ಸುಶಾಂತ್ ಸಿಂಗ್ ಮೂರನೇ ಪುಣ್ಯತಿಥಿ; ಸಾವಿನಿಂದ ಇಲ್ಲಿಯವರೆಗೆ ನಡೆದ ಘಟನೆಗಳ ಟೈಮ್​ಲೈನ್ ಇಲ್ಲಿದೆ

|

Updated on: Jun 14, 2023 | 12:30 PM

Sushanth Singh Rajput Death Anniversary: ಸುಶಾಂತ್ ಸಿಂಗ್ ಅವರು ಮುಂಬೈನ ಫ್ಲ್ಯಾಟ್​ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಅದೇ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದರು.

ಸುಶಾಂತ್ ಸಿಂಗ್ ಮೂರನೇ ಪುಣ್ಯತಿಥಿ; ಸಾವಿನಿಂದ ಇಲ್ಲಿಯವರೆಗೆ ನಡೆದ ಘಟನೆಗಳ ಟೈಮ್​ಲೈನ್ ಇಲ್ಲಿದೆ
ಸುಶಾಂತ್ ಸಿಂಗ್
Follow us on

ಜೂನ್ 14, 2020 ಬಾಲಿವುಡ್ ಪಾಲಿಗೆ ಕರಾಳ ದಿನ. ಸುಶಾಂತ್ ಸಿಂಗ್ (Sushanth Singh Rajput) ಇನ್ನಿಲ್ಲ ಎಂಬ ಸುದ್ದಿ ಕೇಳಿ ಅನೇಕರು ಶಾಕ್​ಗೆ ಒಳಗಾದರು. ಚಿತ್ರರಂಗದಲ್ಲಿ ಆಗ ತಾನೇ ಸ್ಟಾರ್ ಆಗಿ ಮೆರೆಯುತ್ತಿದ್ದ ಸುಶಾಂತ್​ ಅವರು ಮೃತಪಟ್ಟ ವಿಚಾರ ಅನೇಕರಿಗೆ ಶಾಕ್ ತಂದಿತ್ತು. ಅವರು ನಮ್ಮನ್ನು ಅಗಲಿ ಇಂದಿಗೆ ಮೂರು ವರ್ಷ. ಬೇಸರದ ವಿಚಾರ ಎಂದರೆ ಅವರ ಸಾವಿನ ರಹಸ್ಯ ಮಾತ್ರ ಹೊರಬಿದ್ದಿಲ್ಲ. ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಂತಿಮ ವರದಿ ಬರಬೇಕಿದೆ. ಆದಷ್ಟು ಬೇಗ ಅವರ ಸಾವಿನ ರಹಸ್ಯ ಹೊರ ಬೀಳಲಿ ಅನ್ನುವುದು ಫ್ಯಾನ್ಸ್ ಆಗ್ರಹ.

ನೇಣುಬಿಗಿದ ಸ್ಥಿತಿಯಲ್ಲಿ ಸುಶಾಂತ್

ಸುಶಾಂತ್ ಸಿಂಗ್ ಅವರು ಮುಂಬೈನ ಫ್ಲ್ಯಾಟ್​ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಅದೇ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದರು. ಇದು ಆತ್ಮಹತ್ಯೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ, ಇದು ಕೊಲೆ ಎನ್ನುವ ಆರೋಪಗಳು ಕೇಳಿ ಬಂದವು.

ನಟನಿಗೆ ಉಂಟಾಗಿತ್ತು ಕಿರುಕುಳ?

ಬಾಲಿವುಡ್​ನಲ್ಲಿ ಮಾಫಿಯಾ ಇದೆ, ಅವರು ಹೊರಗಿನವರನ್ನು ಬಿಟ್ಟುಕೊಳ್ಳುವುದಿಲ್ಲ ಎಂಬ ಆರೋಪ ಇದೆ. ‘ಬಾಲಿವುಡ್​ನ ಕೆಲ ಸ್ಟಾರ್​ಗಳು ಸುಶಾಂತ್​ಗೆ ಕಿರುಕುಳ ನೀಡಿದ್ದರಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡರು’ ಎಂದು ಒಂದು ವರ್ಗದ ಜನರು ಆರೋಪಿಸಿದರು. ಇನ್ನೂ ಕೆಲವರು ‘ಸುಶಾಂತ್ ಅವರನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸ ಆಗಿದೆ’ ಎಂದು ಕೆಲವರು ಆರೋಪಿಸಿದರು.

ಅರೆಸ್ಟ್​ ಆದ ರಿಯಾ ಚಕ್ರವರ್ತಿ

ಈ ಆರೋಪಗಳ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂತು. ಸುಶಾಂತ್ ಖಾತೆಯಿಂದ ಅವರ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮಾದಕದ್ರವ್ಯದ ವಾಸನೆ ಸಿಕ್ಕಿತು. ಈ ಪ್ರಕರಣವನ್ನು ಎನ್​ಸಿಬಿ ಕೂಡ ವಿಚಾರಣೆ ನಡೆಸಿತು.

ಮುಂಬೈ ಪೊಲೀಸರಿಂದ ಸಿಬಿಐಗೆ ವರ್ಗಾವಣೆ

ಮುಂಬೈ ಪೊಲೀಸರಿಗೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪತ್ತೆ ಹಚ್ಚಲು ಆಗಲಿಲ್ಲ. ಈ ಮಧ್ಯೆ ನ್ಯಾಯ ಕೊಡಿಸಿ ಎನ್ನುವ ಒತ್ತಾಯ ಅಭಿಮಾನಿಗಳಿಂದ ಹೆಚ್ಚಿತು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಸಿಬಿಐ ಪ್ರಕರಣವನ್ನು ತನಿಖೆ ಮಾಡುತ್ತಿದೆ. ಆದರೆ, ಈ ಪ್ರಕರಣದಲ್ಲಿ ಸತ್ಯ ಮಾತ್ರ ಈವರೆಗೆ ಹೊರಬಿದ್ದಿಲ್ಲ.

ಇದನ್ನೂ ಓದಿ: ಕಹಿ ನೆನಪಿಂದ ಹೊರಬಂದು ಪ್ರವಾಸದಲ್ಲಿ ಮೋಜು ಮಾಡುತ್ತಿರುವ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ಅವರನ್ನು ನೆನಪಿಸಿಕೊಂಡ ಫ್ಯಾನ್ಸ್

ಸುಶಾಂತ್ ಪುಣ್ಯತಿಥಿಯಂದು ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಅವರ ಫೋಟೋಗಳು ಹಾಗೂ ಅವರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 7:05 am, Wed, 14 June 23