ಬಾಲಿವುಡ್ ನಟಿ ತಬು ಅವರಿಗೆ ಈಗ 52 ವರ್ಷ. ಹಾಗಿದ್ದರೂ ಕೂಡ ಅವರು ಮದುವೆ ಆಗಿಲ್ಲ. ಬಣ್ಣದ ಲೋಕದಲ್ಲಿ ಅವರಿಗೆ ತುಂಬ ಬೇಡಿಕೆ ಇದೆ. ಹಲವಾರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ತಬು ಅವರಿಗೆ ಆಪ್ತತೆ ಇದೆ. ಅನೇಕ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ಅಷ್ಟಕ್ಕೂ ತಬು ಅವರು ಇಷ್ಟ ವರ್ಷಗಳು ಕಳೆದರೂ ಮದುವೆ ಆಗದೇ ಇರಲು ಕಾರಣ ಏನು? ಆ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಅಜಯ್ ದೇವಗನ್ ಅವರು ಮಾತನಾಡಿದ್ದರು. ಆ ಸಂದರ್ಶನದ ವಿಡಿಯೋ ತುಣುಕು ಈಗ ಮತ್ತೆ ವೈರಲ್ ಆಗುತ್ತಿದೆ.
‘ದೇ ದೇ ಪ್ಯಾರ್ ದೇ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ತಬು ಮತ್ತು ಅಜಯ್ ದೇವಗನ್ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟಬು ಮದುವೆ ಬಗ್ಗೆ ಪ್ರಸ್ತಾಪ ಆಯಿತು. ತಬು ಯಾಕೆ ಇಂದಿಗೂ ಸಿಂಗಲ್ ಆಗಿದ್ದಾರೆ ಎಂಬ ವಿಷಯಕ್ಕೆ ಅಜಯ್ ದೇವಗನ್ ಅವರು ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ
‘ತಬು ಮದುವೆ ಆಗಬೇಕು ಅಂದರೆ ನೀವು ಹುಡುಗನನ್ನು ಹೇಗೆ ಹುಡುಕುತ್ತೀರಿ? ತಬುಗೆ ಯಾವ ರೀತಿಯ ಹುಡುಗ ಬೇಕು ಅಂತ ನನಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ಉತ್ತರಿಸಿದ್ದೆ. ತಬುಗೆ ನಾನು ಬೇಕು. ಆದರೆ ಆಕೆಗೆ ನಾನು ಸಿಗುವುದಿಲ್ಲ’ ಎಂದು ಹೇಳಿ ಅಜಯ್ ದೇವಗನ್ ಅವರು ನಕ್ಕಿದ್ದರು. ಅವರ ಮಾತು ಕೇಳಿ ತಬು ಕೂಡ ನಗುನಗುತ್ತಲೇ ಹುಸಿ ಕೋಪ ಮಾಡಿಕೊಂಡರು.
ಅಜಯ್ ದೇವಗನ್ ಅವರು ತಮ್ಮ ಮಾತಿಗೆ ಕೂಡಲೇ ಸ್ಪಷ್ಟನೆ ನೀಡಿದರು. ‘ನಾನು ಬೇಕು ಅಂದರೆ, ನನ್ನ ರೀತಿಯ ಹುಡುಗ ಬೇಕು ಅಂತ. ಆದರೆ ಇಡೀ ಪ್ರಪಂಚದಲ್ಲಿ ನನ್ನ ರೀತಿ ಬೇರೆ ಯಾರೂ ಇಲ್ಲ’ ಎಂದು ಅಜಯ್ ದೇವಗನ್ ಹೇಳಿದರು. ‘ನೀವು ಹೇಳಿದ್ದು ನನಗೆ ಅರ್ಥ ಆಯ್ತು’ ಎನ್ನುತ್ತಾ ಅಜಯ್ ದೇವಗನ್ ಕೈಗೆ ತಬು ಕಿಸ್ ಮಾಡಿದರು. ತಬು ಮತ್ತು ಅಜಯ್ ದೇವಗನ್ ಅವರು ಫ್ಯಾಮಿಲಿ ಫ್ರೆಂಡ್ಸ್ ಕೂಡ ಹೌದು. ಅವರಿಬ್ಬರ ಒಡನಾಟ ಹಲವು ವರ್ಷಗಳದ್ದು. ಸಂದರ್ಶನದಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕಥೆ ಕೇವಲ ತಮಾಷೆಯಾಗಿತ್ತು. ಆದರೆ ತಬು ಸಿಂಗಲ್ ಆಗಿ ಉಳಿದುಕೊಳ್ಳಲು ಕಾರಣ ಏನು ಎಂಬುದು ಕಡೆಗೂ ಬಹಿರಂಗ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.