Narendra Modi: ಮೋದಿಯ ಭೇಟಿ ಮಾಡಿದ ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್ ‘ ತಂಡ

|

Updated on: Mar 30, 2023 | 8:22 PM

ಆಸ್ಕರ್ ಗೆದ್ದ ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ತಂಡದ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಡಾಕ್ಯುಮೆಂಟರಿಯನ್ನು ಮೆಚ್ಚಿ ಕೊಂಡಾಡಿದ್ದಾರೆ ಮೋದಿ.

Narendra Modi: ಮೋದಿಯ ಭೇಟಿ ಮಾಡಿದ ಆಸ್ಕರ್ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್  ತಂಡ
ನರೇಂದ್ರ ಮೋದಿ
Follow us on

ಆರ್​ಆರ್​ಆರ್ (RRR) ಸಿನಿಮಾದ ಜನಪ್ರಿಯ ನಾಟು-ನಾಟು (Natu Natu) ಹಾಡಿಗೆ ಆಸ್ಕರ್ ಬಂದಿರುವುದನ್ನು ದೊಡ್ಡದಾಗಿ ಸಂಭ್ರಮಿಸಲಾಗುತ್ತಿದೆ. ಅದೇ ದಿನ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ದಿ ಎಲಿಫೆಂಟ್  ವಿಸ್ಪರರ್ಸ್​ಗೆ (The Elephant Whisperers) ಆಸ್ಕರ್ ಬಂತಾದರೂ ಆರ್​ಆರ್​ಆರ್​ನ ಆಸ್ಕರ್ ಗೆಲುವನ್ನು ಸಂಭ್ರಮಿಸಿದಷ್ಟು ಡಾಕ್ಯುಮೆಂಟರಿಯ ಗೆಲುವನ್ನು ಸಂಭ್ರಮಿಸಲಾಗಿಲ್ಲ. ಅದಕ್ಕೆ ಸಲ್ಲಬೇಕಾದ ಪ್ರಶಂಸೆ ಸಲ್ಲಿಕೆಯಾಗಲಿಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಆಸ್ಕರ್ ಗೆದ್ದ ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ತಂಡವನ್ನು ಭೇಟಿಯಾಗಿದ್ದು, ಮಹಿಳೆಯರ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್, ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ತಂಡಕ್ಕೆ ಸೇರಿದ ಮತ್ತೊಬ್ಬ ಮಹಿಳೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ಆಸ್ಕರ್ ಜೊತೆಗೆ ಮೋದಿಯವರು ಸಹ ಫೋಟೊಕ್ಕೆ ಫೋಸು ನೀಡಿದ್ದಾರೆ.

ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಿನಿಮಾ ತನ್ನ ಅದ್ಭುತ ಸಿನಿಮ್ಯಾಟಿಕ್ ದೃಶ್ಯಗಳು ಹಾಗೂ ಯಶಸ್ಸಿನಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಡಾಕ್ಯುಮೆಂಟರಿ ನಿರ್ಮಾಣ ಮಾಡಿದ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ತಂಡ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದಿದ್ದಾರೆ.

‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಯು ಆನೆಯನ್ನು ಸಾಕುವ ಬೆಳ್ಳಿ ಹಾಗೂ ಬೊಮ್ಮಣ್ಣ ಎಂಬ ದಂಪತಿಯ ಜೀವನವನ್ನು, ಅವರಿಗೆ ಆನೆಗಳ ಬಗೆಗೆ ಇರುವ ಪ್ರೀತಿಯನ್ನು ಸೆರೆಹಿಡಿದಿದೆ. ತಾವು ಸಾಕುವ ಆನೆಗಳನ್ನು ಹೇಗೆ ಅವರು ತಮ್ಮ ಮಕ್ಕಳೆಂದು ನಂಬಿದ್ದಾರೆ, ಜೀವನದ ಭಾಗವಾಗಿ ಸ್ವೀಕರಿಸಿದ್ದಾರೆ, ಆನೆಗಳನ್ನು ಬಿಡಾರಕ್ಕೆ ಒಪ್ಪಿಸುವಾಗ ಅವರು ಅನುಭವಿಸುವ ನೋವುಗಳನ್ನು ಅದ್ಭುತವಾಗಿ ಸೆರೆಹಿಡಿದಿದೆ. ಈ ಡಾಕ್ಯುಮೆಂಟರಿಯು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುತ್ತಿದೆ.

ದಿ ಎಲಿಫೆಂಟ್ ವಿಸ್ರರ್ಸ್​ನಲ್ಲಿ ಕಾಣಿಸಿಕೊಂಡಿರುವ ಬೆಳ್ಳಿ ಹಾಗೂ ಬೊಮ್ಮಣ್ಣ ದಂಪತಿಗೆ ಸರ್ಕಾರಗಳು ಹಲವು ಇನಾಮುಗಳನ್ನು ನೀಡಿದೆ. ತಮಿಳುನಾಡು ಸಿಎಂ ಸ್ಟಾಲಿನ್, ಈ ದಂಪತಿಗಳನ್ನು ಭೇಟಿಯಾಗಿ ಅವರಿಗೆ ನಗದು ಬಹುಮಾನದ ಜೊತೆಗೆ ಮನೆ ಕಟ್ಟಿಕೊಳ್ಳಲು ದೊಡ್ಡ ಮೊತ್ತವನ್ನು ಸರ್ಕಾರದ ವತಿಯಿಂದ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ