ಇರುತ್ತಾರೆ’ ಎಂಬುದು ಅನೇಕರ ನಂಬಿಕೆ. ಆದರೆ, ರಿಯಾಲಿಟಿ ಹಾಗಿಲ್ಲ. ಅವರಿಗೂ ಕಷ್ಟಗಳು ಬರುತ್ತವೆ. ಅವರಿಗೂ ಖಿನ್ನತೆ (Depression) ಕಾಡುತ್ತದೆ. ಇತ್ತೀಚೆಗಷ್ಟೇ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯ (Nitin Desai) ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಒಡೆತನದ ಸ್ಟುಡಿಯೋದಲ್ಲಿ ನೇಣು ಬಿಗಿದುಕೊಂಡರು. ಚಿತ್ರರಂಗದ ಅನೇಕರು ಆತ್ಮಹತ್ಯೆಗೆ ಶರಣಾದ ಉದಾಹರಣೆ ಇದೆ. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸೇರಿ ಅನೇಕ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಸುಶಾಂತ್ ಸಿಂಗ್ ರಜಪೂತ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು 14 ಜೂನ್ 2020ರಂದು ಬಾಂದ್ರಾದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ಆದರೆ, ಅವರು ಮೃತಪಟ್ಟ ಬಳಿಕ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಅವರು ಹಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿಚಾರ ಬಳಿಕ ಗೊತ್ತಾಗಿತ್ತು. ಮುಂಬೈ ಪೊಲೀಸರ ಪ್ರಕಾರ ಸುಶಾಂತ್ ಮನೆಯಲ್ಲಿ ಡಿಪ್ರೆಷನ್​​ಗೆ ಸಂಬಂಧಿಸಿದ ಟ್ಯಾಬ್ಲೆಟ್ ಸಿಕ್ಕಿದ್ದವು ಎನ್ನಲಾಗಿದೆ. ಇದು ಕೊಲೆ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದರು.

ಇದನ್ನೂ ಓದಿ: Postpartum Depression: ಪ್ರಸವ ನಂತರದ ಖಿನ್ನತೆಗಳು ಮತ್ತು ಅದರಿಂದ ಹೊರಬರುವ ಮಾರ್ಗಗಳು

ದಿಶಾ ಸಾಲಿಯಾನ್

ಸುಶಾಂತ್ ಸಾಯುವುದಕ್ಕೂ ಕೆಲವೇ ದಿನ ಮೊದಲು ಅಂದರೆ, ಜೂನ್ 8ರಂದು, ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಲಾಡ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮದುವೆ ಆಗಬೇಕಿದ್ದ ಹುಡುಗನ ಅಪಾರ್ಟ್​​ಮೆಂಟ್​ನ 14ನೇ ಮಹಡಿಯಿಂದ ಜಿಗಿದು ದಿಶಾ ಮೃತಪಟ್ಟಿದ್ದರು. ಇದು ಆಕಸ್ಮಿಕ ಸಾವು ಎಂದು ಕೂಡ ಹೇಳಲಾಗುತ್ತಿದೆ. ಇದಾದ ಕೆಲವೇ ದಿನಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಧನರಾದರು.

ಕುಶಾಲ್ ಪಂಜಾಬಿ

ಕುಶಾಲ್ ಪಂಜಾಬಿ 1977ರಲ್ಲಿ ಜನಿಸಿದ್ದರು. ಅನೇಕ ರಿಯಾಲಿಟಿ ಶೋಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಹಲವು ಪ್ರಶಸ್ತಿಗಳನ್ನೂ ಗೆದ್ದಿದ್ದರು. ಡಿಸೆಂಬರ್ 26, 2019ರಂದು, ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಯಿತು. 42 ನೇ ವಯಸ್ಸಿಗೆ ಇವರು ಮೃತಪಟ್ಟರು.

ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಶರಣಾದ ಹಾಂಗ್ ಕಾಂಗ್ ಮೂಲದ ಗಾಯಕಿ

ಜಿಯಾ ಖಾನ್

ಜಿಯಾ ಖಾನ್ ಅವರು 1988ರಲ್ಲಿ ಜನಿಸಿದರು. ‘ಘಜಿನಿ’ ಸಿನಿಮಾದಲ್ಲಿ ನಟಿಸಿ ಅವರು ಫೇಮಸ್ ಆದರು. 3 ಜೂನ್ 2013ರಂದು ಜಿಯಾ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟರು. ಜಿಯಾ ಸಾವಿನ ನಂತರ ಅವರ ಮನೆಯಲ್ಲಿ ಆರು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿತ್ತು. ಪತ್ರದಲ್ಲಿ ಆಕೆಯ ಗೆಳೆಯ ಸೂರಜ್ ಪಾಂಚೋಲಿ ಹೆಸರಿತ್ತು. ಜಿಯಾ ಕೂಡ ದೀರ್ಘಕಾಲದವರೆಗೆ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪ್ರತ್ಯೂಷಾ ಬ್ಯಾನರ್ಜಿ

ಜನಪ್ರಿಯ ಕಿರುತೆರೆ ಧಾರಾವಾಹಿ ‘ಬಾಲಿಕಾ ವಧೂ’ ಧಾರಾವಾಹಿಯಲ್ಲಿ ಆನಂದಿ ಹೆಸರಿನ ಪಾತ್ರವನ್ನು ನಿರ್ವಹಿಸಿ ಪ್ರತ್ಯೂಷಾ ಬ್ಯಾನರ್ಜಿ ಮನೆಮಾತಾಗಿದ್ದರು. ಏಪ್ರಿಲ್ 1, 2016ರಂದು ಮುಂಬೈನ ತಮ್ಮ ಅಪಾರ್ಟ್ಮೆಂಟ್​ನಲ್ಲಿ ಶವವಾಗಿ ಪತ್ತೆಯಾದರು. ಅವರು ಬಿಗ್ ಬಾಸ್ ಸೀಸನ್ 7ರಲ್ಲೂ ಕಾಣಿಸಿಕೊಂಡಿದ್ದರು. ಪ್ರತ್ಯೂಷಾ ಖಿನ್ನತೆಗೆ ಒಳಗಾಗಿದ್ದರು.

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ; ಕಾರಣ ಇಲ್ಲಿದೆ

ತುನೀಶಾ ಶರ್ಮಾ

ಕಿರುತೆರೆ ನಟಿ ತುನೀಶಾ ಶರ್ಮಾ ಕೂಡ ಆತ್ಮಹತ್ಯೆಗೆ ಶರಣಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಟಿವಿ ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡಿದ್ದರು. 21 ವರ್ಷದ ತುನೀಶಾ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಅವರು ತಮ್ಮ ಪ್ರಾಣವನ್ನೇ ತೆಗೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.