‘ಹೂವಿನ ಫೋಟೋ ಹಾಕಿದರೂ ಹಸ್ತಮೈಥುನಕ್ಕೆ ಹೋಲಿಕೆ ಮಾಡುತ್ತಾರೆ’; ಕೆಟ್ಟ ಮನಸ್ಥಿತಿಗಳಿಂದ ಬೇಸತ್ತ ನಟಿ

ಸ್ವರಾ ಸೋಶೀಯಲ್​ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಅವರು ಟ್ರೋಲ್​ಗಳ ಬಗ್ಗೆ ತಲೆ ಕೂಡ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲವೊಂದು ವಿಚಾರಗಳು ಮಿತಿಮೀರುತ್ತವೆ. ಅಂಥ ಸಂದರ್ಭದಲ್ಲಿ ಸ್ವರಾ ಕೈಕಟ್ಟಿ ಕೂರುವುದಿಲ್ಲ.

‘ಹೂವಿನ ಫೋಟೋ ಹಾಕಿದರೂ ಹಸ್ತಮೈಥುನಕ್ಕೆ ಹೋಲಿಕೆ ಮಾಡುತ್ತಾರೆ’; ಕೆಟ್ಟ ಮನಸ್ಥಿತಿಗಳಿಂದ ಬೇಸತ್ತ ನಟಿ
‘ಹೂವಿನ ಫೋಟೋ ಹಾಕಿದರೂ ಹಸ್ತಮೈಥುನಕ್ಕೆ ಹೋಲಿಕೆ ಮಾಡುತ್ತಾರೆ’; ಕೆಟ್ಟ ಮನಸ್ಥಿತಿಗಳಿಂದ ಬೇಸತ್ತ ನಟಿ
Edited By:

Updated on: Aug 22, 2021 | 3:32 PM

‘ವೀರೇ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಹಸ್ತಮೈಥುನದ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಸ್ವರಾ ಭಾಸ್ಕರ್. ಈ ದೃಶ್ಯ ಇಟ್ಟುಕೊಂಡು ಸಾಕಷ್ಟು ಟ್ರೋಲ್​ಗಳು ವೈರಲ್​ ಆಗಿದ್ದವು. ಸಿನಿಮಾ ತೆರೆಗೆ ಬಂದು ಮೂರು ವರ್ಷ ಕಳೆದರೂ ಈ ವಿಚಾರದಲ್ಲಿ ಟ್ರೋಲ್​ಗಳು ನಿಂತಿಲ್ಲ. ಇದಕ್ಕೆ ಸಂಬಂಧಿಸಿ ಸ್ವರಾ ಅವರು ಖಡಕ್​ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುವವರಿಗೆ ಅವರು ಬಿಸಿ ಮುಟ್ಟಿಸಿದ್ದಾರೆ.

ಸ್ವರಾ ಸೋಶಿಯಲ್​ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಅವರು ಟ್ರೋಲ್​ಗಳ ಬಗ್ಗೆ ತಲೆ ಕೂಡ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲವೊಂದು ವಿಚಾರಗಳು ಮಿತಿಮೀರುತ್ತವೆ. ಅಂಥ ಸಂದರ್ಭದಲ್ಲಿ ಸ್ವರಾ ಕೈಕಟ್ಟಿ ಕೂರುವುದಿಲ್ಲ. ಟ್ರೋಲ್​ ಮಾಡುವವರಿಗೆ ಬಿಸಿಮುಟ್ಟಿಸುತ್ತಾರೆ. ಈಗ ‘ವೀರೇ ದಿ ವೆಡ್ಡಿಂಗ್’ ವಿಚಾರ ಇಟ್ಟುಕೊಂಡು ಟೀಕೆ ಮಾಡಿದವರಿಗೆ ಸ್ವರಾ ಉತ್ತರಿಸಿದ್ದಾರೆ.

ಸ್ವರಾ ಇನ್‌ಸ್ಟಾಗ್ರಾಮ್‌ ಅಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ರಸ್ತೆಗಳು ಮತ್ತು ರೆಸ್ಟೋರೆಂಟ್‌ಗಳಂತೇ ಸೋಶಿಯಲ್ ಮೀಡಿಯಾ ಕೂಡ ಸಾರ್ವಜನಿಕ ಸ್ಥಳ. ಸಾರ್ವಜನಿಕ ಸ್ಥಳದಲ್ಲಿ ಸಭ್ಯತೆ ಕಾಪಾಡಲಾಗುತ್ತದೆ. ಆದರೆ, ಆನ್​​ಲೈನ್​ನಲ್ಲಿ ಆ ರೀತಿ ಆಗುತ್ತಿಲ್ಲ. ‘ವೀರೇ ದಿ ವೆಡ್ಡಿಂಗ್​’ ತೆರೆಕಂಡ ನಂತರದಲ್ಲಿ ನಾನು ಒಂದು ಹೂವಿನ ಫೋಟೋ ಅಪ್​ಲೋಡ್​ ಮಾಡಿದರೂ ಕೆಲವರು ಅದನ್ನು ಹಸ್ತಮೈಥುನ ಅಥವಾ ಬೆರಳಿಗೆ ಹೋಲಿಕೆ ಮಾಡುತ್ತಿದ್ದಾರೆ’ ಎಂದು ಬೇಸರ ಹೊರ ಹಾಕಿದ್ದಾರೆ ಸ್ವರಾ.

‘ಈ ರೀತಿ ಮಾಡುವುದು ತಪ್ಪು ಮತ್ತು ಲೈಂಗಿಕ ಕಿರುಕುಳ ನೀಡಿದಂತೆ. ಆದರೆ, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎನ್ನುವುದು ನನ್ನ ನಿಯಮ. ನಾನು ಆನ್​ಲೈನ್​ನಲ್ಲಿ ಕಡಿಮೆ ಸಮಯ ಕಳೆಯೋಕೆ ಇಷ್ಟಪಡುವುದು ಇದೇ ಕಾರಣಕ್ಕೆ’ ಎಂದಿದ್ದಾರೆ ಸ್ವರಾ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಇನ್ನಿಬ್ಬರು ಪ್ರಚೋದನಾಕಾರಿ ಟ್ವೀಟ್ ಮಾಡಿದ್ದರು. ಈ ಕುರಿತು ಇತ್ತೀಚೆಗೆ ದೆಹಲಿಯಲ್ಲಿ ದೂರು ದಾಖಲಾಗಿತ್ತು.

‘ದಿ ಸೇಮ್ ಸೆಕ್ಸ್​ ಲವ್​ ಸ್ಟೋರಿ’ ಸಿನಿಮಾದಲ್ಲಿ ಸ್ವರಾ ನಟಿಸಿದ್ದಾರೆ. ಫರಾಜ್​ ಆರಿಫ್​ ಅನ್ಸಾರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಈಗಾಗಲೇ ಸಾಕಷ್ಟು ಸಿನಿಮೋತ್ಸವಗಳಲ್ಲಿ ರಿಲೀಸ್​ ಆಗಿದೆ. ಆದರೆ, ಭಾರತದಲ್ಲಿ ಈ ಚಿತ್ರ ಇನ್ನೂ ತೆರೆಗೆ ಬಂದಿಲ್ಲ.

ಇದನ್ನೂ ಓದಿ: ಗಾಜಿಯಾಬಾದ್ ಘಟನೆ ಬಗ್ಗೆ ಟ್ವೀಟ್: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು

Published On - 3:25 pm, Sun, 22 August 21