ಟೈಗರ್ ಶ್ರಾಫ್​​ ಡಯಟ್ ಹೇಗಿರುತ್ತೆ? ಖರ್ಚಾಗೋ ಹಣವೆಷ್ಟು?

| Updated By: ಮಂಜುನಾಥ ಸಿ.

Updated on: Mar 02, 2025 | 8:08 AM

Tiger Shroff Diet plan: ಬಾಲಿವುಡ್​ನ ಅತ್ಯಂತ ಫಿಟ್ ಮತ್ತು ಫ್ಲೆಕ್ಸಿಬಲ್ ನಟ ಟೈಗರ್ ಶ್ರಾಫ್. ಫಿಟ್​ನೆಸ್ ಬಗ್ಗೆ ಅತೀವ ಕಾಳಜಿವಹಿಸುತ್ತಾರೆ ಈ ನಟ. ತಪ್ಪದೆ ವ್ಯಾಯಾಮ ಮಾಡುವ ಜೊತೆಗೆ ಅಪರೂಪದ ಡಯಟ್ ಸಹ ಫಾಲೋ ಮಾಡುತ್ತಾರೆ. ಅಂದಹಾಗೆ ಟೈಗರ್ ಶ್ರಾಫ್, ಡಯಟ್​ಗೆ ಎಷ್ಟು ಹಣ ಖರ್ಚು ಮಾಡುತ್ತಾರೆ ಗೊತ್ತೆ?

ಟೈಗರ್ ಶ್ರಾಫ್​​ ಡಯಟ್ ಹೇಗಿರುತ್ತೆ? ಖರ್ಚಾಗೋ ಹಣವೆಷ್ಟು?
Tiger Shroff
Follow us on

ಟೈಗರ್ ಶ್ರಾಫ್ ಅವರಿಗೆ ಇಂದು (ಮಾರ್ಚ್ 2) ಬರ್ತ್​ಡೇ ಸಂಭ್ರಮ. ಅವರು 35ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಟೈಗರ್ ಅವರು ವಿವಾಹದ ಬಗ್ಗೆ ಆಲೋಚಿಸಿಲ್ಲ. ಟೈಗರ್ ಶ್ರಾಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ವಿಶೇಷ ಎಂದರೆ ಟೈಗರ್ ಶ್ರಾಫ್ ಅವರು ಫಿಟ್ನೆಸ್​ಗೆ ಆದ್ಯತೆ ನೀಡುತ್ತಾರೆ. ಅವರು ಸದಾ ಸಿಕ್ಸ್ ಹಾಗೂ ಏಟ್ ಪ್ಯಾಕ್​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟೈಗರ್ ಶ್ರಾಫ್ ಅವರ ಡಯಟ್ ಏನು? ಇದಕ್ಕೆ ಖರ್ಚಾಗೋ ಹಣ ಎಷ್ಟು? ಎಂಬ ಬಗ್ಗೆ ಇಲ್ಲಿದೆ ವಿವರ.

ಟೈಗರ್ ಶ್ರಾಫ್ ಅವರು ಖ್ಯಾತ ನಟ ಜಾಕಿ ಶ್ರಾಫ್ ಅವರ ಮಗ. ಟೈಗರ್ ನಿತ್ಯ ಎರಡು ಗಂಟೆ ಜಿಮ್ ಮಾಡುತ್ತಾರೆ. ಇದಕ್ಕೆ ಸೂಕ್ತವಾದ ಆಹಾರವನ್ನು ಕೂಡ ಅವರು ಸೇವನೆ ಮಾಡುತ್ತಾರೆ. ಇದರಿಂದ ಅವರು ಇಷ್ಟು ಫಿಟ್ ಆಗಿರೋಕೆ ಸಾಧ್ಯವಾಗಿದೆ. ಟೈಗರ್ ಶ್ರಾಫ್ ಅವರ ಆಹಾರ ಕ್ರಮದ ಬಗ್ಗೆ ನೋಡೋಣ.

ಟೈಗರ್​ ಶ್ರಾಫ್ ಅವರು ಮುಂಜಾನೆ ಎದ್ದ ತಕ್ಷಣ ಹೆಚ್ಚು ಪ್ರೋಟಿನ್ ಹಾಗೂ ಫೈಬರ್ ಇರುವ ಆಹಾರ ಸೇವನೆ ಮಾಡುತ್ತಾರೆ. ಆಮ್ಲೆಟ್, ಬಾದಾಮಿ ಹಾಗೂ ಮೊಟ್ಟೆ ತಿನ್ನುತ್ತಾರೆ. ಮೀನು, ತರಕಾರಿ ತಿಂದು ಗ್ರೀನ್ ಟೀ ಕುಡಿಯುತ್ತಾರೆ. ಕೆಲ ಗಂಟೆ ಬಿಟ್ಟು ಪ್ರೋಟಿನ್ ಶೇಖ್ ಹಾಗೂ ಡ್ರೈ ಫ್ರ್ಯುಟ್ಸ್ ಸೇವನೆ ಮಾಡುತ್ತಾರೆ.

ಮಧ್ಯಾಹ್ನ ಊಟಕ್ಕೆ ಚಿಕನ್ ಅಥವಾ ಮೀನು ತಿನ್ನುತ್ತಾರೆ. ಇದರ ಜೊತೆಗೆ ಬ್ರೌನ್ ರೈಸ್ ಇರುತ್ತದೆ. ಬೇಯಿಸಿದ ತರಕಾರಿಗಳು ಕೂಡ ಇರುತ್ತವೆ. ಇದು ಸಾಕಷ್ಟು ಪ್ರೋಟೀನ್ ಮತ್ತು ವಿಟಮಿನ್​ಗಳೊಂದಿಗೆ ಪೋಷಣೆ ನೀಡುತ್ತದೆ. ಟೈಗರ್ ಶ್ರಾಫ್ ಅವರು ನಿತ್ಯ ಸಂಜೆ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ಸಂದರ್ಭದಲ್ಲಿ ಪ್ರೋಟಿನ್ ಶೇಖರ್ ಕುಡಿಯುತ್ತಾರೆ. ಇದರ ಜೊತೆಗೆ ಬಾಳೆ ಹಣ್ಣು ಸೇವನೆ ಮಾಡುತ್ತಾರೆ.

ಇದನ್ನೂ ಓದಿ:ಫಿಟ್ನೆಸ್ ಉತ್ಸಾಹಿಗಳಿಗೆ ಸ್ಫೂರ್ತಿ ತುಂಬುವ ಟೈಗರ್ ಶ್ರಾಫ್​ ಫೋಟೋಗಳು

ವರ್ಕೌಟ್ ಮುಗಿದ ಬಳಿಕ ಪ್ರೋಟಿನ್ ಶೇಕ್ ಕುಡಿಯುತ್ತಾರೆ. ರಾತ್ರಿ ಊಟಕ್ಕೆ ಬ್ರೋಕೋಲಿ, ಹಸಿರು ಅವರೇಕಾಯಿ ರೀತಿಯ ಹಸಿರು ತರಕಾರಿಗಳ ಸೇವನೆ ಮಾಡುತ್ತಾರೆ. ಇದು ರಾತ್ರಿಯ ಊಟ. ನಿತ್ಯ ಅವರು 7-8 ಲೀಟರ್ ನೀರು ಕುಡಿಯುತ್ತಾರೆ. ಈ ಮೂಲಕ ದೇಹದಲ್ಲಿ ನೀರಿನ ಕೊರತೆ ಆಗದಂತೆ ಅವರು ನೋಡಿಕೊಳ್ಳುತ್ತಾರೆ.

ಸಿನಿಮಾ ವಿಚಾರದ ಬಗ್ಗೆ ನೋಡೋದಾದರೆ ಟೈಗರ್ ಶ್ರಾಫ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರು ಸದ್ಯ ‘ಭಾಗಿ 4’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಎ. ಹರ್ಷ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ