The Kerala Story: 136 ಕೋಟಿ ರೂಪಾಯಿಗೆ ಏರಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್​; 2ನೇ ಭಾನುವಾರ ಬರೋಬ್ಬರಿ 23 ಕೋಟಿ ರೂ. ಗಳಿಕೆ

The Kerala Story Box Office Collection: ಹಲವು ವರ್ಷಗಳಿಂದ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರಿಗೆ ಇಷ್ಟು ದೊಡ್ಡ ಗೆಲುವು ಸಿಕ್ಕಿರುವುದು ಇದೇ ಮೊದಲು.

The Kerala Story: 136 ಕೋಟಿ ರೂಪಾಯಿಗೆ ಏರಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್​; 2ನೇ ಭಾನುವಾರ ಬರೋಬ್ಬರಿ 23 ಕೋಟಿ ರೂ. ಗಳಿಕೆ
‘ದಿ ಕೇರಳ ಸ್ಟೋರಿ’ ಸಿನಿಮಾ ಪೋಸ್ಟರ್​
Follow us
|

Updated on: May 15, 2023 | 3:35 PM

ವಿವಾದದ ಮೂಲಕವೇ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾದ ಬಾಕ್ಸ್​ ಆಫೀಸ್​ ಬೇಟೆ ಮುಂದುವರಿದಿದೆ. ಸತತ 11 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಮಾಯಿ ಆಗಿದೆ. ಅಚ್ಚರಿ ಎಂದರೆ 2ನೇ ಭಾನುವಾರ ಈ ಸಿನಿಮಾಗೆ ಅತಿ ಹೆಚ್ಚು ಹಣ ಹರಿದುಬಂದಿದೆ. ಮೇ 14ರಂದು ಬರೋಬ್ಬರಿ 23 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್​ (The Kerala Story Collection) 136.74 ಕೋಟಿ ರೂಪಾಯಿ ತಲುಪಿದೆ. ನಟಿ ಅದಾ ಶರ್ಮಾ (Adah Sharma) ಅವರು ಈ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿವರವನ್ನು ಹಂಚಿಕೊಂಡಿದ್ದಾರೆ. ಮೊದಲ ದಿನ ಸಾಧಾರಣ ಗಳಿಕೆ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಭರ್ಜರಿ ಸಾಧನೆ ಮಾಡಿದೆ. 2ನೇ ವಾರದಲ್ಲಿ ಸ್ಟಾರ್​ ಹೀರೋಗಳ ಚಿತ್ರಕ್ಕಿಂತಲೂ ಹೆಚ್ಚಿನ ಕಲೆಕ್ಷನ್​ ಮಾಡುತ್ತಿರುವುದು ‘ದಿ ಕೇರಳ ಸ್ಟೋರಿ’ ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿರುವುದು ಅನುಕೂಲ ಆಗಿದೆ.

ಇದನ್ನೂ ಓದಿ
Image
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
Image
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Image
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
Image
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​:

1ನೇ ದಿನ: 8.03 ಕೋಟಿ ರೂ.

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

9ನೇ ದಿನ: 19.50 ಕೋಟಿ ರೂ.

10ನೇ ದಿನ: 23.75 ಕೋಟಿ ರೂ.

ಹಲವು ವರ್ಷಗಳಿಂದ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರಿಗೆ ಇಷ್ಟು ದೊಡ್ಡ ಗೆಲುವು ಸಿಕ್ಕಿರುವುದು ಇದೇ ಮೊದಲು. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಶಾಲಿನಿ ಉನ್ನಿಕೃಷ್ಣನ್​ ಅಲಿಯಾಸ್​ ಫಾತಿಮಾ ಎಂಬ ಪಾತ್ರದಲ್ಲಿ ಅವರ ಅಭಿನಯ ಗಮನ ಸೆಳೆದಿದೆ. ಈ ಚಿತ್ರ ಸೂಪರ್​ ಹಿಟ್​ ಆಗುತ್ತಿದ್ದಂತೆಯೇ ಅವರಿಗೆ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಆಫರ್​ ಬರಲು ಆರಂಭಿಸಿವೆ.

ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾಗೆ ಅಪಘಾತ; ನಿರ್ದೇಶಕನಿಗೂ ಗಾಯ

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಕಾಂಟ್ರವರ್ಸಿ ಕಥೆ:

ಕೇರಳದಲ್ಲಿ ನಡೆದಿತ್ತು ಎನ್ನಲಾದ ಮತಾಂತರ ಮತ್ತು ಲವ್​ ಜಿಹಾದ್​ ಘಟನೆಗಳನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲಾಗಿದೆ. ಟೀಸರ್​ ಬಿಡುಗಡೆ ಆದಾಗಲೇ ಈ ಚಿತ್ರ ವಿವಾದ ಸೃಷ್ಟಿ ಮಾಡಿತ್ತು. ಶಾಂತಿ ಕಾಪಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾದ ಪ್ರದರ್ಶನವನ್ನು ಬ್ಯಾನ್​ ಮಾಡಲಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!