ಬಾಲಿವುಡ್ನಲ್ಲಿ ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಹುತೇಕ ಯಾವ ನಟಿಯೂ ನೋ ಎನ್ನುವುದಿಲ್ಲ. ಈ ಸೂಪರ್ ಸ್ಟಾರ್ಗಳ ಜೊತೆ ನಟಿಸಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ಕಪೂರ್ ಅವರು ಈವರೆಗೂ ಖಾನ್ಗಳ ಸಿನಿಮಾದಲ್ಲಿ ನಟಿಸಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಈಗ ತಿಳಿಸಿದ್ದಾರೆ. ಶ್ರದ್ಧಾ ಕಪೂರ್ ಅವರಿಗೆ ‘ಸ್ತ್ರೀ 2’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ.
ಶ್ರದ್ಧಾ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟು ಹಲವು ವರ್ಷ ಕಳೆದಿವೆ. ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಸ್ತ್ರೀ 2’ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ, ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ಇರುವ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರ ಹಂಚಿಕೊಂಡಿದ್ದಾರೆ.
ಸ್ಟಾರ್ ಹೀರೋಗಳ ಸಿನಿಮಾ ಎಂಬುದಕ್ಕಿಂತಲೂ ಹೆಚ್ಚಾಗಿ ತಮ್ಮ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು ಶ್ರದ್ಧಾ ಕಪೂರ್ ಅವರಿಗೆ ಮುಖ್ಯವಾಗುತ್ತದೆ. ಈ ಹಿಂದೆ ಆಫರ್ಗಳು ಬಂದಾಗ ತಮ್ಮ ಪಾತ್ರಕ್ಕೆ ಪ್ರಮುಖ್ಯತೆ ಇಲ್ಲ ಎಂಬುದನ್ನು ತಿಳಿದು ಅವರು ರಿಜೆಕ್ಟ್ ಮಾಡಿದ್ದರು. ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಎಂಬುದಕ್ಕೆ ಇದೇ ಉತ್ತರ.
ಇದನ್ನೂ ಓದಿ: ರಾಹುಲ್ ಮೋದಿ ಜೊತೆ ಶ್ರದ್ಧಾ ಕಪೂರ್ ಬ್ರೇಕಪ್? ನಟಿಯ ಲವ್ ಸ್ಟೋರಿಗೆ ಪೂರ್ಣವಿರಾಮ
‘ಹಲವು ಬಾರಿ ಆಫರ್ ಬರುತ್ತದೆ. ಆದರೆ ಆ ಪಾತ್ರ ಎಗ್ಸೈಟಿಂಗ್ ಮಾಡದಿದ್ದರೆ ಅಥವಾ ನಮ್ಮೊಳಗಿನ ಕಲಾವಿದೆಗೆ ಅದು ಚಾಲೆಂಜಿಂಗ್ ಎನಿಸದೇ ಇದ್ದರೆ ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ತುಂಬ ಕಾಳಜಿ ವಹಿಸುತ್ತೇನೆ’ ಎಂದು ಶ್ರದ್ಧಾ ಕಪೂರ್ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಶ್ರದ್ಧಾ ಕಪೂರ್ ಅವರಿಗೆ 9.14 ಕೋಟಿ ಫಾಲೋವರ್ಸ್ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.