ವಿವಾದದ ಮೂಲಕವೇ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಬೇಟೆ ಮುಂದುವರಿದಿದೆ. ಸತತ 11 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಮಾಯಿ ಆಗಿದೆ. ಅಚ್ಚರಿ ಎಂದರೆ 2ನೇ ಭಾನುವಾರ ಈ ಸಿನಿಮಾಗೆ ಅತಿ ಹೆಚ್ಚು ಹಣ ಹರಿದುಬಂದಿದೆ. ಮೇ 14ರಂದು ಬರೋಬ್ಬರಿ 23 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್ (The Kerala Story Collection) 136.74 ಕೋಟಿ ರೂಪಾಯಿ ತಲುಪಿದೆ. ನಟಿ ಅದಾ ಶರ್ಮಾ (Adah Sharma) ಅವರು ಈ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದ್ದಾರೆ. ಮೊದಲ ದಿನ ಸಾಧಾರಣ ಗಳಿಕೆ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಭರ್ಜರಿ ಸಾಧನೆ ಮಾಡಿದೆ. 2ನೇ ವಾರದಲ್ಲಿ ಸ್ಟಾರ್ ಹೀರೋಗಳ ಚಿತ್ರಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಮಾಡುತ್ತಿರುವುದು ‘ದಿ ಕೇರಳ ಸ್ಟೋರಿ’ ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿರುವುದು ಅನುಕೂಲ ಆಗಿದೆ.
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.
10ನೇ ದಿನ: 23.75 ಕೋಟಿ ರೂ.
#TheKeralaStory crosses HALF-CENTURY in *Weekend 2* [Fri to Sun]… Records its *highest single day* number on [second] Sun… Inches closer to ₹ 150 cr, speeding towards ₹ 200 cr… [Week 2] Fri 12.35 cr, Sat 19.50 cr, Sun 23.75 cr. Total: ₹ 136.74 cr. #India biz. #Boxoffice… pic.twitter.com/lMq2xT8lm0
— taran adarsh (@taran_adarsh) May 15, 2023
ಹಲವು ವರ್ಷಗಳಿಂದ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರಿಗೆ ಇಷ್ಟು ದೊಡ್ಡ ಗೆಲುವು ಸಿಕ್ಕಿರುವುದು ಇದೇ ಮೊದಲು. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಶಾಲಿನಿ ಉನ್ನಿಕೃಷ್ಣನ್ ಅಲಿಯಾಸ್ ಫಾತಿಮಾ ಎಂಬ ಪಾತ್ರದಲ್ಲಿ ಅವರ ಅಭಿನಯ ಗಮನ ಸೆಳೆದಿದೆ. ಈ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಅವರಿಗೆ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಆಫರ್ ಬರಲು ಆರಂಭಿಸಿವೆ.
ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾಗೆ ಅಪಘಾತ; ನಿರ್ದೇಶಕನಿಗೂ ಗಾಯ
ಕೇರಳದಲ್ಲಿ ನಡೆದಿತ್ತು ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲಾಗಿದೆ. ಟೀಸರ್ ಬಿಡುಗಡೆ ಆದಾಗಲೇ ಈ ಚಿತ್ರ ವಿವಾದ ಸೃಷ್ಟಿ ಮಾಡಿತ್ತು. ಶಾಂತಿ ಕಾಪಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾದ ಪ್ರದರ್ಶನವನ್ನು ಬ್ಯಾನ್ ಮಾಡಲಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.