Madhuri Dixit Birthday: ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ; ಮಾಧುರಿ ದೀಕ್ಷಿತ್ ಬದುಕು ಬದಲಿಸಿತ್ತು ಆ ಸಾಂಗ್

ಮಾಧುರಿ ದೀಕ್ಷಿತ್​ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದು 1984ರಲ್ಲಿ ತೆರೆಗೆ ಬಂದ ‘ಅಬೋದ್’​ ಸಿನಿಮಾ ಮೂಲಕ. ಆಗ ಅವರಿಗೆ 17 ವರ್ಷ ವಯಸ್ಸು. 1998ರಲ್ಲಿ ರಿಲೀಸ್ ಆದ ‘ತೇಜಾಬ್’ ಸಿನಿಮಾ ಅವರ ಖ್ಯಾತಿಯನ್ನು ಹೆಚ್ಚಿಸಿತು.

Madhuri Dixit Birthday: ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ; ಮಾಧುರಿ ದೀಕ್ಷಿತ್ ಬದುಕು ಬದಲಿಸಿತ್ತು ಆ ಸಾಂಗ್
ಮಾಧುರಿ ದೀಕ್ಷಿತ್
Follow us
ರಾಜೇಶ್ ದುಗ್ಗುಮನೆ
|

Updated on:May 15, 2023 | 7:50 AM

ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ ಇಂದು (ಮೇ15) ಜನ್ಮದಿನದ ಸಂಭ್ರಮ. ಅವರು ಭಾರತ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ. ಕೇವಲ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ‘ಏಕ್​ ದೋ ತೀನ್​..’ ಸಾಂಗ್​ನಲ್ಲಿ ಕುಣಿದ ಬಳಿಕ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿತು. ಸ್ಟಾರ್ ಹೀರೋಗಿಂತಲೂ ಅವರು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಮಾಧುರಿ ದೀಕ್ಷಿತ್​ಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್​​ ಸುಂದರಿಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ಮಾಧುರಿ ದೀಕ್ಷಿತ್​ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದು 1984ರಲ್ಲಿ ತೆರೆಗೆ ಬಂದ ‘ಅಬೋದ್’​ ಸಿನಿಮಾ ಮೂಲಕ. ಆಗ ಅವರಿಗೆ 17 ವರ್ಷ ವಯಸ್ಸು. 1998ರಲ್ಲಿ ರಿಲೀಸ್ ಆದ ‘ತೇಜಾಬ್’ ಸಿನಿಮಾ ಅವರ ಖ್ಯಾತಿಯನ್ನು ಹೆಚ್ಚಿಸಿತು. ಆ ಚಿತ್ರದ ‘ಏಕ್​ ದೋ ತೀನ್​..’ ಹಾಡು ಸೂಪರ್​ ಹಿಟ್​ ಆಯಿತು. ಈ ಹಾಡಲ್ಲಿ ಅವರು ಡ್ಯಾನ್ಸ್ ಮಾಡಿದ್ದು ಎಲ್ಲರಿಗೂ ಇಷ್ಟವಾಯಿತು. ರಾತ್ರಿ ಬೆಳಗಾಗುವದರೊಳಗೆ ಅವರು ದೇಶಾದ್ಯಂತ ಖ್ಯಾತಿ ಗಳಿಸಿದರು. ಇಂದಿಗೂ ಆ ಹಾಡು ಅನೇಕರ ಫೇವರಿಟ್​ ಆಗಿ ಉಳಿದುಕೊಂಡಿದೆ. ‘ತೇಜಾಬ್’​ ಚಿತ್ರದ ನಂತರ ಮಾಧುರಿ ದೀಕ್ಷಿತ್​ ಅವರ ಸ್ಟಾರ್​ಗಿರಿ ದೊಡ್ಡ ಮಟ್ಟಕ್ಕೆ ಏರಿತು. ಸ್ಟಾರ್​ ನಟರಿಗಿಂತಲೂ ಅವರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ವಿಶೇಷ.

1994ರಲ್ಲಿ ಬಂದ ‘ಹಮ್​ ಆಪ್ಕೆ ಹೈ ಕೌನ್’​ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್​ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲಿ ಅವರು ಸಲ್ಲುಗಿಂತಲೂ ಹೆಚ್ಚಿನ ಸಂಭಾವನೆ ಪಡೆದರು ಎನ್ನಲಾಗಿದೆ. ಮಾಧುರಿ ದೀಕ್ಷಿತ್​ಗೆ ಜನಪ್ರಿಯತೆ ಬಂದ ಸಂದರ್ಭದಲ್ಲಿ ಜನಪ್ರಿಯ ನಟಿ ಶ್ರೀದೇವಿ ಸ್ಟಾರ್​ ಕಲಾವಿದೆಯಾಗಿ ಮಿಂಚುತ್ತಿದ್ದರು. ಅವರಿಗೆ ಮಾಧುರಿ ದೀಕ್ಷಿತ್ ಪೈಪೋಟಿ ನೀಡುತ್ತಿದ್ದರು. ನಟನೆಗೆ ಮಹತ್ವ ಇರುವ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದರು.

ಇದನ್ನೂ ಓದಿ: Madhuri Dixit: ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಕಮೆಂಟ್​; ನೆಟ್​ಫ್ಲಿಕ್ಸ್​ಗೆ ಲೀಗಲ್ ನೋಟಿಸ್

ಇಂದಿಗೂ ಅನೇಕ ರಿಯಾಲಿಟಿ ಶೋಗಳಿಗೆ ಅವರು ಜಡ್ಜ್ ಆಗಿ ತೆರಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಅನೇಕ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:49 am, Mon, 15 May 23