ನಟ ಇಮ್ರಾನ್ ಹಷ್ಮಿ ಅವರು ಒಂದು ಕಾಲದಲ್ಲಿ ಬೋಲ್ಡ್ ಸೀನ್ಗಳನ್ನು ಮಾಡಿಯೇ ಫೇಮಸ್ ಆಗಿದ್ದರು. ‘ಮರ್ಡರ್’, ‘ಆಶಿಕ್ ಬನಾಯಾ ಆಪ್ನೆ’, ‘ಆಕ್ಸರ್’ ಮುಂತಾದ ಸಿನಿಮಾಗಳಲ್ಲಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಂಡು ಹುಡುಗಿಯರ ಮನಸ್ಸು ಗೆದ್ದಿದ್ದರು. ಆ ಪೈಕಿ ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾದ ಟೈಟಲ್ ಟ್ರ್ಯಾಕ್ ಸಿಕ್ಕಾಪಟ್ಟೆ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಆ ಹಾಡಿನ ಬಗ್ಗೆ ಮಾತನಾಡುವಾಗ ನಟಿ ತನುಶ್ರೀ ದತ್ತಾ ಅವರು ನೀಡಿದ ಹೇಳಿಕೆಗೆ ಈಗ ಇಮ್ರಾನ್ ಹಷ್ಮಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2005ರಲ್ಲಿ ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾ ಬಿಡುಗಡೆ ಆಗಿತ್ತು. ಅದರಲ್ಲಿ ತನುಶ್ರೀ ದತ್ತ ಮತ್ತು ಇಮ್ರಾನ್ ಹಷ್ಮಿ ಅವರು ಸಖತ್ ಬೋಲ್ಡ್ ಆಗಿ ನಟಿಸಿದ್ದರು. ಅದರ ಬಗ್ಗೆ ತನುಶ್ರೀ ಇತ್ತೀಚೆಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಟಾಪ್ ನಟಿಯರು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದಾರೆ. ಅಂಥವರಿಗೆ ಯಾರೂ ಏನೂ ಹೇಳುವುದಿಲ್ಲ. ನಾನು ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುತ್ತೆ. ನಾನು ಶಾರ್ಟ್ ಡ್ರೆಸ್ ಧರಿಸಲಿ ಅಥವಾ ಯಾವುದೇ ಸೀನ್ ಮಾಡಲಿ. ಅದು ನಟನೆ ಆಗಿರುತ್ತದೆ. ನನ್ನ ಮತ್ತು ಇಮ್ರಾನ್ ಹಷ್ಮಿ ನಡುವೆ ಯಾವುದೇ ಪರ್ಸನಲ್ ಇರಲಿಲ್ಲ. ನನ್ನ ಮತ್ತು ಇಮ್ರಾನ್ ನಡುವಿನ ಕೆಮಿಸ್ಟ್ರಿ ಅಣ್ಣ-ತಂಗಿ ರೀತಿಯದ್ದು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.
‘ನಿರ್ದೇಶಕರು ಸೀನ್ ವಿವರಿಸಿದಾಗ ತನುಶ್ರೀ ಯಾವ ರೀತಿ ಅರ್ಥ ಮಾಡಿಕೊಂಡಿದ್ದರೋ ನನಗೆ ಗೊತ್ತಿಲ್ಲ. ನನ್ನ ತಲೆಯಲ್ಲಿ ಬೇರೆ ಕಥೆ ಓಡುತ್ತಿತ್ತು. ಅವರ ತಲೆಯಲ್ಲಿ ಬೇರೆ ಕಥೆ ಓಡುತ್ತಿತ್ತು’ ಎಂದು ಇಮ್ರಾನ್ ಹಷ್ಮಿ ಅವರು ಹೇಳಿದ್ದಾರೆ. ಒಂದಲ್ಲಾ ಒಂದು ಕಾರಣಗಳಿಂದ ತನುಶ್ರೀ ದತ್ತ ಅವರು ನ್ಯೂಸ್ ಆಗುತ್ತಲೇ ಇರುತ್ತಾರೆ. ಮೀಟೂ ಅಭಿಯಾನದ ಮೂಲಕವೂ ಅವರು ಸಖತ್ ಸದ್ದು ಮಾಡಿದ್ದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ನಟ ನಾನಾ ಪಾಟೇಕರ್
ಆರಂಭದ ದಿನಗಳಲ್ಲಿ ತನುಶ್ರೀ ದತ್ತ ಅವರಿಗೆ ಸಖತ್ ಬೇಡಿಕೆ ಇತ್ತು. ‘ಆಶಿಕ್ ಬನಾಯಾ ಆಪ್ನೆ’ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಅವರು ಸೈಲೆಂಟ್ ಆದರು. ಕಡೆಕಡೆಗೆ ನಟನೆಯಿಂದಲೇ ದೂರ ಉಳಿದರು. ಆಮೇಲೆ ಅವರು ಮತ್ತೆ ಸುದ್ದಿ ಆಗಿದ್ದೇ ಮೀಟೂ ಅಭಿಯಾನದ ಕಾರಣದಿಂದ. ತನುಶ್ರೀ ಅವರು ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಎರಡು ದಶಕ ಕಳೆಯುತ್ತಿದೆ. ಹಾಗಿದ್ದರೂ ಕೂಡ ಆ ಸಿನಿಮಾದ ಬಗೆಗಿನ ಚರ್ಚೆ ನಿಂತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.